• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ,11: ಆಕಸ್ಮಿಕವಾಗಿ ಮೊಬೈಲ್‍ ಗೆ ಬರುತ್ತಿದ್ದ ಮಹಿಳೆ ಧ್ವನಿಗೆ ಫಿದಾ ಆಗಿ ಆಕೆಯ ಸಂಪರ್ಕ ಸಾಧಿಸಿದ ಹಲವು ಯುವಕರು ಹಾಗೂ ಮಧ್ಯವಯಸ್ಕ ಗಂಡಸರು ತಮ್ಮ ಹಣ ಒಡವೆಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ಯಾರಿಗೂ ಹೇಳಲಾಗದೆ ಒಳಗೊಳಗೆ ಯಾತನೆ ಅನುಭವಿಸಿದ ಗಂಡಸರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ.

ಮೈಸೂರಿನ ಅಮ್ರಿನ್ ಸಬಾ (24) ಹಾಗೂ ಇವಳಿಗೆ ಸಾಥ್ ನೀಡುವ ಜಾವೇದ್ (22) ಮತ್ತು ತೌಸಿಫ್ (23) ಎಂಬುವರಿಂದ ಸಾಕಷ್ಟು ಗಂಡಸರು ಹಣ ಕಳೆದುಕೊಂಡಿದ್ದರು. ಹೆಣ್ಣಿನ ಹಿಂದೆ ಬಿದ್ದು ಹಾಳಾದೆ ಎಂದು ಮೂಕರೋದನ ಅನುಭವಿಸುತ್ತಲೇ ತಲೆ ತಲೆ ಚಚ್ಚಿಕೊಳ್ಳುತ್ತಿದ್ದರು. ಇದೀಗ ಇವರು ಮೈಸೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಇವರ ವಂಚನೆಯ ಜಾಲ ಬಯಲಾಗಿದೆ.[ಹನಿ ಟ್ರ್ಯಾಪ್ ಮೂಲಕ ಲೇಡಿ ಉಗ್ರರ ಎಂಟ್ರಿ?]

ಅಮ್ರಿನ್ ಸಬಾ ಎಂಬ ಯುವತಿ ಶ್ರೀಮಂತ ಯುವಕರನ್ನು ಫೋನ್ ಮೂಲಕ ಅಥವಾ ಮಾಲ್ ಗಳಲ್ಲಿ ವಿಳಾಸ ಕೇಳುವ ನೆಪದಲ್ಲಿ ಮೊದಲು ಪರಿಚಯಿಸಿಕೊಳ್ಳುತ್ತಿದ್ದಳು. ಬಳಿಕ ಮೊಬೈಲ್ ನಂಬರ್ ನೀಡಿ ಮಾತನಾಡುತ್ತಲೇ ಆತನನ್ನು ಮೋಹಕ್ಕೆ ಕೆಡವಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಳು. ಬಳಿಕ ಸಹಚರರ ಸಹಾಯದಿಂದ ಚಿನ್ನಾಭರಣ, ಹಣ ದೋಚುತ್ತಿದ್ದರು. ಹನಿಟ್ರ್ಯಾಪ್ ಪ್ರಕರಣದ ಮೂಲಕ ಈಗಾಗಲೇ ಹತ್ತಾರು ಮಂದಿಯನ್ನು ದೋಚಿದ್ದ ಅಮ್ರಿನ್ ಸಭಾ ಮತ್ತು ತಂಡ ಯಾರೂ ಪೊಲೀಸ್ ಠಾಣೆಗೆ ದೂರು ನೀಡದ ಕಾರಣ ಬಚಾವಾಗಿದ್ದರು.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

ಅಮ್ರಿನ್ ಸಬಾ ಮತ್ತು ಸಹಚರರ ನಿಜ ಸ್ವರೂಪ ಬದಲಾಗಿದ್ದು ಹೇಗೆ?

ಕಳೆದ ಡಿಸೆಂಬರ್‍ ನಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಮಗನ ಮೊಬೈಲ್ ಗೆ ಕರೆ ಮಾಡಿದ ಅಮ್ರಿನ್ ಸಬಾ ಯಾರನ್ನೋ ಕೇಳುವ ನೆಪ ಮಾಡಿ ಕೆಲ ಕಾಲ ಮಾತನಾಡಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಈತನೂ ಮಾತನಾಡಿದ್ದಾನೆ. ಮಾತಿನಲ್ಲೇ ಎಲ್ಲವನ್ನು ತಿಳಿದುಕೊಂಡ ಆಕೆ ಬಳಿಕ ಊಟಕ್ಕೆ ಕರೆಯುವ ಮೂಲಕ ಅವನನ್ನು ಹತ್ತಿರದಿಂದ ನೋಡಿ ಆತ ಹೇಗೆ ಆತನ ಬಳಿ ಏನಿದೆ ಎಲ್ಲವನ್ನು ತಿಳಿದುಕೊಂಡಿದ್ದಾಳೆ.

ಇದಾದ ನಂತರ ತನ್ನ ಸಹಚರರಿಗೆ ವಿಷಯ ತಿಳಿಸಿ ಡಾಬವೊಂದಕ್ಕೆ ಬರಲು ಹೇಳಿದ್ದಾಳೆ. ಅಲ್ಲಿ ಇಬ್ಬರೂ ಕುಳಿತು ಮಾತನಾಡಿದ್ದಾರೆ. ಆತನಿಗೆ ಮದ್ಯ ಸೇವಿಸು ತೊಂದರೆಯಿಲ್ಲ ಎನ್ನುತ್ತಾ ಪುಸಲಾಯಿಸಿ ಕುಡಿಸಿದ್ದಾಳೆ. ಬಳಿಕ ಪರಿಚಿತರು ಕಂಡರೆ ಕಷ್ಟ ಯಾವುದಾದರೂ ನಿರ್ಜನ ಪ್ರದೇಶಕ್ಕೆ ಹೋಗೋಣ ಎಂದು ಹೇಳಿದ್ದಾಳೆ.[ಮಹಿಳೆಯರೇ,ನೀವು ವರದಕ್ಷಿಣೆ ಹಿಂಸೆ ಅನುಭವಿಸ್ತಿದ್ರೆ ಹೀಗೆ ಮಾಡಿ]

ಅಮ್ರಿನ್ ಸಬಾ ಆತನನ್ನು ಮೈಸೂರು ನಗರದ ಉದಯಗಿರಿ ಲಿಡ್ಕರ್ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾಳೆ. ಅಷ್ಟರಲ್ಲೇ ಅಲ್ಲಿಗೆ ಬಂದಿದ್ದ ತೌಸಿಫ್ ಮತ್ತು ಜಾವೇದ್ 'ನಮ್ಮ ಹುಡುಗಿನ ಕರೆದುಕೊಂಡು ಬರೋಕೆ ನಿನ್ಯಾರೋ' ಎನ್ನುತ್ತಾ ಅವನ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ, ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ವಿಚಾರವನ್ನು ಆತ ಯಾರಿಗೂ ಹೇಳಲಾಗದೆ ಖಿನ್ನನಾಗಿದ್ದನು. ಇದ್ದಕ್ಕಿದ್ದಂತೆ ಮಗನಲ್ಲಾದ ಬದಲಾವಣೆ ಅಪ್ಪನಿಗೆ ಆಶ್ಚರ್ಯವನ್ನುಂಟು ಮಾಡಿದ್ದು ವಿಶ್ವಾಸಕ್ಕೆ ಪಡೆದು ಕೇಳಿದಾಗ ಕೆಲ ವಿಚಾರವನ್ನಷ್ಟೆ ಹೇಳಿದ್ದಾನೆ.ಆಗ ಹೀಗೊಂದು ವಂಚನೆ ಜಾಲ ನಡೆಯುತ್ತಿದೆ ಎಂಬುದರ ಬಗ್ಗೆ ಅವರು ಉದಯಗಿರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.[ಆತ್ಮರಕ್ಷಕ ಕೈಗಡಿಯಾರ, ಇನ್ಮುಂದೆ ನಿಮ್ಮ ಮಕ್ಕಳು ಸೇಫ್]

ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ಕಾರ್ಯಾಚರಣೆ ನಡೆಸಿ ಅಮ್ರಿನ್ ಸಬಾ ಮತ್ತು ಸಹಚರರಾದ ತೌಸಿಫ್, ಜಾವೇದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ಮಾಡುತ್ತಿದ್ದ ಕೃತ್ಯ ಒಪ್ಪಿಕೊಂಡಿದ್ದಾರೆ. ಮಾನ ಮರ್ಯಾದೆಗೆ ಅಂಜಿ ಯಾರೂ ಕೂಡ ಇದುವರೆಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಇನ್ನಾದರೂ ಜನ ಅಪರಿಚಿತರ ಬಗ್ಗೆ ಎಚ್ಚರವಾಗಿರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Honey trap case: A women Amrin sabha (24) and her friends Javed and Tousif stolen jewellers, money from unknown mens from some days in Mysuru. A police son also lost his money and jewellers, he told everything to his father than his father filed case against of Honey trap racket. police arrested them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more