ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಹಲವೆಡೆ ಭಾರೀ ಮಳೆ; ಎಚ್.ಡಿ.ಕೋಟೆಯಲ್ಲಿ ನೆಲಕ್ಕುರುಳಿದ ಮರ

By Rain, Tree, Mysuru, ಮಳೆ, ಮರ, ಮೈಸೂರು
|
Google Oneindia Kannada News

ಮೈಸೂರು, ಮಾರ್ಚ್ 21: ಕೊರೊನಾ ವೈರಸ್ ಆತಂಕ ವ್ಯಾಪಿಸುತ್ತಿರುವ ಬೆನ್ನಲ್ಲೇ ಮೈಸೂರು ನಗರ ಹಾಗೂ ಜಿಲ್ಲೆಯ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಮಳೆಯಾಗಿದ್ದು, ಸಾರ್ವಜನಿಕರಲ್ಲಿ ಒಂದೆಡೆ ಆತಂಕ ಸೃಷ್ಟಿಸುವ ಜತೆಗೆ ಬಿಸಿಲಿನ ತಾಪದಿಂದ ಬಸವಳಿದಿರುವ ಜನರಿಗೆ ಒಂದಿಷ್ಟು ಸಮಾಧಾನ ತಂದಿದೆ.

ಮೈಸೂರು ನಗರ ಹಾಗೂ ಜಿಲ್ಲೆಯ ಹಲವು ಕಡೆಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೂ ಮೋಡಕವಿದ ವಾತಾವರಣವಿತ್ತು. ಅದರಂತೆ ಸಂಜೆ ವೇಳೆಗೆ ಎಚ್.ಡಿ.ಕೋಟೆ, ಹಂಪಾಪುರ, ಹನಗೋಡು, ಹುಣಸೂರು ತಾಲೂಕಿನ ಹಲವೆಡೆಗಳಲ್ಲಿ ಗುಡುಗು, ಗಾಳಿಸಹಿತ ಭಾರೀ ಮಳೆ ಸುರಿಯಿತು. ಸಂಜೆ 7 ಗಂಟೆ ವೇಳೆಗೆ ಮೈಸೂರಿನ ಕೆಲವು ಬಡಾವಣೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಯಿತು.

ಕರ್ನಾಟಕದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ: 2 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆಕರ್ನಾಟಕದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ: 2 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

Heavy Rain In Many Places In Mysuru

ಧರೆಗುರುಳಿದ ಮರ, ವಿದ್ಯುತ್ ಕಂಬ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಸುರಿದ ಗಾಳಿಮಳೆಯಿಂದಾಗಿ ತಾಲೂಕಿನ ಇಟ್ನ ಕಾಲೋನಿಯಲ್ಲಿ ಭಾರೀ ಗಾತ್ರದ ಮರ ಹಾಗೂ ವಿದ್ಯುತ್ ಕಂಬ ಧರೆಗುರುಳಿತು. ಮಳೆ ಗಾಳಿಯಿಂದಾಗಿ ಬೃಹದಾಕಾರದ ಮರವೊಂದು ಮನೆಯ ಮೇಲುರುಳಿದ ಪರಿಣಾಮ ಮನೆ ಬಹುತೇಕ ಶಿಥಿಲಗೊಂಡಿದೆ. ಆದರೆ ಮರ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಅನಾಹುತ ತಪ್ಪಿದೆ. ವಿದ್ಯುತ್ ಕಂಬ ನೆಲಕ್ಕುರುಳಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

English summary
Heavy rain reported in many places of mysuru district yesterday evening. The large tree has fallen in hd kote taluk by this rain,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X