ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ

|
Google Oneindia Kannada News

ಮೈಸೂರು, ಆಗಸ್ಟ್ 30: ನೈಋತ್ಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್‌ ಅನ್ನು ಯಶಸ್ವಿಯಾಗಿ ತಯಾರು ಮಾಡಿದೆ. ಮೈಸೂರಿನ ವ್ಹೀಲ್ ಶಾಪ್ ಇದನ್ನು ತಯಾರಿಸಿದೆ.

160 ಕಿ. ಮೀ. ವೇಗದಲ್ಲಿ ಚಲಿಸಲು ಸೂಕ್ತವಾದ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್ ಅನ್ನು ತಯಾರು ಮಾಡಲಾಗಿದೆ. ಇಂತಹ ಚಕ್ರಗಳನ್ನು ಮೊದಲ ಬಾರಿಗೆ ಭಾರತೀಯ ರೈಲ್ವೆ ಕಾರ್ಯಾಗಾರದಲ್ಲಿ ತಯಾರು ಮಾಡಲಾಗಿದೆ.

 ಭಾರತೀಯ ರೈಲ್ವೆಯಿಂದ ಸದ್ಯದಲ್ಲೇ ಹೋಂ ಡಿಲಿವರಿ ಸೇವೆ ಭಾರತೀಯ ರೈಲ್ವೆಯಿಂದ ಸದ್ಯದಲ್ಲೇ ಹೋಂ ಡಿಲಿವರಿ ಸೇವೆ

ಮೇಸರ್ಸ್ ಬೊಂಬಾರ್ಡಿಯರ್ ಟ್ರಾನ್ಸ್‌ಪೋರ್ಟೇಶನ್ ಭಾರತದಲ್ಲಿ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ ರೇಕ್‌ಗಳಿಗಾಗಿ ಈ ರೀತಿಯ ಇಎಂಯು ಅಸೆಂಬ್ಲಿಗಳನ್ನು ಬಳಕೆ ಮಾಡುತ್ತದೆ. ಇಂತಹ ಚಕ್ರಗಳ ತಯಾರಿಕೆ ಯೋಜನೆಯನ್ನು ಮೊದಲ ಬಾರಿಗೆ ಆರಂಭಿಸಲಾಗಿದೆ.

ಖಾಸಗಿ ರೈಲು: ಪ್ರೀ ಬಿಡ್ಡಿಂಗ್ ಹಂತದಲ್ಲೇ 23 ಖಾಸಗಿ ಸಂಸ್ಥೆಗಳು ಎಂಟ್ರಿ ಖಾಸಗಿ ರೈಲು: ಪ್ರೀ ಬಿಡ್ಡಿಂಗ್ ಹಂತದಲ್ಲೇ 23 ಖಾಸಗಿ ಸಂಸ್ಥೆಗಳು ಎಂಟ್ರಿ

High Speed Memu Motor Coach Wheel Produced In Mysuru

ಬಿಇಎಂಎಲ್ 225 ಟೈಲರ್ ಕೋಚ್‌ ಕಾರುಗಳಿಗೆ 900 ಟೈಲರ್ ಕೋಚ್ ವ್ಹೀಲ್ ಸೆಟ್‌ಗಳನ್ನು ಮತ್ತು 75 ಮೋಟಾರ್ ಕೋಚ್ ಕಾರುಗಳಿಗೆ 300 ಮೋಟಾರ್ ಕೋಚ್, ವ್ಹೀಲ್ ಸೆಟ್‌ಗಳನ್ನು ತಯಾರು ಮಾಡಲು ಬೇಡಿಕೆ ಸಲ್ಲಿಸಿತ್ತು.

10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ 10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ

ಗಾಜಿಯಾಬಾದ್ ಮತ್ತು ದೆಹಲಿ ನಡುವೆ ಸಂಚಾರ ನಡೆಸುವ ರೈಲುಗಳಿಗಾಗಿ ಈ ವ್ಹೀಲ್‌ಗಳನ್ನು ಬಳಕೆ ಮಾಡಲಾಗುತ್ತದೆ. ಬಿಇಎಂಎಲ್ ಈ ಗಾಲಿಗಳಿಗೆ ಅನುಗುಣವಾಗಿ ರೈಲು ಬೋಗಿಯನ್ನು ತಯಾರು ಮಾಡುತ್ತಿದೆ.

High Speed Memu Motor Coach Wheel Produced In Mysuru

ಮೊದಲ ಹಂತದಲ್ಲಿ 6 ವ್ಹೀಲ್ ಸೆಟ್‌ಗಳನ್ನು ಬಿಇಎಂಎಲ್‌ಗೆ ರವಾನಿಸಲು ಸಿದ್ಧವಾಗಿದೆ. ಇವುಗಳ ವೆಚ್ಚ 2.4 ಕೋಟಿ ರೂ.ಗಳು. ಪಿಸಿಎಂಇ ರವಿ ಕುಮಾರ ಮಾರ್ಗದರ್ಶನದಲ್ಲಿ ಮೈಸೂರು ಕಾರ್ಯಾಗಾರದ ವ್ಯವಸ್ಥಾಪಕ ಟಿ.ಶ್ರೀನಿವಾಸು ಈ ಕೆಲಸವನ್ನು ಮೊದಲ ಬಾರಿಗೆ ಕೈಗೊಂಡಿದ್ದಾರೆ.

English summary
1st time in India south western railways Mysuru rail wheel factory produced high speed memu motor coach wheel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X