ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ಭವಿಷ್ಯ ನುಡಿಯಲು ನಾನು ಜ್ಯೋತಿಷ್ಯ ಓದಿಲ್ಲ; ನಟ ಉಪೇಂದ್ರ

|
Google Oneindia Kannada News

ಮೈಸೂರು, ಜುಲೈ 1: ಯಾವುದೇ ವ್ಯಕ್ತಿ ಕೇಂದ್ರಿತ ಅಥವಾ ಪಕ್ಷ ಕೇಂದ್ರಿತ ಚುನಾವಣೆ ಎಂದಿಗೂ ನಡೆಯಬಾರದು. ವಿಚಾರಗಳ ವಿನಿಮಯದ ಮೇಲೆ ಚುನಾವಣೆ ನಡೆಯಬೇಕು ಎಂದು ಚಿತ್ರ ನಟ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನಲ್ಲಿ ಉಪ್ಪಿ ಪ್ರಚಾರ:ರಿಯಲ್ ಸ್ಟಾರ್ ಸರಳತೆಗೆ ಮಾರು ಹೋದ ಕರಾವಳಿಗರು ಮಂಗಳೂರಿನಲ್ಲಿ ಉಪ್ಪಿ ಪ್ರಚಾರ:ರಿಯಲ್ ಸ್ಟಾರ್ ಸರಳತೆಗೆ ಮಾರು ಹೋದ ಕರಾವಳಿಗರು

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಬಂದು ದೇಶವನ್ನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಎಂದರೆ ನಾವು ಓಟು ಹಾಕುತ್ತೇವೆ. ಯಾವ ರೀತಿ ಮಾಡುತ್ತೀರ ಎಂದು ಮರುಪ್ರಶ್ನೆಯನ್ನೂ ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ, ವಿಚಾರಗಳನ್ನು ವಿಮರ್ಶಿಸಿ ಚುನಾವಣೆ ನಡೆಸುವ ಕಾಲ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 ಉಪೇಂದ್ರ ರಾಜಕೀಯಕ್ಕೆ ಬರಲು ಕಾರಣ ಏನು? ಉಪೇಂದ್ರ ರಾಜಕೀಯಕ್ಕೆ ಬರಲು ಕಾರಣ ಏನು?

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದೆ. 37 ಸ್ಥಾನ ಪಡೆದ ಪಕ್ಷ ಮೈತ್ರಿ ಮಾಡಿಕೊಂಡು ಸಂವಿಧಾನ ಬದ್ಧವಾಗಿಯೇ ಬಹುಮತ ಸ್ಪಷ್ಟಪಡಿಸಿ ಅಧಿಕಾರದ ಗದ್ದುಗೆ ಏರಿದೆ. ಇದರಲ್ಲಿ ತಪ್ಪೇನೂ ಇಲ್ಲ. ಕೆಲಸಗಳ ಬಗ್ಗೆ ಜನ ಹಾಗೂ ಮಾಧ್ಯಮಗಳು ಮಾತನಾಡಬೇಕು ಎಂದರು.

I am not an astrologer to tell future of government said upendra

ಈ ಹಿಂದಿನ ಹಾಗೂ ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳ ಕೆಲಸಗಳು ತೃಪ್ತಿ ನೀಡದ ಹಿನ್ನೆಲೆಯಲ್ಲಿ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಲಾಗಿದೆ. ಸರ್ಕಾರ ಬೀಳಲಿದೆ ಎಂದು ಹೇಳುವುದಕ್ಕೆ ನಾನು ಜ್ಯೋತಿಷ್ಯ ಓದಿಲ್ಲ. ಸುಮಲತಾ ಅವರಿಗೆ ಒಂದು ಸಿದ್ಧಾಂತವಿದೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದರು. ಆದ್ದರಿಂದ ನನಗೂ ಅವರಿಗೂ ಹೋಲಿಕೆ ಮಾಡಬಾರದು. ವೈಯಕ್ತಿಕ ಧ್ಯೇಯೋದ್ದೇಶಗಳನ್ನು ಈಗಾಗಲೇ ನನ್ನ ಸಿನಿಮಾಗಳಲ್ಲಿ ತೋರಿಸಿದ್ದೇನೆ. ಹಾಗಾಗಿ ಪ್ರಜಾಕೀಯದ ಕುರಿತು ಸಿನಿಮಾ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

English summary
Actor upendra expressed his views on JDS- Congress coalition government. person-centered or party-centered elections should not be held. Elections should be held on the exchange of ideas he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X