ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕನ್ನಡ' ನಾಮಫಲಕ ಹಾಕುವುದಿಲ್ಲ ಎಂದವನಿಗೆ ಆಯಿತು ತಕ್ಕ ಪಾಠ

|
Google Oneindia Kannada News

ಮೈಸೂರು, ಮೇ 16: ಕನ್ನಡ ನಾಮಫಲಕ ಹಾಕಲು ಉದ್ಧಟತನ ತೋರಿ ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೇ, ತಾಕತ್ತಿದ್ದರೆ ಈಗಿರುವ ನಾಮಫಲಕವನ್ನು ತೆಗೆದು ಹಾಕು ಎಂದು ಸವಾಲೆಸೆದ ವ್ಯಕ್ತಿಗೆ ಕನ್ನಡಪರ ಸಂಘಟನೆ ಸದಸ್ಯರು ಸೇರಿ ಬೋರ್ಡ್ ಕಿತ್ತು ಹಾಕಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ನಗರದ ಚಾಮರಾಜೇಂದ್ರ ಮೃಗಾಲಯದ ಸಮೀಪದ ಶರವಣ ಭವನದ ಮಾಲೀಕನೇ ತಪ್ಪು ತಿದ್ದಿಕೊಂಡು, ಹಿಂದಿ ನಾಮಫಲಕ ತೆರವುಗೊಳಿಸಿ ಕ್ಷಮೆಯಾಚಿಸಿ ನಾಮಫಲಕ ಬದಲಾಯಿಸಿದ ಕನ್ನಡೇತರ ಮಾಲೀಕ.

ರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿ

ಶರವಣ ಭವನದಲ್ಲಿ ನಾಮಫಲಕ ಸಂಪೂರ್ಣ ಹಿಂದಿಮಯವಾಗಿ ಕನ್ನಡ ನಾಪತ್ತೆಯಾಗಿತ್ತು. ಈ ಬಗ್ಗೆ ಪ್ರವಾಸಿ ಕನ್ನಡಿಗರೊಬ್ಬರು ಪ್ರಶ್ನಿಸಿದರು. ಆಗ ಅದಕ್ಕೆ ಉಡಾಫೆಯಿಂದ ಉತ್ತರಿಸಿದ್ದು, "ಕನ್ನಡ ನಾಮಫಲಕ ಹಾಕುವುದಿಲ್ಲ, ತಾಕತ್ತಿದ್ರೆ ಹಿಂದಿ ಹೊರತೆಗೆಸಿ ನೋಡುವಾ" ಎಂದು ಸವಾಲು ಹಾಕಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದನ್ನು ಗಮನಿಸಿದ ಕನ್ನಡ ಪರ ಸಂಘಟನೆ ಸದಸ್ಯರು ಗಂಭೀರವಾಗಿ ಪರಿಗಣಿಸಿದರು.

Hotel manager removed hindi board after kanndigas protest in Mysuru

ಹೋಟೆಲ್ ಮಾಲೀಕನ ಬಳಿ ತೆರಳಿ ಉಡಾಫೆಯಿಂದ ಮಾತನಾಡಿದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡರು. ಕಡೆಗೆ ತನ್ನ ತಪ್ಪಿನ ಅರಿವಾಗಿ ಹೋಟೆಲ್ ಮಾಲೀಕ ಹಿಂದಿ ಬೋರ್ಡ್ ಅನ್ನು ಖುದ್ದು ತಾನೇ ಹರಿದು, ಅತಿ ಶೀಘ್ರದಲ್ಲಿಯೇ ಕನ್ನಡ ನಾಮಫಲಕ ಹಾಕುವೆ ಎಂದು ತಿಳಿಸಿದ್ದಾನೆ. ಅಲ್ಲದೇ ಕನ್ನಡಪರ ಸಂಘಟನೆ ಸದಸ್ಯರ ಬಳಿ ಉದ್ಧಟತನದ ಮಾತನಾಡಿದ್ದಕ್ಕೆ ಕೈ ಮುಗಿದು ಕ್ಷಮೆ ಕೋರಿದ್ದಾರೆ.

English summary
In Mysuru, North Indian hotel manager removed hindi board at his hotel after kanndigas protest in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X