ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ

By Ashwath
|
Google Oneindia Kannada News

ಮೈಸೂರು,ಆ.2: ಮೈಸೂರು ಅರಮನೆಯ ವಿವಾದವನ್ನು ರಾಜ್ಯ ಸರ್ಕಾರ ಶೀಘ್ರವೇ ಬಗೆಹರಿಸಲಿ ಎಂದು ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ರಾಣಿ ಪ್ರಮೋದಾ ದೇವಿ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಆ.2 ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹಾರಾಣಿ, ಮೈಸೂರು ಅರಮನೆ ವಿವಾದವನ್ನು ಸರ್ಕಾರ ಮೊದಲು ಬಗೆಹರಿಸಲಿ, ಬಳಿಕ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು. ನ್ಯಾಯಾಲಯದ ಹೊರಗೆ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಪತ್ರ ಬರೆದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.[ಮೈಸೂರು ಅರಮನೆ ವಿವಾದ ಯಾಕೆ?]

ಈ ಸಂದರ್ಭದಲ್ಲಿ ಮಹಾರಾಣಿ ಪ್ರಮೋದಾ ದೇವಿ ಅವರು ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರನ್ನು ನೆನೆದು ಕಣ್ಣೀರಿಟ್ಟರು.

queen mysore

ಒಂದು ವೇಳೆ ಸರ್ಕಾರ ವಿವಾದ ಬಗೆಹರಿಸದಿದ್ದರೆ ಖಾಸಗಿಯಾಗಿ ದಸರಾ ಆಚರಿಸಲಿ. ವಿವಾದಗಳ ಇರುವಾಗಲೇ ಉತ್ತರಾಧಿಕಾರಿಯನ್ನು ನೇಮಿಸಿ, ಬಳಿಕ ಅವರನ್ನು ಈ ವಿವಾದಕ್ಕೆ ಎಳೆದು ತರುವುದು ಇಷ್ಟವಿಲ್ಲ. ಈಗಾಗಲೇ ನಾವು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದೇವೆ. ಈ ತೊಂದರೆ ಮುಂದಿನ ಪೀಳಿಗೆಗೆ ಬರಬಾರದು ಎಂದು ಹೇಳಿದ್ದಾರೆ.

ಸರ್ಕಾರ ನಡೆಸುವ ದಸರಾ ಒಂದು ಖಾಸಗಿ ಉತ್ಸವ. ಆದರೆ ರಾಜಮನೆತನದವರು ನಡೆಸುವ ದಸರಾ ಧಾರ್ಮಿಕ ಆಚರಣೆ ಬೇರೆ. ನಾವೆಂದೂ ಇದನ್ನು ಖಾಸಗಿ ಹಬ್ಬ ಎಂದು ಭಾವಿಸಿಲ್ಲ. ದಸರಾ ರಾಜ್ಯದ ಮನೆ ಮನೆಯ ಹಬ್ಬ. ಸಂಪ್ರದಾಯದಂತೆ ದೇವತಾ ಕಾರ್ಯ ನಡೆಯಲಿದೆ. ಧಾರ್ಮಿಕ ಆಚರಣೆಯನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ.
ಅರಮನೆ ಹಾಗೂ ರಾಜಮನೆತನವರಿಲ್ಲದೆ ಸರ್ಕಾರ ಹೇಗೆ ದಸರಾ ನಡೆಸುತ್ತದೆ ಎಂದು ಮಹಾರಾಣಿ ಪ್ರಶ್ನಿಸಿದ್ದಾರೆ.

ಈ ಬಾರಿಯ ಖಾಸಗಿ ದರ್ಬಾರ್ ಬಗ್ಗೆ ಗಣೇಶ ಹಬ್ಬದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ. ನನ್ನ ಒಬ್ಬಳ ನಿರ್ಧಾರ ಇಲ್ಲಿ ಅಂತಿಮವಲ್ಲ. ಎಲ್ಲರೂ ಒಟ್ಟುಗೂಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

1974ರಿಂದ ಬಂದ ಎಲ್ಲಾ ಸರ್ಕಾರಗಳಿಂದಲೂ ನಮಗೆ ತೊಂದರೆಯಾಗಿದೆ. ನಾವು ಎಂದೂ ಅದನ್ನು ಬಹಿರಂಗಪಡಿಸಿರಲಿಲ್ಲ. ಇದುವರೆಗೂ ನಾವು ಸಹಿಸಿಕೊಂಡು ಬಂದಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಅದನ್ನು ನಾನು ಜನರಿಗೆ ತಿಳಿಸುತ್ತಿದ್ದೇನೆ ಎಂದು ಪ್ರಮೋದಾ ದೇವಿ ತಮ್ಮ ನೋವನ್ನು ತೋಡಿಕೊಂಡರು.

ಮೊದಲು ಸರ್ಕಾರ ಮೈಸೂರು ಅರಮನೆ ಸಮಸ್ಯೆ ಬಗೆಹರಿಸಲಿ. 9 ಸದಸ್ಯರ ಪೀಠ ಇನ್ನೂ ರಚನೆಯೇ ಆಗಿಲ್ಲ. ಬೆಂಗಳೂರಿನ ಅರಮನೆ ವಿಚಾರದಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಸರ್ಕಾರಕ್ಕೆ ನಾನು ಪತ್ರ ಬರೆದಿದ್ದೇನೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

English summary
How can govt celebrate Mysore Dasara without royal family? It is a state festival & has to be celebrated as per old customs says teary Pramoda Devi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X