ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಬಳಿಕ ಜೆಡಿಎಸ್-ಬಿಜೆಪಿ ಮೈತ್ರಿ? ಕುಮಾರಸ್ವಾಮಿ ಕೊಟ್ಟರು ಸುಳಿವು

|
Google Oneindia Kannada News

ಮೈಸೂರು, ನವೆಂಬರ್ 21: ಅಲ್ಪ ಸಂಖ್ಯೆಯ ಬಹುಮತದಿಂದ ತೂಗುಯ್ಯಾಲೆಯಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ಸಿಗಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

Recommended Video

ಜೆಡಿಎಸ್ ಜೊತೆ ಮೈತ್ರಿಯ ಸುಳಿವನ್ನು ಕೊಟ್ರಾ ಸಿದ್ದರಾಮಯ್ಯ? |Oneindia kannada

ಜೆಡಿಎಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ಅವರೇ ಹೀಗೊಂದು ಸುಳಿವು ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ, 'ಉಪಚುನಾವಣೆ ಬಳಿಕ ಬಿಜೆಪಿಗೆ ಬೆಂಬಲ ನೀಡುವುದೋ ಬೇಡವೋ ಎಂಬ ಬಗ್ಗೆ ಯೋಚಿಸುತ್ತೇವೆ' ಎಂದಿದ್ದಾರೆ.

ಮೈಸೂರಿನಲ್ಲಿ ಒಂದರ ಮೇಲೊಂದು 5 ಬ್ರೇಕಿಂಗ್ ನ್ಯೂಸ್ ನೀಡಿದ ಕುಮಾರಸ್ವಾಮಿ ಮೈಸೂರಿನಲ್ಲಿ ಒಂದರ ಮೇಲೊಂದು 5 ಬ್ರೇಕಿಂಗ್ ನ್ಯೂಸ್ ನೀಡಿದ ಕುಮಾರಸ್ವಾಮಿ

ಬಿಜೆಪಿಗೆ ಬೆಂಬಲ ನೀಡಿ ಸರ್ಕಾರ ಭಾಗವಾಗುವ ಉಮೇದು ಕುಮಾರಸ್ವಾಮಿ ಅವರ ಮನದ ಮೂಲೆಯಲ್ಲಿ ಇದೆಯೆಂಬುದು ಮೇಲಿನ ಮಾತುಗಳಿಂದ ವೇದ್ಯವಾಗುತ್ತಿದೆ.

ಕನಿಷ್ಠ ಎಂಟು ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳುತ್ತೆ: ಕುಮಾರಸ್ವಾಮಿ

ಕನಿಷ್ಠ ಎಂಟು ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳುತ್ತೆ: ಕುಮಾರಸ್ವಾಮಿ

ಮುಂದುವರೆದು ಮಾತನಾಡಿರುವ ಕುಮಾರಸ್ವಾಮಿ, ''ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲದಿದ್ದರೆ ಸರ್ಕಾರ ಉರುಳುತ್ತದೆ'' ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಹೀಗಿರುವಾಗ ನಾನೇಕೆ ಮೈತ್ರಿ ಬಗ್ಗೆ ಮಾತನಾಡಲಿ' ಎಂದಿದ್ದಾರೆ. ಆ ಮೂಲಕ ಅವರೇ (ಬಿಜೆಪಿ) ಮೊದಲಿಗೆ ಮೈತ್ರಿ ಪ್ರಸ್ತಾವ ತರಲಿ ಎಂಬ ಧ್ವನಿ ಅಡಕವಾಗಿರುವುದು ಗುರುತಿಸಬಹುದು.

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿ ಕೈಸುಟ್ಟುಕೊಂಡಿರುವ ಎಚ್‌ಡಿಕೆ

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿ ಕೈಸುಟ್ಟುಕೊಂಡಿರುವ ಎಚ್‌ಡಿಕೆ

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಕೈಸುಟ್ಟುಕೊಂಡಿರುವ ಜೆಡಿಎಸ್ ಈಗ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದೆಯೇ ಆ ಮೂಲಕ ಬಡವಾಗುತ್ತಿರುವ ಪಕ್ಷಕ್ಕೆ ಶಕ್ತಿ ತುಂಬುವ ಯೋಜನೆ ಹಾಕಿದೆಯೇ ಎಂಬ ವಿಶ್ಲೇಷಣೆಗಳು ಈಗಾಗಲೇ ಹರಿದಾಡುತ್ತಿದೆ.

ಹಿರೇಕೆರೂರು ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಮಾತು

ಹಿರೇಕೆರೂರು ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಮಾತು

ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್ ನಾಮಪತ್ರ ಹಿಂತಗೆತದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, 'ಬಿಜೆಪಿಯು ಒತ್ತಡದ ತಂತ್ರದ ಮೂಲಕ ಚುನಾವಣೆಯನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಯಡಿಯೂರಪ್ಪ ಮಗ, ರಂಭಾಪುರಿ ಸ್ವಾಮಿಗಳು ಒತ್ತಡ ಹೇರಿ ನಮ್ಮ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಮಾಡುವ ಯತ್ನ ನಡೆಸಿದ್ದಾರೆ' ಎಂದರು.

ಕೆ.ಆರ್.ಪೇಟೆಯಲ್ಲಿ ಗೆಲುವಿಗಾಗಿ ಆರಂಭವಾಗಿದೆ ಜೆಡಿಎಸ್ ಗಾಳಕೆ.ಆರ್.ಪೇಟೆಯಲ್ಲಿ ಗೆಲುವಿಗಾಗಿ ಆರಂಭವಾಗಿದೆ ಜೆಡಿಎಸ್ ಗಾಳ

ಶಿವಾಚಾರ್ಯರಿಗೆ ಬಯಸಿ ಟಿಕೆಟ್ ಕೊಟ್ಟಿರಲಿಲ್ಲ: ಎಚ್‌ಡಿಕೆ

ಶಿವಾಚಾರ್ಯರಿಗೆ ಬಯಸಿ ಟಿಕೆಟ್ ಕೊಟ್ಟಿರಲಿಲ್ಲ: ಎಚ್‌ಡಿಕೆ

'ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ನಾವು ಕರೆದು ಟಿಕೆಟ್ ಕೊಡಲಿಲ್ಲ, ಅವರೇ ನಾನು ನಿಮ್ಮ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದಿದ್ದರು, ಅವರ ಅಭಿಮಾನಿಗಳು ಒತ್ತಡ ಹೇರಿದ್ದಕ್ಕೆ ಟಿಕೆಟ್ ಕೊಟ್ಟಿದ್ದು' ಎಂದು ಕುಮಾರಸ್ವಾಮಿ ಹೇಳಿದರು.

English summary
Former CM Kumaraswamy said, We will talk about BJP-JDS coalition after the by elections. He also said If BJP did not win 8 seats government will fall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X