ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಣಸೂರು ವಿಧಾನಸಭೆ ಚುನಾವಣೆ: ಎಚ್. ವಿಶ್ವನಾಥ್‌ಗೆ ಸೋಲಿನ ಕಹಿ

|
Google Oneindia Kannada News

ಮೈಸೂರು, ಡಿಸೆಂಬರ್ 9: ಈ ಬಾರಿಯ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಹುಣಸೂರು ವಿಧಾನಸಭೆ ಕೂಡ ಒಂದು. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಮತ್ತು ಹಿರಿಯ ಮುಖಂಡ ಎಚ್. ವಿಶ್ವನಾಥ್, ಈ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಸಿಡಿದೆದ್ದು, ಜೆಡಿಎಸ್ ಸೇರಿದ್ದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಆದರೆ ಅವರಿಗೆ ಮತದಾರನ ರಕ್ಷೆ ದೊರಕಿಲ್ಲ.

ಹುಣಸೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಅನರ್ಹ ಶಾಸಕರ ಎಚ್. ವಿಶ್ವನಾಥ್ ಅವರ ಹಾದಿ ಇಲ್ಲಿ ಸುಗಮವಾಗಿರಲ್ಲ. ಕಾಂಗ್ರೆಸ್‌ನ ಎಚ್‌.ಪಿ ಮಂಜುನಾಥ್ ಮತ್ತು ಜೆಡಿಎಸ್‌ನ ದೇವರಹಳ್ಳಿ ಸೋಮಶೇಖರ್ ನಡುವೆ ನಿಕಟ ಪೈಪೋಟಿ ಇತ್ತು. ಹಿರಿಯ ನಾಯಕ ವಿಶ್ವನಾಥ್ ಅವರಿಗೆ ಹೆಚ್ಚು ಪ್ರತಿಷ್ಠೆಯ ಚುನಾವಣೆಯಾಗಿದೆ. ವಿಶ್ವನಾಥ್ ಅವರನ್ನು ಗೆಲ್ಲಿಸುವಲ್ಲಿ ಸಫಲವಾದರೆ ಬಿಜೆಪಿ ಕೂಡ ಇಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ ಎಂಬ ಲೆಕ್ಕಾಚಾರದಲ್ಲಿತ್ತು. ಆದರೆ ಎಚ್. ವಿಶ್ವನಾಥ್ ಹೀನಾಯ ಸೋಲು ಅನುಭವಿಸಿದ್ದಾರೆ. ಈ ಮೂಲಕ ಉಪ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ಪಡೆಯುವ ಅವರ ಕನಸು ಛಿದ್ರವಾಗಿದೆ.

ಯಲ್ಲಾಪುರ ಉಪ ಚುನಾವಣೆ: ಶಿವರಾಂ ಹೆಬ್ಬಾರ್ ಭಾರಿ ಮುನ್ನಡೆಯಲ್ಲಾಪುರ ಉಪ ಚುನಾವಣೆ: ಶಿವರಾಂ ಹೆಬ್ಬಾರ್ ಭಾರಿ ಮುನ್ನಡೆ

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಜಯಗಳಿಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಎರಡನೆಯ ಸ್ಥಾನ ಪಡೆಯಲಿದ್ದಾರೆ. ಎಚ್. ವಿಶ್ವನಾಥ್ ಮೂರನೇ ಸ್ಥಾನಕ್ಕೆ ಕುಸಿಯಲಿದ್ದಾರೆ. ಇದು ನಿಜವಾದರೆ ಎಚ್. ವಿಶ್ವನಾಥ್ ಭಾರಿ ಮುಖಭಂಗ ಅನುಭವಿಸಬೇಕಾಗುತ್ತದೆ.

 Karnataka By Election Results Hunsur H Vishwanath HP Manjunath Somashekhar

ಡಿ. 5ರಂದು ನಡೆದ ಚುನಾವಣೆಯಲ್ಲಿ ಶೇ 77.24ರಷ್ಟು ಮತದಾನ ನಡೆದಿದೆ. ಡಿ. ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಈ ಫಲಿತಾಂಶ ಪ್ರಕ್ರಿಯೆ ಮಾಹಿತಿ ಇಲ್ಲಿ ಸಿಗಲಿದೆ.

ಹೊಸಕೋಟೆ ಉಪ ಚುನಾವಣೆ; ಗೆದ್ದು ಬೀಗುವವರು ಯಾರು? ಹೊಸಕೋಟೆ ಉಪ ಚುನಾವಣೆ; ಗೆದ್ದು ಬೀಗುವವರು ಯಾರು?

107 ಅಂಚೆ ಮತಗಳಲ್ಲಿ ಕಾಂಗ್ರೆಸ್‌ನ ಹೆಚ್‌.ಪಿ. ಮಂಜುನಾಥ್ ಮುನ್ನಡೆ ಪಡೆದುಕೊಂಡಿದ್ದರು. ಎಚ್. ವಿಶ್ವನಾಥ್ ಹಿನ್ನಡೆ ಅನುಭವಿಸಿದ್ದಾರೆ. ಮಂಜುನಾಥ್ ಅವರು 7633 ಮತಗಳಿಂದ ಭಾರಿ ಮುನ್ನಡೆ ಪಡೆದುಕೊಂಡಿದ್ದಾರೆ. 13,464 ಮತಗಳನ್ನು ಪಡೆದಿರುವ ವಿಶ್ವನಾಥ್ ಎರಡನೆಯ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ನ ಮಂಜುನಾಥ್ 21,097 ಪಡೆದು ಮುನ್ನಡೆಯಲ್ಲಿದ್ದಾರೆ. ಜೆಡಿಎಸ್‌ನ ಸೋಮಶೇಖರ್ 10,311 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಏಳನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ ಅಭ್ಯರ್ಥಿ 18,752 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 30404 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ 15888 ಮತಗಳು ಸಿಕ್ಕಿವೆ. ಕಾಂಗ್ರೆಸ್ 11652 ಮುನ್ನಡೆ ಪಡೆದುಕೊಂಡಿದೆ.

ಎಂಟನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್‌ಗೆ 14,273 ಮತಗಳ ಮುನ್ನಡೆ ದೊರಕಿದೆ.

ಒಂಬತ್ತನೇ ಸುತ್ತಿನ ಮತ ಎಣಿಕೆಯಲ್ಲಿ 15,305 ಮತಗಳ ಮುನ್ನಡೆ ಸಾಧಿಸಿರುವ ಎಚ್‌.ಪಿ. ಮಂಜುನಾಥ್, ಗೆಲುವಿನ ಸಂಭ್ರಮ ಆಚರಿಸುವ ಸೂಚನೆ ನೀಡಿದ್ದಾರೆ.ಹುಣಸೂರು 10ನೇ ಸುತ್ತು ಮುಕ್ತಾಯ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 17998 ಮತಗಳ ಮುನ್ನಡೆಮುನ್ನಡೆ. ಮಂಜುನಾಥ್ - 46158, ವಿಶ್ವನಾಥ್ - 28160, ಸೋಮಶೇಖರ್ - 17730, Nota - 536.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 12ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ. ಬಿಜೆಪಿಯ ವಿಶ್ವನಾಥ್ 34,396, ಕಾಂಗ್ರೆಸ್ ನ ಮಂಜುನಾಥ್ 55,217, ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 20,636 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಮಂಜುನಾಥ್ ಗೆ 20,821 ಮತಗಳ ಮುನ್ನಡೆ ಸಿಕ್ಕಿದೆ.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 13ನೇ ಸುತ್ತಿನ ಮತಗಳ ಎಣಿಕೆ ಬಳಿಕ ಬಿಜೆಪಿಯ ವಿಶ್ವನಾಥ್ 36,798, ಕಾಂಗ್ರೆಸ್ ನ ಮಂಜುನಾಥ್ 60,413, ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 22,620 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಮಂಜುನಾಥ್ 23,615 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.

English summary
Karnataka By Election Results Hunsur: Know Everything about Hunsur assembly constituency by elections. candidate list, vote share,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X