ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬಾವಿಲಾಸ ಅರಮನೆಯ ಬಗ್ಗೆ ನಿಮಗೆ ಗೊತ್ತಿರದ ಕೆಲ ಕುತೂಹಲಕಾರಿ ವಿಷಯಗಳು

|
Google Oneindia Kannada News

ಮೈಸೂರು, ಅಕ್ಟೋಬರ್.08: ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಅರಮನೆಗಳ ನಗರಿ ಎಂದೇ ಪ್ರಸಿದ್ಧವಾಗಿರುವ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಮೈಸೂರು ಅರಮನೆಯ ಬಗ್ಗೆ ಖಚಿತವೆನ್ನುವ ಮಾಹಿತಿ ದೊರೆಯುವುದು 300 ವರ್ಷಗಳ ಹಿಂದೆಯಷ್ಟೇ. ಅಂದರೆ ರಣಧೀರ ಕಂಠೀರವ ನರಸಿಂಹರಾಜ ಒಡೆಯರು ಮೈಸೂರಿನ ಮಹಾರಾಜರಾಗಿದ್ದಾಗ. ಸಿಡಿಲು ಬಡಿದು ಅರಮನೆ ಭಗ್ನಗೊಂಡಿದ್ದರಿಂದ ರಣಧೀರರು ಅರಮನೆಯನ್ನು ಹೊಸದಾಗಿ ರೂಪಿಸಿದರು.

ಭಗ್ನಗೊಂಡಿದ್ದ ಅರಮನೆಯನ್ನು ರಿಪೇರಿ ಮಾಡಿಸಿದರೋ ಅಥವಾ ಅದನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡಿದರೋ ಮಾಹಿತಿ ಅಸ್ಪಷ್ಟ. ಅದು ಹೇಗಾದರೂ ಇರಲಿ. ರಣಧೀರರು ಅರಮನೆಯನ್ನು ನಿರ್ಮಿಸಿದರು ಎಂಬುದಕ್ಕೆ ದಾಖಲೆಗಳಿದೆ.

ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?

ಈ ಅರಮನೆಯಲ್ಲಿ ಹಲವಾರು ಸಮ್ಮುಖಗಳಿದ್ದವು. ಜಂತದ ತೊಟ್ಟಿ, ಸೌಂದರ್ಯ ವಿಲಾಸ ತೊಟ್ಟಿ, ನಾಮತೀರ್ಥ ತೊಟ್ಟಿಗಳನ್ನು, ಹಾಗೆಯೇ ಅಲಗಿನ ಚಾವಡಿಯಲ್ಲಿ ಫಿರಂಗಿ ಕೊತ್ತಲಗಳನ್ನು ಇರಿಸಲಾಗಿತ್ತದೆಂದು ಹೇಳುತ್ತದೆ ಇತಿಹಾಸ. ಅಂಬಾವಿಲಾಸ ಅರಮನೆಯ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...

 ಮರದ ಅರಮನೆ

ಮರದ ಅರಮನೆ

ಕ್ರಿ.ಶ. 1630ರಲ್ಲಿ ಸಿಡಿಲು ಬಡಿದು ಹಾನಿಯಾದ ಅರಮನೆಯನ್ನು ಕಂಠೀರವ ನರಸರಾಜ ಒಡೆಯರು ಅದೇ ಸ್ಥಳದಲ್ಲಿಯೇ ಪುನಃ ನಿರ್ಮಿಸಿದರು. 1801ರ ಒಳಗೆ ಪ್ರಾಚೀನ ಅರಮನೆ ಇದ್ದ ಸ್ಥಳದಲ್ಲಿಯೇ ಅದೇ ನಕ್ಷೆಯಂತೆ ಮರದ ಅರಮನೆಯೊಂದು ನಿರ್ಮಾಣವಾಯಿತ್ತೆಂದು ಐತಿಹಾಸಿಕ ದಾಖಲೆಗಳಿಂದ ನಮಗೆ ತಿಳಿದುಬರುತ್ತದೆ.

ಈ ಅರಮನೆಯು ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದು ಮತ್ತೊಂದು ವಿಶೇಷ. 1897ರಲ್ಲಿ ಆಕಸ್ಮಿಕ ಅಗ್ನಿಸ್ಪರ್ಶದಿಂದಾಗಿ ಈ ಮರದ ಅರಮನೆಯು ನಾಶವಾಯಿತು.

ಆಗಿನ ಮರದ ಅರಮನೆ ಈಗಿನಷ್ಟು ವೈಭವೋಪೇತವಾಗಿ ಇರಲಿಲ್ಲ. ಜೊತೆಗೆ ಬೃಹದಾಕಾರವಾಗಿಯೂ ಇರಲಿಲ್ಲ.

 ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು? ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು?

 ಅರಮನೆಯ ಹಲವು ಭಾಗಗಳು ನಾಶ

ಅರಮನೆಯ ಹಲವು ಭಾಗಗಳು ನಾಶ

ಇದಾದ ಬಳಿಕ ನಮಗೆ ಮತ್ತಷ್ಟು ವಿವರಗಳು ಸಿಗುವುದು ರಣಧೀರನ ನಂತರ 120 ವರ್ಷಗಳ ಮೇಲೆ ಅಂದರೆ 1760ರಲ್ಲಿ. ಆಗ ಸರ್ವಾಧಿಕಾರಿಯಾಗಿ ಹೈದರ್ ಅಲಿ ಇಮ್ಮಡಿ ಕೃಷ್ಣರಾಜ ಒಡೆಯರ್ ರನ್ನು ಅವರ ರಾಜಧಾನಿ ಮೈಸೂರು ಹಾಗೂ ಅವರ ಅರಮನೆಯನ್ನು ವೀಕ್ಷಿಸಲು ಭೇಟಿಕೊಡುವಂತೆ ಆಹ್ವಾನಿಸಿ ಶ್ರೀರಂಗಪಟ್ಟಣದಿಂದ ಕರೆತಂದಾಗ.

ಇದಾದ ಬಳಿಕ ಟಿಪ್ಪು ಕಾಲದಲ್ಲಿ ಅರಮನೆಯ ಹಲವು ಭಾಗಗಳು ನಾಶವಾಯಿತು ಎಂಬುದು ಸಹ ಮಾಹಿತಿ.

ನಂತರ ಅರಸರ ಮೈಸೂರನ್ನು ಕೆಡವುರುಳಿದ ಟಿಪ್ಪು ಅರಮನೆಯ ಅನತಿ ದೂರದಲ್ಲೇ ನಜರಾಬಾದ್ ಹೆಸರಿನ ಹೊಸ ನಗರವನ್ನು ಕಟ್ಟಿಸುವುದಾಗಿ ಹೇಳಿಕೊಂಡ. ಆದರೆ ಪೂರ್ತಿಯಾಗಿ ನಿರ್ಮಾಣವಾಗಲಿಲ್ಲ.

 ಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸ ಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸ

 ವಾಸ್ತುಶಾಸ್ತ್ರದಂತೆ ಅರಮನೆ

ವಾಸ್ತುಶಾಸ್ತ್ರದಂತೆ ಅರಮನೆ

ಇದಾದ ಕೆಲವೇ ವರ್ಷಗಳಲ್ಲಿ ಟಿಪ್ಪು ಸುಲ್ತಾನ ಬ್ರಿಟೀಷರೊಂದಿಗೆ ಯುದ್ದದಲ್ಲಿ ಮಡಿದದ್ದು 1799ರಲ್ಲಿ. ಆಗ ರಾಜಕುಮಾರ ಮುಮ್ಮಡಿ ಕೃಷ್ಣರಾಜ ಒಡೆಯರ್. ಅವರ ಪಟ್ಟಾಭಿಷೇಕ ಅರಮನೆಯಲ್ಲಿ ನಡೆಯಲಿಲ್ಲ ಬದಲಾಗಿ ನಡೆದದ್ದು, ಮೈಸೂರಿನ ಲಕ್ಷ್ಮೀರಮಣ ದೇವಸ್ಥಾನದ ಮುಂಭಾಗ.

ಆದರೆ ಇದಾಗಿ 2 ವರ್ಷದ ಬಳಿಕವೇ ಮತ್ತೆ ಅರಮನೆಯ ಉಲ್ಲೇಖವಾಗುತ್ತದೆ ಅದು ಕರ್ನಲ್ ಆರ್ಥರ್ ವೆಲ್ಲೆಸ್ಲಿ ಬರೆದ ಪತ್ರದಲ್ಲಿ. ತರಾತುರಿಯಲ್ಲಿ ನಿರ್ಮಿಸಲಾಗಿದ್ರೂ ಅರಮನೆ ರಾಜರ ಅರಸು ಮನೆಗೆ ತಕ್ಕಂತೆ ಸುಂದರವಾಗಿತ್ತು.

ಅರಮನೆಯು 245 ಅಡಿ ಉದ್ದ, 156 ಅಡಿ ಅಗಲ ಹಾಗೂ 145 ಅಡಿ ಎತ್ತರವಿತ್ತು. ಅರಮನೆಯ ವಿಸ್ತೀರ್ಣ 85 ಎಕರೆ 30 ಗುಂಟೆ. ಕೋಟೆ ಗೋಡೆ ಪೂರ್ವ, ಪಶ್ಚಿಮ ಮತ್ತು ಉತ್ತರ 1350 ಅಡಿಗಳು. ಸುತ್ತಲಿದ್ದ ಭದ್ರಕೋಟೆಯ ನಡುವೆ ಹಿಂದೂ ಸಂಪ್ರದಾಯ ನಿಷ್ಠ ವಾಸ್ತುಶಾಸ್ತ್ರವನ್ನು ಅನುಸರಿಸಿದಂತೆ ಕಟ್ಟಿದ ಅರಮನೆ ಅದಾಗಿತ್ತು.

 ಸಂಪೂರ್ಣ ನೆಲಕಚ್ಚಿದ ಅರಮನೆ

ಸಂಪೂರ್ಣ ನೆಲಕಚ್ಚಿದ ಅರಮನೆ

ಅಂಬಾವಿಲಾಸ ಅರಮನೆಯಲ್ಲಿ ಬೆಳಕು ಬಿಂಬಿಸುವ ಬಣ್ಣಗಳು ಮತ್ತು ಕಲಾತ್ಮಕ ಕೆತ್ತನೆಯ ಕುಸುರಿ ಕೆಲಸೆ ನಾಲ್ಕು ಭಾರೀ ಕಂಬಗಳು, ಆಮೇಲೊಂದು ಜಗತಿ ರೀತಿಯ ಕೈಸಾಲೆ. ಇಲ್ಲಿ ವಿಶೇಷ ಸಂದರ್ಭಗಳಲ್ಲಿ ರಾಜರು ಪ್ರಜೆಗಳಿಗೆ ದರ್ಶನ ನೀಡುತ್ತಿದ್ದರು.

ಒಟ್ಟಾರೆ 1799ರಲ್ಲಿ ಅರಮನೆಯ ಮರು ಜೀರ್ಣೋದ್ಧಾರ ಪ್ರಾರಂಭವಾಗಿ 1804ರಲ್ಲಿ ಸಂಪೂರ್ಣವಾದಾಗ ನಿರ್ಮಾಣಕ್ಕೆ ತಗುಲಿದ್ದ ಒಟ್ಟು ಖರ್ಚು 2,47,287 ಕಂಠೀರಾಯಿ. ಅಂದರೆ 7, 41,816 ರೂಪಾಯಿ. ಆದರೆ ಅದೃಷ್ಟ ಕೆಟ್ಟಾಗ ದುರಂತಗಳು ಒಂಟಿ -ಒಂಟಿಯಾಗಿ ಬರುವುದಿಲ್ಲ, ಸಾಲು ಸಾಲಾಗಿ ಬರುತ್ತವೆ ಎಂಬಂತೆ. ಮೈಸೂರು ಮಹಾರಾಜರ ಅರಮನೆ ನೆಲಸಮವಾಯಿತು.

ತರಾತುರಿಯಲ್ಲಿ ನಿರ್ಮಿಸಿದ ಕಾರಣಕ್ಕೋ ಏನೋ ಕ್ರಮೇಣ ಶಿಥಿಲವಾಗತೊಡಗಿತು. ಭವ್ಯ ಅರಮನೆ. ಕೊನೆಯದಾಗಿ 1897ರಲ್ಲಿ ಅರಮನೆ ಬೆಂಕಿಗಾಹುತಿಯಾಗಿ ಸಂಪೂರ್ಣ ನೆಲಕಚ್ಚಿತು.

English summary
Ambavilas Palace is a special attraction in Mysore. There are records that the palace was built by the Ranadheera. Here are some interesting information about the palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X