ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ ಕಾರಣಕ್ಕೂ ದಸರಾಗೆ ಹೋಗುವುದಿಲ್ಲ; ಶ್ರೀನಿವಾಸ್ ಪ್ರಸಾದ್

By ಮೈಸೂರು ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್ 21: ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದರೂ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವುದಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

ರಾಜೀನಾಮೆ ವದಂತಿ ಶುದ್ಧ ಸುಳ್ಳು ಎಂದ ಸಂಸದ ಶ್ರೀನಿವಾಸ್ ಪ್ರಸಾದ್ರಾಜೀನಾಮೆ ವದಂತಿ ಶುದ್ಧ ಸುಳ್ಳು ಎಂದ ಸಂಸದ ಶ್ರೀನಿವಾಸ್ ಪ್ರಸಾದ್

ಇಂದು ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾದ ಅವಶ್ಯಕತೆ ಇರಲಿಲ್ಲ. ಆಹಾರ ಮೇಳ ಮಾಡಿ ತಿಂದು ತೇಗುವುದು, ಯುವ ದಸರಾ ನಡೆಸಿ ಕುಣಿದು ಕುಪ್ಪಳಿಸುವುದು ಸಂಪ್ರದಾಯಿಕ ದಸರಾವಲ್ಲ. ಇವನ್ನೆಲ್ಲ ಬಿಡಬೇಕು" ಎಂದು ಅಸಮಾಧಾನ ಹೊರಹಾಕಿದರು.

I Wont Participate In Dasara Said Srinivas Prasad

ಅನರ್ಹ ಶಾಸಕರಿಗೆ ಸಿಗಲಿದೆ ಸಚಿವ ಸ್ಥಾನ: ಸುಳಿವು ನೀಡಿದ ಶ್ರೀನಿವಾಸ್ ಪ್ರಸಾದ್ಅನರ್ಹ ಶಾಸಕರಿಗೆ ಸಿಗಲಿದೆ ಸಚಿವ ಸ್ಥಾನ: ಸುಳಿವು ನೀಡಿದ ಶ್ರೀನಿವಾಸ್ ಪ್ರಸಾದ್

"ಸರಳವಾಗಿ ದಸರಾ ಆಚರಿಸುವಂತೆ ನಾನು ಹೇಳಿದ್ದೆ. ಆದರೆ ಉಸ್ತುವಾರಿ ಸಚಿವರು ಕೇಳಲಿಲ್ಲ. ದಸರಾ ಕಾರ್ಯಕ್ರಮಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾನು ಕೂಡ ಓರ್ವ ಜನಪ್ರತಿನಿಧಿ. ಆದರೆ ದಸರಾ ಕಾರ್ಯಕ್ರಮಗಳಿಗೆ ನಾನು ಯಾವ ಕಾರಣಕ್ಕೂ ಭಾಗವಹಿಸುವುದಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ" ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

English summary
"I was told to celebrate Dasara in simple way, but the minister in charge didn't listen. I wont participate in Dasara programme" said srinivas prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X