ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ:ಎಚ್.ಸಿ. ಮಹದೇವಪ್ಪ ಸ್ಪಷ್ಟನೆ

|
Google Oneindia Kannada News

ಮೈಸೂರು, ಮಾರ್ಚ್ 1: ಈ ಹಿಂದೆ ಕೋಲಾರ ಹಾಗೂ ಚಾಮರಾಜನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಚ್.ಸಿ. ಮಹದೇವಪ್ಪ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೀಗ ಖುದ್ದು ಮಹದೇವಪ್ಪ ಅವರೇ ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ನನ್ನ ಹೆಸರು ಹಾಗೂ ನಾನು ಸ್ಪರ್ಧೆ ಮಾಡುವ ವಿಚಾರವಾಗಿ ಹಲವು ಕಡೆ ಕೇಳಿಬರುತ್ತಿದೆ. ಚುನಾವಣೆ ಬಂದಾಗ ಹೆಸರು ಕೇಳಿ ಬರುವುದು ಸಹಜ. ಆದರೆ ನನ್ನ ಸ್ಪರ್ಧೆ ವಿಚಾರ ನಮ್ಮ ಪಕ್ಷದ ಹೈಕಮಾಂಡ್ ಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ : ಸೀಟು ಹಂಚಿಕೆ ಬಗ್ಗೆ ಮಿತ್ರರಲ್ಲಿ ಮೂಡಿಲ್ಲ ಒಮ್ಮತಲೋಕಸಭಾ ಚುನಾವಣೆ : ಸೀಟು ಹಂಚಿಕೆ ಬಗ್ಗೆ ಮಿತ್ರರಲ್ಲಿ ಮೂಡಿಲ್ಲ ಒಮ್ಮತ

ಸದ್ಯಕ್ಕೆ ನನಗೆ ಚುನಾವಣೆಗೆ ಸ್ಪರ್ಧೆ ಮಾಡುವ ಆಸೆಯೂ ಇಲ್ಲ. ನಾನು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇನೆ. ನಾನು ಪಕ್ಷದ ಕಾರ್ಯಕರ್ತ ಎಂದಿದ್ದಾರೆ.

I will not contest in this Lok Sabha election:H.C Mahadevappa

ನಮ್ಮ ಪಕ್ಷದಲ್ಲಿ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಒಟ್ಟಾಗಿಯೇ ಮಾತನಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು.

English summary
Former MLA Dr.H.C Mahadevappa said that I will not contest in this Lok Sabha election. I will work for party candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X