ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಲ್ಯಾಕ್ಸ್ ಮೂಡಿನಲ್ಲಿ ಕೈ ಅಭ್ಯರ್ಥಿ; ದ್ವೇಷದ ರಾಜಕಾರಣಕ್ಕೆ ಬೇಸರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 6: ಹುಣಸೂರು ವಿಧಾನಸಭಾ ಉಪ ಚುನಾವಣೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಶುಕ್ರವಾರ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲ ಕಳೆದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ತಾಲೂಕಿನೆಲ್ಲೆಡೆ ಅಬ್ಬರದ ಪ್ರಚಾರ ನಡೆಸಿದ್ದ ಮಂಜುನಾಥ್, ಗೆಲುವಿನ ನಿರೀಕ್ಷೆಯಲ್ಲಿ ಚುನಾವಣೆ ಎದರುಸಿದ್ದಾರೆ. ಸದ್ಯ ಮತದಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜಕೀಯ ಜಂಜಾಟದಿಂದ ವಿಶ್ರಾಂತಿ ಪಡೆದ ಮಂಜುನಾಥ್, ಶುಕ್ರವಾರ ತಮ್ಮ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಕಾಲಕಳೆದರು.

ಅನರ್ಹರ ಪರ ಜನರ ಒಲವು? ಸಮೀಕ್ಷೆಗಳು ಹೇಳುವುದೇನು? ಅನರ್ಹರ ಪರ ಜನರ ಒಲವು? ಸಮೀಕ್ಷೆಗಳು ಹೇಳುವುದೇನು?

ಮತದಾನ ಮುಗಿದ ಬಗ್ಗೆ ಪ್ರತಿಕ್ರಯಿಸಿದ ಕಾಂಗ್ರೆಸ್ ಅಭ್ಯರ್ಥಿ, "ಒಂದು ದೊಡ್ಡ ಭಾರವನ್ನು ತಲೆ ಮೇಲಿಂದ ಇಳಿಸಿದಂತಾಗಿದೆ. ತಾಲೂಕಿನ ಜನ ಸ್ಪಂದಿಸಿದ ರೀತಿ ಖುಷಿ ತಂದಿದೆ. ಫಲಿತಾಂಶ ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ. ಚುನಾವಣೆ ವೇಳೆ ನಡೆದ ಕೆಲವೊಂದು ಕಹಿ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲಾ ಶಾಂತಿಯುತವಾಗಿ ನಡೆದದ್ದು ಸಮಾಧಾನ ತಂದಿದೆ" ಎಂದರು.

Hunasuru Congress Candidate Manjunath In Relax Mood After By Elections

ಸ್ವಾಮೀಜಿ ಹೆಸರು ಬಳಸಿ ವಿಶ್ವನಾಥ್ ಕೀಳುಮಟ್ಟದ ಪ್ರಚಾರ ಎಂದು ಸಿದ್ದು ಟ್ವೀಟ್ಸ್ವಾಮೀಜಿ ಹೆಸರು ಬಳಸಿ ವಿಶ್ವನಾಥ್ ಕೀಳುಮಟ್ಟದ ಪ್ರಚಾರ ಎಂದು ಸಿದ್ದು ಟ್ವೀಟ್

"ಆದರೆ ಕಳೆದ ಮೂರು ಉಪಚುನಾವಣೆಗೆ ಹೋಲಿಸಿದರೆ ಈ ಉಪಚುನಾವಣೆ ದ್ವೇಷದಿಂದ ನಡೆದಿದ್ದು ಬೇಸರ ತಂದಿದೆ. ಈವರೆಗೂ ಚುನಾವಣೆಗಳು ಸ್ನೇಹಪರವಾಗಿ ನಡೆಯುತ್ತಿದ್ದವು. ಆದರೆ ಈ ಬಾರಿ ಕಿಚ್ಚು, ರೋಷ, ದ್ವೇಷದಿಂದ ಚುನಾವಣೆ ನಡೆದಿದ್ದು ದುರದೃಷ್ಟಕರ. ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳು ನಮ್ಮ ಪರವಾಗಿ ಬಂದಿವೆ. ಆದರೆ ಕೆಲವು ಸಮೀಕ್ಷೆ ತಪ್ಪಾಗಿದ್ದು, ಈ ಸಮೀಕ್ಷೆಗಳಿಗಿಂತ ತಾಲೂಕಿನ ಜನರ ಮೇಲೆ ನಂಬಿಕೆ ಇದೆ. ಈ ಚುನಾವಣೆಯಲ್ಲಿ ಬಿಜೆಪಿ 50-60 ಕೋಟಿ ಹಣ ಖರ್ಚು ಮಾಡಿದೆ. ಅವರು ಅಷ್ಟು ಹಣ ಖರ್ಚು ಮಾಡಿದ್ದರೂ ನಾನು ಗೆಲ್ಲುತ್ತೇನೆಂಬ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ಶತ್ರುಗಳೆಲ್ಲ ಮಿತ್ರರಾದರು, ಮಿತ್ರರೆಲ್ಲಾ ಶತ್ರುಗಳಾದರು" ಎಂದು ವಿಷಾದ ವ್ಯಕ್ತಪಡಿಸಿದರು.

English summary
With the end of the Hunasuru assembly by-election, Congress candidate H.P. Manjunath spent Friday in full relaxed mood
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X