ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವಿವಿ ಪ್ಯಾಟ್ ಗೆ ಎದುರಾಗಿದೆ ಬಿಸಿಲ ಸಮಸ್ಯೆ!

|
Google Oneindia Kannada News

ಮೈಸೂರು, ಏಪ್ರಿಲ್ 17: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಮತದಾನದಲ್ಲಿ ಬಳಕೆಯಾಗುತ್ತಿರುವ ವಿವಿ ಪ್ಯಾಟ್ , ಮತ ಖಾತರಿ ಯಂತ್ರಕ್ಕೆ ರಾಜ್ಯದಲ್ಲಿ ಏರುತ್ತಿರುವ ಬಿಸಿಲು ಸವಾಲಾಗಿದೆ. ಇದು ಸಿಬ್ಬಂದಿಗೆ ಚಿಂತೆಗೀಡು ಮಾಡುವಂತೆ ಮಾಡಿದೆ.

ಹೌದು, ವಿದ್ಯುನ್ಮಾನ ಮತ ಯಂತ್ರದ ಜತೆಗೆ ವಿವಿ ಪ್ಯಾಟ್ ಯಂತ್ರ ಸಹ ಅಳವಡಿಸಲಾಗಿದೆ. ಸೆನ್ಸಾರ್ ನಿಂದ ಕೆಲಸ ಮಾಡುವ ಈ ಯಂತ್ರವನ್ನು ತಂಪಾದ ಸ್ಥಳದಲ್ಲಿಯೇ ಇಡಬೇಕು. ಬಿಸಿಲು ಹೆಚ್ಚಾದ ಪ್ರದೇಶಗಳಲ್ಲಿ ಯಂತ್ರವನ್ನು ಸಂರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಮತಗಟ್ಟೆಯ ಸಿಬ್ಬಂದಿಗೆ ಕಾಡುತ್ತಿದೆ.

 ಕರ್ನಾಟಕ ವಿಧಾನಸಭೆ ಎಲೆಕ್ಷನ್ನಲ್ಲಿ ಇವಿಎಂ ಗ್ಯಾರಂಟಿ! ಕರ್ನಾಟಕ ವಿಧಾನಸಭೆ ಎಲೆಕ್ಷನ್ನಲ್ಲಿ ಇವಿಎಂ ಗ್ಯಾರಂಟಿ!

ಇವಿಎಂನಲ್ಲಿ ಮತ ಚಲಾವಣೆಯಾದ 7 ಸೆಕೆಂಡ್ ಒಳಗಾಗಿ ಮತ ಪಡೆದ ಅಭ್ಯರ್ಥಿ ವಿವರ ವಿವಿ ಪ್ಯಾಟ್ ಯಂತ್ರದ ಗಾಜಿನ ಪೆಟ್ಟಿಗೆಯಲ್ಲಿ ಕಾಣಿಸುತ್ತದೆ. ಈ ವಿವರವನ್ನು ಒಳಗೊಂಡ ಚೀಟಿ ಪ್ರತ್ಯೇಕ ಪೆಟ್ಟಿಗೆಯಲ್ಲಿ ಬೀಳುತ್ತದೆ. ಉಷ್ಣಾಂಶ ಹೆಚ್ಚಾದ ಪಕ್ಷದಲ್ಲಿ ಇದು ಕಾರ್ಯನಿರ್ವಹಿಸುವುದು ಅನುಮಾನ ಎನ್ನುತ್ತಾರೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು.

High temperature is a main challenge for operating VV PAT machine

ಸೂಕ್ಷ್ಮ ಯಂತ್ರವಾಗಿರುವ ವಿವಿ ಪ್ಯಾಟ್ ಅನ್ನು ಮತಗಟ್ಟೆಯಲ್ಲಿ ಹೆಚ್ಚು ಶಾಖ, ಬೆಳಕು ಇರುವ ಜಾಗದಲ್ಲಿ ಇಡಬಾರದು ಎಂದು ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಹೊರಟ ಸಿಬ್ಬಂದಿಗಳಿಗೆ ಸೂಚನೆ ನೀಡಲಾಯಿತು. ಮೈಸೂರಿನ ಅನೇಕ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಹೆಚ್ಚು ಬಿಸಿಲು ಉಂಟಾದರೆ ಏನು ಮಾಡುವುದು ಎಂಬ ಸಮಸ್ಯೆ ಕಾಡಿದೆ.

 ಚುನಾವಣೆ ಆಯೋಗವು ದೇಶದಲ್ಲೇ 'ಅಪ್ರಯೋಜಕ ಸಂಸ್ಥೆ': ಚಂದ್ರಬಾಬು ನಾಯ್ಡು ಚುನಾವಣೆ ಆಯೋಗವು ದೇಶದಲ್ಲೇ 'ಅಪ್ರಯೋಜಕ ಸಂಸ್ಥೆ': ಚಂದ್ರಬಾಬು ನಾಯ್ಡು

ಬೆಳಗ್ಗೆ 11 ರಿಂದ ಮಧ್ಯಾಹ್ನ 3.30ರ ಅವಧಿಯಲ್ಲಿ ಹೆಚ್ಚು ಬಿಸಿಲಿದ್ದರೆ ವಿವಿ ಪ್ಯಾಟ್ ಕೈಕೊಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಸಮಯದಲ್ಲಿ ಉಷ್ಣಾಂಶ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಇಂದಿನ ಉಷ್ಣಾಂಶದ 34 ಡಿಗ್ರಿ ಸೆಲ್ಸಿಯಸ್ ಇದೆ. 38 - 40 ಡಿಗ್ರಿಗಿಂತ ತಾಪಮಾನ ಹೆಚ್ಚಾದರೆ ವಿವಿ ಪ್ಯಾಟ್ ಕೆಲಸದಲ್ಲಿ ಏರು - ಪೇರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು.

English summary
Lok Sabha Election 2019:In High temperature VV PAT machine will not work properly.So this is a main challenge for election staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X