ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗವಿಕಲರ ಮಾಸಿಕ ಪಿಂಚಣಿಗೂ ಐಡೆಂಟಿಟಿ ಕಾರ್ಡ್ ಕಡ್ಡಾಯ

|
Google Oneindia Kannada News

ಮೈಸೂರು, ಜುಲೈ 11: ಮಾಸಿಕ ಪಿಂಚಣಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರು ಇನ್ನು ಮುಂದೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಆಧಾರ್ ಮಾದರಿಯ ಯುಡಿಐಡಿ ವಿಶಿಷ್ಟ ಗುರುತಿನ ಚೀಟಿ (ಗಣಕೀಕೃತ ಗುರುತಿನ ಚೀಟಿ) ಹೊಂದುವುದು ಕಡ್ಡಾಯವಾಗಿದೆ.

ಜಿಲ್ಲೆಯ ಅಂಗವಿಕಲರು ಆದಷ್ಟು ಬೇಗ ಈ ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಅಂಗವಿಕಲರ ಕಲ್ಯಾಣ ಆಯುಕ್ತರಾಗಿ ವಿ.ಎಸ್‌ ಬಸವರಾಜ್‌ ನೇಮಕಅಂಗವಿಕಲರ ಕಲ್ಯಾಣ ಆಯುಕ್ತರಾಗಿ ವಿ.ಎಸ್‌ ಬಸವರಾಜ್‌ ನೇಮಕ

ಈ ಹಿಂದೆ ಅಂಗವಿಕಲರಿಗೆ ಇಲಾಖೆಯಿಂದ ಗುರುತಿನ ಚೀಟಿ ಕೊಡಲಾಗುತ್ತಿತ್ತು. ಈ ಕಾರ್ಡ್‌ಗಳಿಂದ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಕಷ್ಟವಾಗಿತ್ತು. ನೈಜ ಫಲಾನುಭವಿಗಳ ಬದಲಿಗೆ ಬೇರೊಬ್ಬರು ಲಾಭ ಪಡೆಯುತ್ತಿದ್ದರು. ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ನಕಲು ಮಾಡಲಾಗದ ಗುರುತಿನ ಚೀಟಿಯನ್ನು ಬಳಕೆಗೆ ತಂದಿದೆ. 6 ವರ್ಷ ಮೇಲ್ಪಟ್ಟ ಎಲ್ಲ ಅಂಗವಿಕಲರಿಗೆ ಈ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ಡಿಸೆಂಬರ್‌ನಿಂದಲೇ ಈ ನೂತನ ಗುರುತಿನ ಚೀಟಿ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಅವರಲ್ಲಿ ಇಲ್ಲಿಯವರೆಗೆ 5 ಸಾವಿರ ಜನರು ಆನ್‌ಲೈನ್‌ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ.

Identity Card mandatory for the monthly pension for disabled

ಈಗಾಗಲೇ ಅಂಗವಿಕಲ ಗುರುತಿನ ಚೀಟಿ ಹೊಂದಿದವರು ವೆಬ್‌ಸೈಟ್‌ ಮೂಲಕ ಆಧಾರ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರ, ಮಾಸಾಶನ ಪ್ರಮಾಣ ಪತ್ರ, ಗುರುತಿನ ಚೀಟಿ, ಭಾವಚಿತ್ರಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೂತನ ಕಾರ್ಡ್‌ ಮಾಡಿಸಿಕೊಳ್ಳದಿದ್ದರೆ ಇನ್ನು ಮುಂದೆ ಪಿಂಚಣಿ ಕೂಡಾ ರದ್ದಾಗಲಿದೆ.

ರೆಸ್ಟೋರೆಂಟ್‌ಗಳಲ್ಲಿ ವಿಕಲಚೇತನರಿಗೆ ರ‍್ಯಾಂಪ್ ಸೌಲಭ್ಯ! ರೆಸ್ಟೋರೆಂಟ್‌ಗಳಲ್ಲಿ ವಿಕಲಚೇತನರಿಗೆ ರ‍್ಯಾಂಪ್ ಸೌಲಭ್ಯ!

ಈ ಕಾರ್ಡ್‌ ನೀಡುವುದಕ್ಕಾಗಿ ತಾಲ್ಲೂಕು ವೈದ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ. ಅದು ನೀಡುವ ಪ್ರಮಾಣ ಪತ್ರವನ್ನು ಆಧರಿಸಿ ಹೆಸರು ನೋಂದಾಯಿಸಬಹುದಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಈ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

English summary
The new udid Identity Card is mandatory for the monthly pension for the disabled. In Mysuru city around 5 thousand people applied online to get a pension.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X