ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ನೇರ ಮಾತನ್ನು ದುರಹಂಕಾರ ಎನ್ನುತ್ತಿದ್ದಾರೆ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಮೇ 22: ನಾನು ನೇರವಾಗಿ ಮಾತನಾಡುತ್ತೇನೆ ಹಾಗಾಗಿ ನನ್ನನ್ನು ಕೆಲವರು ದುರಹಂಕಾರಿ ಎನ್ನುತ್ತಾರೆ, ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೈಸೂರಿನ 'ನೃಪತುಂಗ ವಿಜ್ಞಾನ-ವಾಣಿಜ್ಯ ಪದವಿಪೂರ್ವ ಕಾಲೇಜಿನ' ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನದು ಹಳ್ಳಿ ಭಾಷೆ, ನೇರ ಮಾತು, ಇದು ಕೆಲವು ಸೋಗಲಾಡಿಗಳಿಗೆ ದುರಹಂಕಾರದಂತೆ ಕಾಣುತ್ತದೆ ಎಂದರು.

ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು

ಯಾರು ಸ್ವಾಭಿಮಾನಿಗಳಾಗಿರುತ್ತಾರೋ ಅವರಿಗೆ ನನ್ನ ಮಾತು ಹಿಡಿಸುತ್ತದೆ, ಯಾರು ನಿರಭಿಮಾನಿಗಳಾಗಿರ್ತಾರೋ ಅವರಿಗೆ ಇದೆಲ್ಲಾ ಹಿಡಿಸುವುದಿಲ್ಲ, ಕೆಳ ಜಾತಿಯಲ್ಲಿ ಹುಟ್ಟಿದವರು, ಬಡವರೆಲ್ಲರೂ ಸ್ವಾಭಿಮಾನಿಗಳಾಗಿಯೇ ಇರಬೇಕೆಂಬುದು ನನ್ನ ಆಸೆ ಎಂದು ಸಿದ್ದರಾಮಯ್ಯ ಹೇಳಿದರು.

'ಕೆಳಜಾತಿಯರು, ಬಡವರು ಸ್ವಾಭಿಮಾನಿಗಳಾಗಿರಿ'

'ಕೆಳಜಾತಿಯರು, ಬಡವರು ಸ್ವಾಭಿಮಾನಿಗಳಾಗಿರಿ'

ಕೆಳಜಾತಿಯವರು, ಬಡವರು ಸ್ವಾಭಿಮಾನವನ್ನು ಬಿಟ್ಟರೆ ಅದು ಗುಲಾಮಗಿರಿ ಆಗುತ್ತದೆ ಎಂದು ಸಿದ್ದರಾಮಯ್ಯ ಕೆಲವು ಉದಾಹರಣೆಗಳ ಮೂಲಕ ಸಮಾಜವಾದವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ನಾನು ಮೌಡ್ಯ ನಿಷೇಧ ಕಾಯ್ದೆ ತಂದೆ ಎಂದು ನನ್ನನ್ನು ಹಿಂದೂ ವಿರೋಧಿ, ಲಿಂಗಾಯತ ವಿರೋಧಿ ಎಂದು ಕರೆದರು ಎಂದು ಸಿದ್ದರಾಮಯ್ಯ ಬೇಸರಿಸಿಕೊಂಡರು.

ಮೈತ್ರಿ ನಾಯಕರ ದಿಢೀರ್ ಸಭೆ: ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ? ಮೈತ್ರಿ ನಾಯಕರ ದಿಢೀರ್ ಸಭೆ: ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ?

ಸರ್ಕಾರಿ ಶಾಲೆಯಲ್ಲಿ ಆಂಗ್ಲಭಾಷೆ ಬೇಡ: ಸಿದ್ದರಾಮಯ್ಯ

ಸರ್ಕಾರಿ ಶಾಲೆಯಲ್ಲಿ ಆಂಗ್ಲಭಾಷೆ ಬೇಡ: ಸಿದ್ದರಾಮಯ್ಯ

ಸರ್ಕಾರಿ ಶಾಲೆಗಳ ಆರಂಭದ ಬಗ್ಗೆ ನನ್ನ ಸ್ಪಷ್ಟ ವಿರೋಧವಿದೆ ಎಂದ ಸಿದ್ದರಾಮಯ್ಯ, ಪೋಷಕರಿಗೆ ಆಂಗ್ಲ ಭಾಷೆ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಮಕ್ಕಳು ಮಾತೃ ಭಾಷೆಯಲ್ಲಿ ಕಲಿಯುವುದು ಹೆಚ್ಚು ಸೂಕ್ತ ಎಂದು ಅಧ್ಯಯನಗಳು ಕೂಡ ಹೇಳುತ್ತಿವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ? ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ?

ಎಸ್‌ಎಸ್‌ಎಲ್‌ಸಿವರೆಗೂ ನಾನೇ ಟಾಪರ್: ಸಿದ್ದರಾಮಯ್ಯ

ಎಸ್‌ಎಸ್‌ಎಲ್‌ಸಿವರೆಗೂ ನಾನೇ ಟಾಪರ್: ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ತಮ್ಮ ಶಾಲಾ ದಿನಗಳ ನೆನಪು ಮಾಡಿಕೊಂಡ ಸಿದ್ದರಾಮಯ್ಯ, ಎಸ್‌ಎಸ್‌ಎಲ್‌ಸಿ ವರೆಗೂ ನಾನೇ ಟಾಪರ್ ಆಗಿದ್ದೆ, ಆ ನಂತರ ಸೆಕೆಂಡ್ ಪಿಯುಸಿಯಲ್ಲಿ ಸೈನ್ಸ್ ಓದಿದೆ, ಅಲ್ಲಿ ಸೆಕೆಂಡ್ ಕ್ಲಾಸ್ ಪಡೆದೆ, ಬಿಎಸ್‌ಸಿ ಮಾಡಿದೆ ಆ ನಂತರ ಒಂದು ವರ್ಷ ಊರಿನಲ್ಲಿ ವ್ಯವಸಾಯ ಮಾಡಿದೆ.

'ಎಲ್‌ಎಲ್‌ಬಿ ಮಾಡದೇ ಇದ್ದಿದ್ದರೆ ಸಿಎಂ ಆಗುತ್ತಿರಲಿಲ್ಲ'

'ಎಲ್‌ಎಲ್‌ಬಿ ಮಾಡದೇ ಇದ್ದಿದ್ದರೆ ಸಿಎಂ ಆಗುತ್ತಿರಲಿಲ್ಲ'

ವ್ಯವಸಾಯ ಮಾಡಿದ ನಂತರ ಬಂದು ಎಲ್‌ಎಲ್‌ಬಿ ಮಾಡಿದೆ ಎಂದರು. ನಾನು ಎಲ್‌ಎಲ್‌ಬಿ ಮಾಡದೇ ಹೋಗಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಸಹ ಅವರು ಈ ಸಂದರ್ಭದಲ್ಲಿ ಹೇಳಿದರು. ತಮಗೆ ಎಂಬಿಬಿಎಸ್‌ ಮಾಡುವ ಆಸೆ ಇದ್ದುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.

English summary
Siddaramaiah said I am a stright talker so some people call me i have attitude. He talked in Mysuru and said some people brand as anti hindu for bringing anti superstition bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X