ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಮುಕ್ತ ವಿವಿ ಆನ್ ಲೈನ್ ಅಡ್ಮಿಷನ್‌ಗೆ ಭರಪೂರ ಸ್ಪಂದನೆ

|
Google Oneindia Kannada News

ಮೈಸೂರು, ಮೇ 11:ಕಳೆದ ವಾರವಷ್ಟೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2019-20ನೇ ಸಾಲಿಗೆ ಆನ್ ಲೈನ್ ಅರ್ಜಿ ಕರೆದಿದ್ದು, ಭರಪೂರ ಸ್ಪಂದನೆ ದೊರಕಿದೆ. ಇದುವರೆಗೂ ಪ್ರವೇಶ ಪ್ರಕ್ರಿಯೆ ಶುರುವಾದ ಐದು ದಿನಗಳಲ್ಲಿ 10 ಸಾವಿರ ಮಂದಿ ಆಸಕ್ತಿ ತೋರಿಸಿ ವೆಬ್ ಸೈಟ್ ನಲ್ಲಿ ಹುಡುಕಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಯುಜಿಸಿ ಮಾನ್ಯತೆ ರದ್ದಾಗಿತ್ತು. ಮಾನ್ಯತೆ ದೊರಕಿದ 2018-19ನೇ ಸಾಲಿಗೆ ಕೆಎಸ್‌ ಒಯು ಮೊದಲ ಬಾರಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾಗ 12 ಸಾವಿರ ಅರ್ಜಿಗಳು ಸ್ವೀಕೃತವಾಗಿದ್ದವು. ಇದಕ್ಕೂ ಹಿಂದಿನ ಸಾಲಿನ ಕೆಎಸ್‌ಒಯು ಅಂಕಿ-ಅಂಶಗಳಿಗೆ ಹೋಲಿಸಿದರೆ ಇದು ಕಡಿಮೆಯಾಗಿತ್ತು.

ಕೆಎಸ್ಓಯು ವಿದ್ಯಾರ್ಥಿಗಳಿಂದ ಮತದಾನ ಬಹಿಷ್ಕಾರ ಚಿಂತನೆಕೆಎಸ್ಓಯು ವಿದ್ಯಾರ್ಥಿಗಳಿಂದ ಮತದಾನ ಬಹಿಷ್ಕಾರ ಚಿಂತನೆ

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಎಸ್‌ಒಯು, 2019-20ನೇ ಸಾಲಿಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆಗೆ ನಿರ್ಧರಿಸಿತ್ತು. ಇದು ಉತ್ತಮ ಫಲಿತಾಂಶವನ್ನು ನೀಡಿದೆ.

Huge response from students for KSOU online application service

ರಾಜ್ಯದ ಹಲವು ಭಾಗಗಳಿಂದ ದೂರ ಶಿಕ್ಷಣ ಪಡೆಯಲು ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕಳೆದ ವರ್ಷ ಕೆಎಸ್‌ಒಯು ತನ್ನ ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಲಷ್ಟೇ ಅವಕಾಶ ನೀಡಿತ್ತು. ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಕೈಯಲ್ಲಿ ಅರ್ಜಿಗಳನ್ನು ತುಂಬಬೇಕಿತ್ತು.ಈ ಸಾಲಿನಲ್ಲಿ ಈ ಯಾವ ಗೋಜಲೂ ಇಲ್ಲ. ಕೆಎಸ್‌ಒಯುನ ವೆಬ್‌ಸೈಟ್ ನಲ್ಲಿ ಈಗ ಸಂಪೂರ್ಣ ಆನ್‌ಲೈನ್‌ ಅವಕಾಶವಿದೆ.

5 ವರ್ಷದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಸಮಾರಂಭ5 ವರ್ಷದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಸಮಾರಂಭ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅಲೆದಾಟವನ್ನು ತಪ್ಪಿಸುವ ಸಲುವಾಗಿ ಈ ನೂತನ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಿ ಆನ್ಲೈನ್ ಪ್ರವೇಶಾತಿ ಪ್ರಾರಂಭಿಸಿದರು. ನಮ್ಮ ಈ ಪ್ರಯತ್ನ ಫಲ ನೀಡಿದೆ ಎಂದು ವಿವಿ ತಿಳಿಸಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಾರೆ ಎಂಬ ಮುನ್ಸೂಚನೆ ಇದ್ದು, ಸಾಕ್ಷಿ ಎಂಬಂತೆ ಮುಕ್ತ ವಿವಿ ಕನ್ನಡ ವೆಬ್ ಸೈಟಿಗೆ 6500ಕ್ಕೂ ಹೆಚ್ಚು ಮಂದಿ ಹಾಗೂ ಇಂಗ್ಲಿಷ್ ವೆಬ್ ಸೈಟಿಗೆ 2500ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರವೇಶಾತಿಗೆ ಇನ್ನೂ ಕಾಲಾವಕಾಶ ಇರುವ ಕಾರಣ ಈ ಶೈಕ್ಷಣಿಕ ಸಾಲಿನಲ್ಲಿ ನಾವು ನಿರೀಕ್ಷಿಸಿದ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗುವ ವಿಶ್ವಾಸವಿದೆ. ಆನ್ ಲೈನ್ ಪ್ರವೇಶದ ಜೊತೆಗೆ ಯುಜಿಸಿ ಸಮಸ್ಯೆಯ ಬಗೆಹರಿದಿರುವುದು ವಿದ್ಯಾರ್ಥಿಗಳಲ್ಲಿ ವಿವಿ ಬಗ್ಗೆ ಭರವಸೆ ಮೂಡಿದೆ.

ಹುತಾತ್ಮ ಯೋಧ ಗುರು ಪತ್ನಿಗೆ ಕೆಎಸ್‌ಓಯುನಿಂದ ಉಚಿತ ಶಿಕ್ಷಣಹುತಾತ್ಮ ಯೋಧ ಗುರು ಪತ್ನಿಗೆ ಕೆಎಸ್‌ಓಯುನಿಂದ ಉಚಿತ ಶಿಕ್ಷಣ

31ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರುವ ಕಾರಣ, ಅಧಿಕ ಸಂಖ್ಯೆಯ ದಾಖಲಾತಿ ಆಗುವುದು ಖಚಿತ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

English summary
Huge response from students for Karnataka state Open University online application service.Around 6500 people visited kannada website, 3500 people visited English website spam of 5 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X