ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಹುಡುಗಿಗೆ ಆಪಲ್ ಕಂಪೆನಿ ಸೇರುವ ಆಸೆ!

|
Google Oneindia Kannada News

ಮೈಸೂರು, ಮೇ.13 : ಮೈಸೂರಿನ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿನಿ ಬಿ.ಯು. ಹೈಮಾವತಿ ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 99, ಕನ್ನಡದಲ್ಲಿ 100, ಗಣಿತದಲ್ಲಿ 97, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.

ಸೋಮವಾರ ಪ್ರಕಟಗೊಂಡ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಮೈಸೂರಿನ ನಿತ್ಯಾ ಸುರಭಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದ್ದರೆ, ಬಿ.ಯು.ಹೈಮಾವತಿ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಫಲಿತಾಂಶ ಮೈಸೂರು ಜಿಲ್ಲೆಗೆ ಡಬ್ಬಲ್ ಖುಷಿ ನೀಡಿದೆ. [ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ]

Mysore

ವಕೀಲರಾಗಿರುವ ಬಿ.ಕೆ. ಉದಯಕುಮಾರ್ ಹಾಗೂ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್. ಗೌರಮ್ಮ ಅವರ ಏಕೈಕ ಪುತ್ರಿಯಾಗಿರುವ ಹೈಮಾವತಿ ಅವರಿಗೆ ಆಪೆಲ್ ಸಂಸ್ಥೆ ಮುಖ್ಯಸ್ಥ ಸ್ಟೀವ್ ಜಾಬ್ಸ್ ಅವರೇ ಸ್ಫೂರ್ತಿಯಂತೆ. ಭವಿಷ್ಯದಲ್ಲಿ ಆಪೆಲ್ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂಬ ಗುರಿಯನ್ನು ಅವರು ಹೊಂದಿದ್ದಾರೆ. [SSLC ಫಲಿತಾಂಶದ Highlights]

ತಮ್ಮ ಭವಿಷ್ಯದ ಕನಸುಗಳ ಬಗ್ಗೆ ಮಾತನಾಡಿದ ಹೈಮಾವತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬುದು ನನ್ನ ಆಸೆ. ಈಗ ಬಂದಿರು ಉತ್ತಮ ಅಂಕ ಹೆಚ್ಚು ಸಾಧನೆ ಮಾಡಲು ಸ್ಫೂರ್ತಿ ತುಂಬಿದೆ ಎಂದು ಹೇಳಿದರು.

ಪಿಯುಸಿಯಲ್ಲಿ ಪಿಸಿಎಂಇ ಆಯ್ಕೆ ಮಾಡಿಕೊಂಡು ನಂತರ ಮೆಕ್ಯಾನಿಕಲ್ ಪ್ರಾಸ್ತಿಟಿಕ್ಸ್ ಓದಬೇಕು ಎಂಬುದು ನನ್ನ ಕನಸು ಎಂದು ಹೇಳಿದರು. ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಸ್ಟೀವ್ ಜಾಬ್ಸ್ ಹುಟ್ಟುಹಾಕಿದ ಆ್ಯಪೆಲ್ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂಬುದು ನನ್ನ ಕನಸಾಗಿದೆ ಎಂದು ಹೈಮಾವತಿ ಅವರು ಸಂತಸ ಹಂಚಿಕೊಂಡಿದ್ದಾರೆ. ನಮ್ಮ ಕಡೆಯಿಂದ ಹೈಮಾವತಿ ಅವರಿಗೆ ಆಲ್ ದಿ ಬೆಸ್ಟ್.

ಅಂದಹಾಗೆ ಮೇ 8ರಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸದ್ವಿದ್ಯಾ ಕಾಲೇಜಿನ ವಸುಧಾ ಅವರು 600ಕ್ಕೆ 594 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದ್ದರು. ಸದ್ಯ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲೂ ಸದ್ವಿದ್ಯಾ ಶಾಲೆ ಮೂರನೇ ಸ್ಥಾನ ಪಡೆದೆ. [ವಸುಧಾ ಸಂದರ್ಶನ ಓದಿ]

English summary
B.U.Hymavathi one of the topper of Sadvidya High School Mysore in Karnataka SSLC board examination 2014 results. Having scored 625 out of 620. Hymavathi takes absolute pride and excitement in sharing her views about her success story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X