ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಹೊಳೆ: ಆನೆ ದಾಳಿಗೆ ಅರಣ್ಯಾಧಿಕಾರಿ ಬಲಿ

By Yashaswini
|
Google Oneindia Kannada News

ಮೈಸೂರು, ಮಾರ್ಚ್ 03: ನಾಗರಹೊಳೆ ಹುಲಿ ಯೋಜನೆ ನಿದೇಶಕ ಎಸ್. ಮಣಿಕಂಠನ್ ಆನೆ ದಾಳಿಗೆ ಸಿಲುಕಿ ಶನಿವಾರ ಮೃತಪಟ್ಟಿದ್ದಾರೆ.

ಹಾಸನ : ಅಜ್ಜಿ ಮನೆಗೆ ಬಂದಿದ್ದ ಬಾಲಕ ಆನೆ ದಾಳಿಗೆ ಬಲಿಹಾಸನ : ಅಜ್ಜಿ ಮನೆಗೆ ಬಂದಿದ್ದ ಬಾಲಕ ಆನೆ ದಾಳಿಗೆ ಬಲಿ

ದಕ್ಷ ಅರಣ್ಯಾಧಿಕಾರಿ ಎಂದು ಗುರುತಿಸಿಕೊಂಡಿದ್ದ ಎಸ್ ಮಣಿಕಂಠನ್ ಆನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಡಿಬಿ ಕುಪ್ಪೆ ವಲಯದ ಬಳ್ಳೆ ಅರಣ್ಯದಲ್ಲಿ ಜಿಪಿಎಸ್ ಲೊಕೇಶನ್ ಕಾರ್ಯದಲ್ಲಿ ತೊಡಗಿದ್ದಾಗ ಆನೆ ಏಕಾಏಕಿ ದಾಳಿ ಮಾಡಿದೆ. ಅನಿರೀಕ್ಷಿತ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಮಣಿಕಂಠನ್, ಗಂಭೀರವಾಗಿ ಗಾಯಗೊಂಡರು.

IFS officer Manikanthan killed in an Elephant attack

ಎಚ್ ಡಿ ಕೋಟೆಯ ಸರಕಾರಿ ಆಸ್ಪತ್ರೆಗೆ ಕರೆ ತರುವಷ್ಷರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಣಿಕಂಠನ್ ಮತ್ತವರ ತಂಡ ಜೀಪು ನಿಲ್ಲಿಸಿ ಹುಲಿ ಗಣತಿಗೆ ಸಂಬಂಧಿಸಿದ ಜಿಪಿಎಸ್ ಲೊಕೇಶನ್ ಕಾರ್ಯದಲ್ಲಿ ತೊಡಗಿದ್ದರು. ಪೊದೆಯಿಂದ ಏಕಾಏಕಿ ಬಂದ ಆನೆ ಬಿಳಿ ಅಂಗಿ ಧರಿಸಿದ್ದ ಮಣಿಕಂಠನ್ ಅವರ ಮೇಲೆ ಎರಗಿದೆ. ಜತೆಗಿದ್ದ ಆರ್ ಎಫ್ ಒ ಸುಬ್ರಮಣ್ಯ ಓಡಿ ಪಾರಾಗಿದ್ದಾರೆ.

English summary
Conservator of forest and Nagarahole Tiger conservation project director Manikanthan killed in an elaphant attack at DB kuppe forest on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X