ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಂತ ಮನೆಯಿಲ್ಲದ ಏಕೈಕ ಸಂಸದ ನಾನು:ಪ್ರತಾಪ್ ಸಿಂಹ

|
Google Oneindia Kannada News

ಮೈಸೂರು, ಮಾರ್ಚ್ 27:ದೇಶದ 543 ಸಂಸದರಲ್ಲಿ ಸ್ವಂತ ಮನೆಯಿಲ್ಲದ ಏಕೈಕ ಸಂಸದ ನಾನು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರ ಸಲ್ಲಿಸಿದ ಬಳಿಕ ಮೈಸೂರಿನ ಹುಣಸೂರಿನ ಊಯಿಗೊಂಡನಹಳ್ಳಿಯಲ್ಲಿ ತಮ್ಮ ಮೊದಲ ದಿನದ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ರಾಜಕಾರಣವನ್ನು ಎಲ್ಲರೂ ಮಾಡುತ್ತಾರೆ. ಆದರೆ ನನಗೆ 5 ವರ್ಷ ಅಧಿಕಾರ ಕೊಟ್ಟಿದ್ದೀರಾ. ನಾನು ನಿಮಗೆ ಕೇಳುವುದು ಮತ್ತೆ 5 ವರ್ಷ. ಅಷ್ಟರಲ್ಲಿ ನಿಮ್ಮ ಮನೆಗೆ ವಿದ್ಯುತ್, ಗ್ಯಾಸ್, ಆಯುಷ್ಮಾನ್ ಕಾರ್ಡ್ ಖಂಡಿತ ದೊರಕಲಿದೆ ಎಂದು ಹೇಳಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು?ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು?

I am the only MP in the country do not have a own home:Pratap Simha

ಕಾಂಗ್ರೆಸ್ಸಿಗರ ಮನೆ ನೋಡಿ ಎಂಥ ಮನೆ ಕಟ್ಟಿಸಿಕೊಂಡಿದ್ದಾರೆ. ಇರುವ 543 ಸಂಸದರಲ್ಲಿ ಸ್ವಂತ ಮನೆ ಇಲ್ಲದ ಏಕೈಕ ಸಂಸದ ಎಂದರೆ ಅದು ನಾನು. ಯಾಕಂದ್ರೆ ನಾನು ಊರಲ್ಲಿ ಸಗಣಿ ತೆಗೆದು, ಹೋಟೆಲ್‌ಗೆ ಹಾಲು ಹಾಕಿ ಇಲ್ಲಿಯವರೆಗೂ ಬಂದವನು. ಬೇರೆ ಸರ್ಕಾರಗಳಿಗೆ ಯಾಕೆ ಅನಿಸಿಲ್ಲ ರೈತರಿಗೆ 6 ಸಾವಿರ ಕೊಡ್ಬೇಕು ಅಂತ? ನಮ್ಮ ಸರ್ಕಾರಕ್ಕೆ ರೈತರ ಪರ ಒಲವಿದೆ. ಹಾಗಾಗಿ ಈ ಬಾರಿ ನನಗೆ ಮತ ಹಾಕಿ ಗೆಲ್ಲಿಸುವಂತೆ ಸಂಸದ ಪ್ರತಾಪ್‌ ಸಿಂಹ ಮನವಿ‌ ಮಾಡಿದರು.

English summary
MP Pratap Simha started his first day election campaign at Hunsur in Mysuru district. He said that, I am the only MP in the country do not have a own home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X