ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಳಿ ಹಬ್ಬದ ನೆಪದಲ್ಲಿ ಪುಂಡಾಟ ನಡೆಸಿದರೆ ಹುಷಾರ್!

|
Google Oneindia Kannada News

ಮೈಸೂರು, ಮಾರ್ಚ್ 19: ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಹೋಳಿ ಹೆಸರಿನಲ್ಲಿ ನಗರದಲ್ಲಿ ಪುಂಡಾಟ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ನಗರ ಪೊಲೀಸ್ ಕಮೀಷನರ್ ಬಾಲಕೃಷ್ಣ ಎಚ್ಚರಿಸಿದ್ದಾರೆ.

ಹೋಳಿ ಹಬ್ಬವನ್ನು ಮಾ.20 ಮತ್ತು 21 ರಂದು ಆಚರಿಸಲಾಗುತ್ತಿದ್ದು, ಇದನ್ನು ಶಾಂತಿಯುತವಾಗಿ, ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದು ಒಂದು ವೇಳೆ ಹಬ್ಬದ ನೆಪದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡರೆ ಮತ್ತು ಆಚರಣೆ ಸಂಬಂಧ ಯಾವುದೇ ರೀತಿಯಲ್ಲಿ ಬಲವಂತ ಚಂದಾ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1

ಮೆರವಣಿಗೆ ಮತ್ತು ಕಾಮ ದಹನ ಸ್ಥಳದಲ್ಲಿ ರಕ್ಷಣೆಗಾಗಿ ಪ್ರಾಯೋಜಕರು, ವ್ಯವಸ್ಥಾಪಕರು ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವುದಲ್ಲದೇ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಯಾವುದೇ ಬೆಂಕಿ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವುದು ಅಗತ್ಯ.

Holi celebration:Mysore city police commissioner Balakrishna has warned

ಕಾರ್ಯಕ್ರಮ ನಡೆಸುವ ಮತ್ತು ಮೆರವಣಿಗೆ ನಡೆಸುವ ಕುರಿತಂತೆ ಮುಂಚಿತವಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಬಾಲಕೃಷ್ಣ ಸೂಚಿಸಿದ್ದಾರೆ.

ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!

ಈ ನಡುವೆ ಚುನಾವಣಾ ನೀತಿ ಸಂಹಿತೆಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ 100, 2418139, 2418339ನ್ನು ಸಂಪರ್ಕಿಸಬಹುದಾಗಿದೆ.

English summary
Holi celebration:Mysore city police commissioner Balakrishna has warned that legal action will be taken against if they are misbehave in the name of the Holi festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X