ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

SSLC ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಹೇಗೆ ಗೊತ್ತಾ?

|
Google Oneindia Kannada News

ಮೈಸೂರು, ಮಾರ್ಚ್ 25: SSLC ಮತ್ತು PUC ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗೋದು ಈಗ ಹೊಸ ವಿಷಯವಾಗಿ ಉಳಿದಿಲ್ಲ. ಈ ಬಾರಿಯೂ ಮತ್ತೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ಬೆಳಕಿಗೆ ಬಂದತ್ತು. ಇಷ್ಟೆಲ್ಲ ಮುನ್ನೆಚ್ಚರಿಕೆಯ ನಡುವೆಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಏಕೆ? ಹೇಗೆ?

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಸ್ ಎಸ್ ಎಲ್ ಸಿಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿದ್ದ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಹಲವು ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದರು. ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾ ಎಂದು ಶಪಿಸಿಕೊಳ್ಳುತ್ತಿದ್ದರು.

ವಿಜಯಪುರ : ವಾಟ್ಸಪ್‌ನಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ ವಿಜಯಪುರ : ವಾಟ್ಸಪ್‌ನಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ

ಸೋಮವಾರ ಬೆಳಿಗ್ಗೆ ಗಣಿತ ಪರೀಕ್ಷೆ ಆರಂಭವಾಗುತ್ತಿದ್ದಂತೆಯೇ ಮೈಸೂರಿನ ಖಾಸಗಿ ವಿದ್ಯಾರ್ಥಿಯೊಬ್ಬ ಆ ಪ್ರಶ್ನೆ ಪತ್ರಿಕೆಯ ಚಿತ್ರವನ್ನು ಸ್ಮಾರ್ಟ್ ಫೋನ್ ನಲ್ಲಿ ತೆಗೆದು ವಾಟ್ಸ್ಯಾಪ್ ನಲ್ಲಿ ಹರಿಬಿಟ್ಟಿದ್ದ.

Here is how SSLC Mathametic question paper leaked in Mysuru

ಪರೀಕ್ಷಾ ಕೊಠಡಿಗೆ ಮಹಿಳಾ ಶಿಕ್ಷಕರು ಮೇಲ್ವಿಚಾರಕರಾಗಿ ಬಂದಿದ್ದನ್ನು ಕಂಡ ವಿದ್ಯಾರ್ಥಿ ತನ್ನ ಸ್ಮಾರ್ಟ್ ಫೋನ್ ಅನ್ನು ಒಳವಸ್ತ್ರದಲ್ಲಿ ಬಚ್ಚಿಟ್ಟುಕೊಂಡಿದ್ದ. ನಂತರ ಪ್ರಶ್ನೆ ಪತ್ರಿಕೆಯ ಚಿತ್ರವನ್ನು ಕ್ಲಿಕ್ಕಿಸಿ, ಅದಕ್ಕೆ ಉತ್ತರ ಕಳಿಸುವಂತೆ ಕೇಳಿ ಸ್ನೇಹಿತರಿಗೆ ವ್ಹಾಟ್ಸ್ಯಾಪ್ ಮೂಲಕ ಕೇಳಿದ್ದ. ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ತಿಳಿದು ಪ್ರಕರಣ ಭೇದಿಸಿದ ಪೊಲಿಸರು, ಆರೋಪಿ ಮುಜಾಹಿದ್ ಪಾಶಾ ಎಂಬುವವನ್ನು ವಶಕ್ಕೆ ಪಡೆದಿದ್ದಾರೆ. ಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಮೈಸೂರು ಡಿಡಿಪಿಐ ಪಾಂಡುರಂಗ ದೃಢ ಪಡಿಸಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ವಿಜಯಪುರದಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ವರದಿಯಾಗಿತ್ತು. ಸೋಮವಾರ ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ಸೋರಿಕೆಯಾಗಿತ್ತು.

English summary
Here is how SSLC Mathametic question paper leaked in Mysuru. Police detained an accused. Mathametics exam took place today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X