ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಐಐಟಿ ಸ್ಥಾಪನೆ, ಕೇಂದ್ರದ ತಂಡ ನಗರಕ್ಕೆ ಭೇಟಿ

|
Google Oneindia Kannada News

ಮೈಸೂರು, ಆ.27 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಲಿದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈಸೂರಿನಲ್ಲಿ ಐಐಟಿ ಸ್ಥಾಪನೆ ಮಾಡಲು ಲಭ್ಯವಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲು ಕೇಂದ್ರದ ತಂಡ ಇಂದು ನಗರಕ್ಕೆ ಭೇಟಿ ನೀಡಲಿದೆ.

ಕರ್ನಾಟಕ ಸರ್ಕಾರ ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮೂರು ಜಿಲ್ಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲು ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿದೆ. [ಮೈಸೂರಲ್ಲಿ ಐಐಟಿ : ಪ್ರತಾಪ್ ಸಿಂಹ, ಸ್ಮೃತಿ ಇರಾನಿ ಭೇಟಿ]

mysuru

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಬ್ರಹ್ಮಣ್ಯಂ ನೇತೃತ್ವದ ತಂಡ, ಆ.27ರ ಗುರುವಾರ ಮೈಸೂರಿಗೆ ಭೇಟಿ ನೀಡಲಿದೆ. ಮೈಸೂರಿನಲ್ಲಿ ಐಐಟಿ ಸ್ಥಾಪನೆಗೆ ಲಭ್ಯವಿರುವ ಸೌಲಭ್ಯಗಳನ್ನು ಜಿಲ್ಲಾಧಿಕಾರಿ ಸಿ.ಶಿಖಾ ಅವರು ವಿವರಿಸಲಿದ್ದಾರೆ. ತಂಡಕ್ಕೆ 52 ಪುಟಗಳ ವರದಿಯನ್ನು ನೀಡಲಿದ್ದಾರೆ. [ಐಐಟಿ : 3 ಜಿಲ್ಲೆಗಳತ್ತ ಬೊಟ್ಟು ತೋರಿಸಿದ ಸಿದ್ದರಾಮಯ್ಯ]

ತಾತ್ಕಾಲಿಕ ಸ್ಥಳ ನಿಗದಿ : ಐಐಟಿ ಸ್ಥಾಪನೆ ಮಾಡಲು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಸುಮಾರು 6 ಕಿ.ಮೀ.ದೂರದಲ್ಲಿರುವ ಸ್ಥಳವನ್ನು ಗುರುತಿಸಲಾಗಿದೆ. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತಾಂಡವಪುರದಲ್ಲಿ ತಾತ್ಕಾಲಿಕವಾಗಿ ಐಐಟಿ ಸ್ಥಾಪಿಸಬಹುದು ಎಂದು ಜಿಲ್ಲಾಡಳಿತ ಕೇಂದ್ರದ ತಂಡಕ್ಕೆ ವಿವರಣೆ ನೀಡಲಿದೆ.[ಐಐಟಿ ಸ್ಥಾಪನೆಗೆ ಒತ್ತಾಯಿಸಿ ರಾಯಚೂರು ಬಂದ್]

ಶಾಶ್ವತ ಸ್ಥಳ : ಐಐಟಿಯನ್ನು ಶಾಶ್ವತವಾಗಿ ಸ್ಥಾಪಿಸಲು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳವನ್ನು ಜಿಲ್ಲಾಡಳಿತ ಗುರುತಿಸಿದೆ. ಸುಮಾರು 499 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಪ್ರದೇಶದ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ತಂಡಕ್ಕೆ ನೀಡಲಿದ್ದಾರೆ.

English summary
Human resource development ministry additional secretary (technical education) R. Subramanya lead high-level team of experts and officials will inspect the land identified for establishing the proposed Indian Institute of Technology (IIT) in Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X