• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಳೆ ಆರ್ಭಟ: ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 19: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮೇ 19ರಂದು ಒಂದು ದಿನ ಮಳೆ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ರಜಾ ದಿನಗಳಲ್ಲಿ ಈ ಒಂದು ದಿನದ ಕರ್ತವ್ಯವನ್ನು ನಿರ್ವಹಿಸುವ ಷರತ್ತಿಗೆ ಒಳಪಟ್ಟು ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ( ಒಂದನೇ ತರಗತಿಯಿಂದ 10 ನೇ ತರಗತಿಯವರೆಗೆ) ಈ ದಿನ ಮಾತ್ರ ರಜೆ ಘೋಷಿಸಲಾಗಿದೆ ಎಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ತಿಳಿಸಿದ್ದಾರೆ. ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರವೂ ಬೆಂಬಿಡದೆ ಕಾಡಿದ ವರುಣನಿಂದಾಗಿ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು ಪರದಾಡುವಂತಾಯಿತು.

ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳ ಡಾಂಬರ್ ಕೊಚ್ಚಿ ಹೋಗಿ ಹಳ್ಳಬಿದ್ದಿವೆ. ಮಳೆ ನೀರು ಹರಿಯುವ ಸೇತುವೆ ಕೊಚ್ಚಿ ಹೋಗಿದ್ದು, ಕೆಲವೆಡೆ ವಿದ್ಯುತ್‌ ಕಂಬ ಹಾಗೂ ಮರಗಳು ಧರೆಗುರುಳಿದ ಪರಿಣಾಮ ಸಂಚಾರಕ್ಕೆ ಧಕ್ಕೆಯಾಯಿತು. ಕೆಲವೆಡೆ ಯುಜಿಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಸುರಿದ ಮಳೆಯಿಂದ ಸಾರ್ವಜನಿಕರ ನಿತ್ಯದ ಚಟುವಟಿಕೆಗೆ ತೊಂದರೆಯಾಯಿತು. ಗುಂಡಿ ಬಿದ್ದಿರುವ ರಸ್ತೆಗಳು ಜತೆಗೆ ಕೆಲವೆಡೆ ಮೊಳಗಳು ತುಂಬಿ ಹರಿದ ಪರಿಣಾಮ ವಾಹನ ಸವಾರರು, ಪಾದಚಾರಿಗಳು, ವ್ಯಾಪಾರಸ್ಥರು ತೊಂದರೆಗೊಳಗಾದರು.

SSLC ಫಲಿತಾಂಶ: ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಸಹಾಯವಾಣಿ ಆರಂಭSSLC ಫಲಿತಾಂಶ: ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಸಹಾಯವಾಣಿ ಆರಂಭ

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ:

ಶಾರದಾದೇವಿನಗರದ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿತು. ಪಾಲಿಕೆ ಸದಸ್ಯರು ರಾಜಕೀಯ ಕಾರಣಗಳಿಗೆ ಯುಜಿಡಿ ಕಾಮಗಾರಿ ಮಾಡಿಸದೇ ಇರುವುದರಿಂದ ಈ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿಯಿಡೀ ಯುಜಿಡಿ ನೀರು ಮನೆಗೆ ನುಗ್ಗಿದ ಪರಿಣಾಮ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ರಾತ್ರಿ ತೀವ್ರ ತೊಂದರೆ ಅನುಭವಿಸಿದರು. ಮನೆ ಮಂದಿ ರಾತ್ರಿ ನಿದ್ದೆಗೆಟ್ಟು ಮನೆಯಿಂದ ನೀರನ್ನು ಹೊರ ಹಾಕುವಂತಾಯಿತು. ಜನಪ್ರತಿನಿಧಿಗಳು ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Karnataka SSLC Result 2022: ಫಲಿತಾಂಶ ನೋಡುವುದು ಹೇಗೆ? Karnataka SSLC Result 2022: ಫಲಿತಾಂಶ ನೋಡುವುದು ಹೇಗೆ?

ವಿದ್ಯಾರಣ್ಯಪುರಂ 4ನೇ ಮೇನ್ 2ನೇ ಕ್ರಾಸ್‌ನಲ್ಲಿ ಮನೆ ಮುಂದೆ ನಿಂತಿದ್ದ ಕಾರ್ ಮೇಲೆ ಮರ ಉರುಳಿ ಬಿದ್ದು ವಾಹನ ಜಖಂಗೊಂಡಿದೆ. ನಿರಂತರ ಮಳೆ ಯಿಂದಾಗಿ ದೇವರಾಜ ಮಾರುಕಟ್ಟೆ, ಮಂಡಿ ಮಾರು ಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆಗಳು ವ್ಯಾಪಾರಸ್ಥರು ಹಾಗೂ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.

   ಬಯೋ ಬಬ್ಬಲ್ ಬಿಟ್ಟು ಹೊರಟ Williamson | Oneindia Kannada
   English summary
   DDPI Ramachandra Raje Urs declared holidays for all schools across the district (from 1st to 10th).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X