• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕನ್ನಡ ಚಿತ್ರ ಬಂದ್ ಮಾಡಿದ್ರೆ ನನ್ಮಗಂದ್, ಬಿಡ್ತಿವಾ?'

By ಮೈಸೂರು ಪ್ರತಿನಿಧಿ
|

ಮೈಸೂರು, ಏಪ್ರಿಲ್ 22 : ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವಾಗುವತನಕ ರಾಜ್ಯದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಫೈರಿಂಗ್ ಸ್ಟಾರ್ ನಟ ಹುಚ್ಚ ವೆಂಕಟ್ ಮೈಸೂರಿನಲ್ಲಿ ಅಬ್ಬರಿಸಿದ್ದಾರೆ.

ವಿಶ್ವದಾದ್ಯಂತ ಬಾಹುಬಲಿ 2 ಬಿಡುಗಡೆಯಾಗುತ್ತಿರುವ ಏಪ್ರಿಲ್ 28ರಂದೇ ಹುಚ್ಚ ವೆಂಕಟ್ ಅವರ 'ಪೊರ್ಕಿ ಹುಚ್ಚ ವೆಂಕಟ್' ಕೂಡ ಕರ್ನಾಟಕದಾದ್ಯಂತ ಹಾವಳಿ ಎಬ್ಬಿಸಲಿದೆ. ಬಾಹುಬಲಿಗೆ ರಂಗಿತರಂಗ ಸವಾಲು ಒಡ್ಡಿದಂತೆ ಬಾಹುಬಲಿ 2ಕ್ಕೆ ಹುಚ್ಚ ವೆಂಕಟ್ ಚಿತ್ರ ಟಕ್ಕರ್ ನೀಡಲಿದೆ.

ಈ ಚಿತ್ರದ ಪ್ರಚಾರಕ್ಕೆ ಮೈಸೂರಿಗೆ ನಾಯಕಿ ರಚನಾ ಜೊತೆ ಅವರು ಶನಿವಾರ ಬಂದಿದ್ದಾಗ, ಬಾಹುಬಲಿ 2ರ ವಿವಾದದ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ನಾನು ಸಾಯಿಸಿಬಿಡ್ತೀನಿ ಎಂದು ಧಮ್ಕಿ ಹಾಕಿದ್ದಕ್ಕೆ ಬೆದರಿ ಸತ್ಯರಾಜ್ ಕ್ಷಮೆ ಕೋರಿದ್ದಾರೆ ಎಂದು ಹೇಳಲು ಅವರು ಮರೆಯಲಿಲ್ಲ.

ಬಂದ್ ಬೇಡವೆಂದು ವೆಂಕಟ್ ಸಲಹೆ :

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದು ವಿಚಾರಕ್ಕೆ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಟ ಹುಚ್ಚ ವೆಂಕಟ್ , ಕರ್ನಾಟಕದಲ್ಲೂ ತಮಿಳು ಚಿತ್ರಗಳ ರದ್ದು ಮಾಡಲಾಗುವುದು. ನಮ್ಮ ತಾಯಿಯನ್ನ ಬಿಟ್ಟುಕೊಟ್ಟು ದುಡ್ಡು ಮಾಡಬೇಡ? ನಮ್ಮ ತಾಯಿಗೆ ನೋವು ನೀಡಿ ‌ಬಿರಿಯಾನಿ ತಿನ್ನಬೇಕಾ? ತಮಿಳುನಾಡಲ್ಲಿ ಕನ್ನಡ ಪ್ರದರ್ಶನ ಆಗುವ ತನಕ ರಾಜ್ಯದಲ್ಲಿ ಬಿಡಬೇಡಿ ಎಂದು ತಮಿಳು‌ ಚಿತ್ರ ಹಂಚಿಕೆದಾರರು, ಥಿಯೇಟರ್ ಮಾಲೀಕರಿಗೆ ಮನವಿ ಮಾಡಿದರು.

ನಮಗೆ ನಮ್ಮ ತಾಯಿ ಮುಖ್ಯ. ಕೋಟಿ ಸಂಪಾದಿಸುವುದು ಜೀವನವಲ್ಲ. ಕೋಟಿ ಜನರನ್ನ ಸಂಪಾದಿಸುವುದು ಜೀವನ. ಸತ್ಯರಾಜ್ ಅವರಿಗೆ ಸವಾಲ್ ಹಾಕಿದ್ದೆ. ಸಾಯಿಸಿಬಿಡ್ತೀನಿ, ನನ್ ಯಕ್ಕಡಾ ಅಂತ ಸ್ಟೇಟ್ ಮೆಂಟ್ ಕೊಟ್ಟಿದ್ದೆ. ಅವರು ಕ್ಷಮೆ ಕೋರಿದ್ದಾರೆ, ಕ್ಷಮೆ ಅಂತ ಬಂದರೆ ಬಿಡ್ತೀವಿ ಎಂದರು.

ಕನ್ನಡಿಗರು ಬಂದ್ ಮಾಡಕೂಡದು. ಸತ್ಯರಾಜ್ ಒಬ್ಬರಿಗೋಸ್ಕರ ಲಕ್ಷಾಂತರ ಬಡವರಿಗೆ ಅನ್ಯಾಯ ಮಾಡಬಾರದು. ಕರ್ನಾಟಕದಲ್ಲಿ ತಮಿಳು ಸಿನಿಮಾ‌ಬೇಡ. ನಾವು ಕೂಡ ರಾಕ್ಷಸರಾಗಬೇಕಾಗುತ್ತದೆ ಎಂದು ಹುಚ್ಚ ವೆಂಕಟ್ ಎಚ್ಚರಿಕೆ ನೀಡಿದರು. [ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]

ಮುಂದಿನ ವಾರ ನನ್ನ ಸಿನಿಮಾ ರಿಲೀಸ್ :

ಓಂ ಬ್ಯಾನರ್ ನಡಿ ನಿರ್ಮಿಸಿದ, ಹುಚ್ಚ ವೆಂಕಟ್ ನಿರ್ದೇಶನದಲ್ಲಿ, ನಾನೇ ನಾಯಕ ನಟನಾಗಿ ಅಭಿನಯಿಸಿರುವ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ಇದೇ ಏ.28ರಂದು ಮೈಸೂರಿನ ಸತ್ಯಂ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರ ನನ್ನ ಜೀವನದ ನೈಜ ಘಟನೆಯಾಧಾರಿತವಾಗಿದೆ. ಸಿನಿಮಾ ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದು ಕೇವಲ ಬುದ್ದಿವಾದವನ್ನು ಹೇಳಿಲ್ಲ. ಬದಲಿಗೆ ಪ್ರೀತಿಯೆಂದರೇನು? ಎನ್ನುವ ಬಗ್ಗೆ ನವಿರಾದ ದೃಶ್ಯಗಳು, ಪಂಚಿಂಗ್ ಡೈಲಾಗ್ ಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಕೇವಲ ಶಿಳ್ಳೆ ಚಪ್ಪಾಳೆಗಳಿಗಾಗಿ ಪಂಚಿಂಗ್ ಡೈಲಾಗ್ ಗಳಿಲ್ಲ ಅವುಗಳನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಬೇಕು. ಕನ್ನಡ ಸಿನಿಮಾ ನೋಡಿ ಬೆನ್ನು ತಟ್ಟಿ ಎಂದು ಕೋರಿದರು. [ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಕಟ್ಟಪ್ಪ]

ಕಟ್ಟಪ್ಪನನ್ನು ಕ್ಷಮಿಸಿ ಉದಾರಿಗಳಾಗಿ :

ಬಹಿರಂಗವಾಗಿ ಕ್ಷಮೆಯಾಚಿಸಿರುವ ಬಾಹುಬಲಿ ಚಿತ್ರದ ಪಾತ್ರದಾರಿ ಕಟ್ಟಪ್ಪ ಸತ್ಯರಾಜ್ ಅವರನ್ನು ಕನ್ನಡಿಗರು ವಿಶಾಲ ಮನಸ್ಸಿನಿಂದ ಒಂದು ಬಾರಿ ಕ್ಷಮಿಸೋಣ. ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿಯೆಸಗಿದರೆ ರಾಜ್ಯದಲ್ಲಿಯೂ ತಮಿಳು ಸಿನಿಮಾವನ್ನು ನಡೆಸಲು ಬಿಡುವುದಿಲ್ಲವೆಂದು ಎಚ್ಚರಿಸಿದರು.

ಕಾವೇರಿಯನ್ನು ರಾಜಕೀಯ ವ್ಯಕ್ತಿಗಳು ತಮ್ಮ ಸ್ವಹಿತಕ್ಕಾಗಿ ಬಳಸಿಕೊಳ್ಳುತ್ತಿದ್ದು ಅಂಥವರಿಂದ ಅಂತರವನ್ನು ಕಾಯ್ದುಕೊಳ್ಳಬೇಕೇ ಹೊರತು ಭಾಷೆಯಿಂದಲ್ಲ. ನಾನು ಯಾರಿಗೂ ಪ್ರತಿಸ್ಪರ್ಧಿಯಲ್ಲ. ಹುಚ್ಚ ವೆಂಕಟ್ ಕನ್ನಡಿಗ ನನ್ನ ಸಿನಿಮಾ ಕರ್ನಾಟಕದಲ್ಲಿಯೇ ಬಿಡುಗಡೆಗೊಳ್ಳುವುದು ಎಲ್ಲಾ ಕನ್ನಡಿಗರು ಮೆಚ್ಚಿ ಅಶೀರ್ವದಿಸುವರು ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು. [ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಯಾಗಿಲ್ಲ: ಸಾ.ರಾ.ಗೋವಿಂದು]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Firing Star Huccha Venkat has suggested that if Tamil Nadu doesn't allow Kannada movies to be screened then Karnataka also should not allow Tamil movies to be released in Karnataka. He was in Mysuru to promote his latest movie Porki Huccha Venkat to be released on April 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more