ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂತ್ರಿ ಆಗುವಾಸೆ ನನಗೇನಿಲ್ಲ: ಸಂಸದ ಪ್ರತಾಪ್ ಸಿಂಹ

|
Google Oneindia Kannada News

ಮೈಸೂರು, ಮೇ 28 : ಕೇಂದ್ರದಲ್ಲಿ ಮಂತ್ರಿಯಾಗಬೇಕೆನ್ನುವ ಆಸೆಯಿಂದ ರಾಜಕಾರಣಕ್ಕೆ ನಾನು ಕಾಲಿಟ್ಟಿಲ್ಲ. ಉತ್ತಮ ಕೆಲಸ ಮಾಡಬೇಕೆಂದು ಈ ಕ್ಷೇತ್ರಕ್ಕೆ ಬಂದಿದ್ದೇನೆ. ಮಂತ್ರಿ ಆಗೋ ಆಸೆ ನನಗೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಜೊತೆ ಪಾರ್ಲಿಮೆಂಟಿನಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿದೆ. ನನಗೆ ಪತ್ರಕರ್ತನ ಸಂವೇದನೆ ಇದೆ, ಅಂತರಂಗದಲ್ಲಿ ನಾನು ಈಗಲೂ ಪತ್ರಕರ್ತ. ನಾನೊಬ್ಬ ಟಿಪಿಕಲ್ ರಾಜಕಾರಣಿ ಅಲ್ಲ. ನಾನು ಕೆಲಸ ಮಾಡಲಷ್ಟೇ ಇಲ್ಲಿಗೆ ಬಂದೆ. ಮಂತ್ರಿ ಆಸೆ ಇಲ್ಲವೇ ಇಲ್ಲ. ನನಗಿಂತ ಶ್ರೀನಿವಾಸ್ ಪ್ರಸಾದ್ ಹಿರಿಯರಿದ್ದು, ಅವರಿಗೆ ಮಂತ್ರಿಗಿರಿ ಸಿಕ್ಕರೆ ನಾನು ಖುಷಿ ಪಡುತ್ತೇನೆ ಎಂದು ಹೇಳಿದರು.

ಇಬ್ಬರಿಗೂ ಪ್ರಾತಿನಿಧ್ಯ ಸಿಗಬೇಕು: ಶಾಸಕ ಎ.ರಾಮದಾಸ್ ಇಬ್ಬರಿಗೂ ಪ್ರಾತಿನಿಧ್ಯ ಸಿಗಬೇಕು: ಶಾಸಕ ಎ.ರಾಮದಾಸ್

ಇಡೀ ಸರ್ಕಾರವನ್ನು ಸಿದ್ದರಾಮಯ್ಯ ತಮ್ಮ ವಶದಲ್ಲಿಯೇ ಇಟ್ಟುಕೊಂಡವರು. ನನ್ನ ಸೋಲಿಸಲು ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ತಮಗೆ ಬೇಕಾದ ಅಭ್ಯರ್ಥಿಯನ್ನು ಮೈಸೂರು ಕೊಡಗು ಕ್ಷೇತ್ರಕ್ಕೆ ಹಾಕಿದ್ದರು. ಆದರೆ ನನ್ನ ಸೋಲಿಸಲು ಸಾಧ್ಯವಾಗಲಿಲ್ಲ. ಮೋದಿ ಅಲೆಯ ಮುಂದೆ ಹಣ ಬಲ, ತೋಳ್ಬಲ ಯಾವುದೂ ನಡೆಯಲಿಲ್ಲ ಎಂದರು.

I am not an aspirant of central minister MP Pratap simha clarifies

ಕಾಂಗ್ರೆಸ್, ಜೆಡಿಎಸ್ ನಲ್ಲಿರೋ ಮೋದಿ ಅಭಿಮಾನಿಗಳು ನನಗೆ ಮತ ಹಾಕಿದ್ದಾರೆ. ಹೀಗಾಗಿ ನನಗೆ ಮತ ಹಾಕಿದ ಕಾಂಗ್ರೆಸ್, ಜೆಡಿಎಸ್ ನವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಗೆಲುವಿಗೆ ಸಂಘಪರಿವಾರ ಬೆನ್ನೆಲುಬಾಗಿ ಕೆಲಸ ಮಾಡಿದೆ. ಹಾಗಾಗಿ ಮತದಾರರು, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಹಾರಾಜರನ್ನು ಬಿಟ್ಟರೆ ಮೈಸೂರಿನಲ್ಲಿ ಅತಿಹೆಚ್ಚು ಅಂತರದಿಂದ ನಾನು ಗೆದ್ದಿದ್ದೇನೆ. 1.38, 637 ಮತಗಳ ಅಂತರದಿಂದ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಸೋತ್ರೆ ಅದು ನನ್ನ ಸೋಲು ಎಂದು ಯಡಿಯೂರಪ್ಪ ಹೇಳಿದ್ದರು. ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಅವರಿಗೆ ನಾನು ಅಭಾರಿ ಎಂದರು.

ಒಕ್ಕಲಿಗ ಮತಗಳಿಂದ ಗೆದ್ದರೇ ಪ್ರತಾಪ್ ಸಿಂಹ? ಒಕ್ಕಲಿಗ ಮತಗಳಿಂದ ಗೆದ್ದರೇ ಪ್ರತಾಪ್ ಸಿಂಹ?

ನಾನು ಪ್ರಕಾಶ್ ರೈ ಅಭಿಮಾನಿ. ಎಲ್ಲರಿಗೂ ಸೋಲಿನ ನೋವು ಇರುತ್ತದೆ. ಪ್ರಕಾಶ್ ರೈ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನಡೆ ಇರಬಹುದು. ಆದರೆ ಅವರ ಚಿತ್ರರಂಗದ ಜೀವನಕ್ಕೆ ಶುಭವಾಗಲಿ ಅಂತ ಹಾರೈಸುತ್ತೇನೆ. ನಟನೆಯ ವಿಚಾರದಲ್ಲಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಟನೆಗೆ ನಾನು ಅಭಿಮಾನಿ. ಆದರೇ ಅವರ ಸೈದ್ಧಾಂತಿಕ ವಿಚಾರಗಳಿಗೆ ನಮ್ಮ ವಿರೋಧ ಇದೆ. ಮೋದಿ, ಅಮಿತ್ ಷಾ ಬಗ್ಗೆ ಸಭ್ಯತೆ ಮೀರಿ ಮಾತನಾಡಿದ್ದರು. ಆಗ ನಾನು ಕಟುವಾಗಿ ಟೀಕಿಸಿದ್ದೆ. ಈಗ ಅವರು ಚುನಾವಣೆ ನಿಂತು ಸೋತಿದ್ದಾರೆ. ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ ಎಂದರು.

ಪ್ರತಾಪ್ ಸಿಂಹ ಗೆಲ್ಲಲು, ವಿಜಯ್ ಶಂಕರ್ ಸೋಲಲು ಕಾರಣವೇನು? ಪ್ರತಾಪ್ ಸಿಂಹ ಗೆಲ್ಲಲು, ವಿಜಯ್ ಶಂಕರ್ ಸೋಲಲು ಕಾರಣವೇನು?

ಈ ಬಾರಿ ವಿಶ್ವ ಯೋಗ ದಿನಕ್ಕೆ ಮೈಸೂರಿಗೆ ನರೇಂದ್ರ ಮೋದಿ ಅವರನ್ನ ಕರೆತರುವ ಆಸೆ ಇದೆ. ನಾಳೆ ನಾನು ದೆಹಲಿಗೆ ಮೋದಿ ಅವರನ್ನ ಭೇಟಿ ಮಾಡಲು ಹೋಗುತ್ತಿದ್ದೇನೆ. ಅವರನ್ನ ವಿಶ್ವ ಯೋಗ ದಿನಕ್ಕೆ ಮೈಸೂರಿಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

English summary
I am not interested in central minister seat. I've come to this field to work fine. "I do not want to be a minister," Pratap Singh said. I love work with our great leader Narendra modi he added
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X