• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಲಿರೈಡ್ ಗೆ ಪ್ರವಾಸಿಗರಿಂದ ಭರಪೂರ ಸ್ಪಂದನೆ, ಈ ಜಾಲಿ ರೈಡ್ ಮತ್ತಷ್ಟು ದಿನ ಮುಂದುವರೆಯಲಿದೆಯಾ?

|

ಮೈಸೂರು, ಅಕ್ಟೋಬರ್. 22: ವೈಭವೋಪೇತ ದಸರಾ ಮಹೋತ್ಸವದ ಅಂಗವಾಗಿ ಕಳೆದ ವಾರವಷ್ಟೇ ಆರಂಭಗೊಂಡ ಹೆಲಿರೈಡ್ ಗೆ ಪ್ರವಾಸಿಗರಿಂದ ಭರಪೂರ ಸ್ಪಂದನೆ ದೊರಕಿದೆ. ಇಲ್ಲಿಯವರೆಗೆ 300ಕ್ಕೂ ಹೆಚ್ಚಿನ ರೈಡ್‌ಗಳನ್ನು ಕಂಡಿದ್ದು, ಇನ್ನೆರಡು ದಿನಗಳು ಮುಂದುವರೆಯುವ ಸಾಧ್ಯತೆ ಇದೆ. ಪ್ರವಾಸಿಗರಿಂದ ಬೇಡಿಕೆ ವ್ಯಕ್ತವಾದರೆ ಮತ್ತೂ ಕೆಲ ದಿನ ವಿಸ್ತರಣೆಯಾಗಲಿದೆ.

ಕಳೆದೆರಡು ವರ್ಷಗಳಿಂದ ದಸರಾದಲ್ಲಿ ಹೆಲಿರೈಡ್ ಆಯೋಜಿಸಲಾಗುತ್ತಿದ್ದು, ಪ್ರವಾಸಿಗರು 10 ನಿಮಿಷಗಳಷ್ಟು ಕಾಲ ನಗರದ ಸೊಬಗನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಈ ಅನುಭವಕ್ಕಾಗಿಯೇ ದಸರೆಗೆ ಬರುವವರೂ ಇದ್ದಾರೆ.

ಮೈಸೂರನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿ..

2016ರಲ್ಲಿ ಮೊದಲ ಬಾರಿಗೆ ಎರಡು ಹೆಲಿಕಾಪ್ಟರ್ ಗಳನ್ನು ಬಳಸಿ ಜಾಲಿರೈಡ್ ಗೆ ಅವಕಾಶ ನೀಡಲಾಗಿತ್ತು. ಆಗ ಸ್ಥಳೀಯರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಮೈಸೂರು ದಸರಾ - ವಿಶೇಷ ಪುರವಣಿ

ಮೊದಲ ವರ್ಷ 2,499 ರೂ ಶುಲ್ಕ ವಿಧಿಸಲಾಗಿತ್ತು. ಸುಮಾರು 3,000 ಮಂದಿ ಹೆಲಿಕಾಪ್ಟರ್ ನಲ್ಲಿ ಜಾಲಿರೈಡ್ ನಡೆಸಿದ್ದರು. ಇದರಿಂದ 75 ಲಕ್ಷ ಆದಾಯ ಬಂದಿತ್ತು. 10 ನಿಮಿಷಗಳ ರೈಡ್‌ಗೆ ಕಳೆದ ಬಾರಿ 2,300 ರೂ ಶುಲ್ಕ ನಿಗದಿಪಡಿಸಲಾಗಿತ್ತು. ಈ ಬಾರಿ 2,399 ರೂ ದರ ಇದೆ. ಮುಂದೆ ಓದಿ...

 ಲಲಿತಮಹಲ್ ಹೆಲಿಪ್ಯಾಡ್ ನಿಂದ ಆರಂಭ

ಲಲಿತಮಹಲ್ ಹೆಲಿಪ್ಯಾಡ್ ನಿಂದ ಆರಂಭ

ಲಲಿತಮಹಲ್ ಹೆಲಿಪ್ಯಾಡ್ ನಿಂದ ಆರಂಭವಾಗುವ ಹೆಲಿರೈಡ್ ಚಾಮುಂಡಿಬೆಟ್ಟ, ಗಾಲ್ಫ್‌ ಕೋರ್ಸ್, ಮೃಗಾಲಯ, ಕಾರಂಜಿ ಕೆರೆ, ಅರಮನೆ, ವಿಶ್ವವಿದ್ಯಾನಿಲಯ, ಕುಕ್ಕರಹಳ್ಳಿ ಕೆರೆ ಹಾಗೂ ನಗರದ ಇತರ ಪಾರಂಪರಿಕ ಕಟ್ಟಡಗಳ ವೈಮಾನಿಕ ದರ್ಶನವನ್ನು ಪ್ರವಾಸಿಗರಿಗೆ ಮಾಡಿಸುತ್ತಿದೆ.

 ಅನುಮತಿ ಪಡೆದ ಕಂಪನಿಗಳಿವು

ಅನುಮತಿ ಪಡೆದ ಕಂಪನಿಗಳಿವು

ಈ ಬಾರಿ ತಂಬಿ ಏವಿಯೇಷನ್ ಹಾಗೂ ಚಿಪ್ಸನ್ ಏವಿಯೇಷನ್ ಎಂಬ ಎರಡು ಕಂಪನಿಗಳು ಹೆಲಿರೈಡ್ ಗೆ ಅನುಮತಿ ಪಡೆದಿವೆ. ಎರಡೂ ಕಂಪನಿಗಳ ತಲಾ ಒಂದೊಂದು ಹೆಲಿಕಾಪ್ಟರ್ ಪ್ರವಾಸಿಗರನ್ನು ಕರೆದೊಯ್ಯುತ್ತಿವೆ.

ಸೂತಕದ ಛಾಯೆಯ ನಡುವೆ ಅರಮನೆಯಲ್ಲಿ ವಿಜಯದಶಮಿ ಆಚರಣೆ

 ವಿಸ್ತರಣೆಗೆ ಚಿಂತನೆ

ವಿಸ್ತರಣೆಗೆ ಚಿಂತನೆ

ಅ.13ಕ್ಕೆ ಆರಂಭವಾದ ಹೆಲಿರೈಡ್ 21ಕ್ಕೆ ಮುಗಿಯಬೇಕಿತ್ತು. ಪ್ರವಾಸಿಗರ ಸ್ಪಂದನೆಗೆ ಅನುಗುಣವಾಗಿ 24ರವರೆಗೂ ಮುಂದುವರೆಸುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿದೆ. ಒಂದು ವೇಳೆ ಹೆಚ್ಚಿನ ಬೇಡಿಕೆ ವ್ಯಕ್ತವಾದರೆ ಮತ್ತಷ್ಟು ದಿನಗಳ ಕಾಲ ಹೆಲಿರೈಡ್ ನ್ನು ವಿಸ್ತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 ಲಾಭವೂ ಇಲ್ಲ, ನಷ್ಟವೂ ಇಲ್ಲ

ಲಾಭವೂ ಇಲ್ಲ, ನಷ್ಟವೂ ಇಲ್ಲ

ಜಿಲ್ಲಾಡಳಿತ ನಿಗದಿ ಮಾಡಿರುವ ದರವು ಸಂಸ್ಥೆಗಳಿಗೆ ಲಾಭವೂ ಇಲ್ಲ ನಷ್ಟವೂ ಇಲ್ಲ ಎಂಬಂತಹ ಪರಿಸ್ಥಿತಿಗೆ ದೂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಲಿಕಾಪ್ಟರ್ ಗೆ ಬಳಸುವ ಇಂಧನ ಬೆಲೆ ಒಂದು ಲೀಟರ್ ಶೇ. 25ರಷ್ಟು ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ಜಿಲ್ಲಾಡಳಿತವು ಪ್ರತಿ ರೈಡ್ ನ ದರವನ್ನು 2,300ರಿಂದ 2,399 ರೂಕ್ಕೆ ಹೆಚ್ಚಿಸಿದೆ.

ಆದರೂ ಭಾರಿ ಲಾಭವೇನೂ ಬರುತ್ತಿಲ್ಲ ಎಂದು ಕಂಪನಿಗಳ ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರವಾಸಿಗರು ಸಹ ಹೆಚ್ಚು ರೈಡ್ ನತ್ತ ಗಮನಹರಿಸಿತ್ತಿದ್ದು, ರೇಟ್ ಹೆಚ್ಚಾಯ್ತು ಎಂಬ ಮಾತು ಸಹ ಕೇಳಿಬರುತ್ತಿದೆ.

ಮೈಸೂರು ದಸರಾ ವೇಳೆ ಭಾರೀ ಸದ್ದು ಮಾಡಿದ ಅಪರೂಪದ ಚಿತ್ರವಿದು...

English summary
Heli Ride which started last week, has received a lot of attention from tourists. It's likely to continue for another two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X