ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಂಡ ತಪ್ಪಿಸಿಕೊಳ್ಳಲು ಹೀಗೆ ಮಾಡಿ ಸಿಕ್ಕಿಬಿದ್ದ ಎಚ್.ಡಿ.ಕೋಟೆ ವ್ಯಕ್ತಿ

|
Google Oneindia Kannada News

ಮೈಸೂರು, ಮಾರ್ಚ್ 14: ವ್ಯಕ್ತಿಯೊಬ್ಬ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಬೈಕ್ ‌ಗೆ ಬೇರೊಬ್ಬರ ಬೈಕ್ ನಂಬರ್ ಅಳವಡಿಸಿಕೊಂಡು ಓಡಾಡುತ್ತಿದ್ದ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ತನ್ನ ತಪ್ಪಿಲ್ಲದಿದ್ದರೂ ಮತ್ತೊಂದು ವಾಹನದ ಮಾಲೀಕ ದಂಡವನ್ನು ತೆರುತ್ತಿದ್ದುದು ಈ ಸಂಗತಿ ಹೊರಬರಲು ಕಾರಣವಾಗಿದೆ. ತಾನು ಸಂಚಾರ ನಿಯಮ ಉಲ್ಲಂಘಿಸದೇ ಇದ್ದರೂ ಪದೇ ಪದೇ ದಂಡ ಬರುತ್ತಿದ್ದುದನ್ನು ಗಮನಿಸಿದ ಬೈಕ್ ಮಾಲೀಕ, ಮೈಸೂರು ನಗರದ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ತಾನು ಯಾವುದೇ ನಿಯಮ ಉಲ್ಲಂಘಿಸದಿದ್ದರೂ ನೋಟೀಸ್ ಏಕೆ ಬರುತ್ತಿದೆ ಎಂದು ವಿಚಾರಿಸಿದ್ದಾರೆ. ಆಗ ಮತ್ತೊಬ್ಬರು ತಮ್ಮ ಬೈಕ್ ನಂಬರ್ ಬಳಸುತ್ತಿರಬಹುದು ಎಂಬ ಸಂಗತಿ ಹೊರಬಂದಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರ

ದೂರು ದಾಖಲಿಸಿಕೊಂಡ ಪೊಲೀಸರು, ಸ್ಕೂಟಿ ಪೆಪ್ ವಾಹನದ ನಂಬರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ನಡುವೆ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಪಡುವಾರಹಳ್ಳಿಯ ಮಾತೃಮಂಡಳಿ ವೃತ್ತದಲ್ಲಿ ಸಂಚರಿಸುತ್ತಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೋ ಇವರ ಗಮನಸೆಳೆದಿದೆ. ಸ್ಕೂಟಿ ಪೆಪ್ ಮಾಲೀಕರು ನೀಡಿದ ದೂರಿನಲ್ಲಿ ದಾಖಲಿಸಿದ್ದ ವಾಹನದ ಸಂಖ್ಯೆಯೇ ಆ ಬೈಕ್ ನದ್ದೂ ಆಗಿತ್ತು.

HD Kote Person Changes His Bikes Number Plate To Avoid Penalty

ಅನುಮಾನಗೊಂಡ ಪೊಲೀಸರು ಆ ವಾಹನವನ್ನು ತಡೆದು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು. ಈ ವೇಳೆ ನಂಬರ್ ಪ್ಲೇಟ್ ವಿಚಾರ ಹೊರಬಂದಿದೆ. ಎಚ್.ಡಿ.ಕೋಟೆಯ ಮುರಬಂಡ ಗ್ರಾಮದ ಸಮೀರ್ ಪಾಷಾ ತಾನು ಎಲ್ಲೆಂದರಲ್ಲಿ ಓಡಾಡುವಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಹೀರೋ ಹೊಂಡಾ ಸ್ಪ್ಲೆಂಡರ್ ಪ್ರೋಗೆ ಸ್ಕೂಟಿ ಪೆಪ್ ದ್ವಿಚಕ್ರ ವಾಹನದ ನಂಬರ್ ಅನ್ನು ಹಾಕಿಕೊಂಡಿದ್ದುದಾಗಿ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಈತ ಮಾಡಿದ ನಿಯಮ ಉಲ್ಲಂಘನೆಯ ದಂಡ ಸ್ಕೂಟಿ ಪೆಪ್ ವಾಹನ ಮಾಲೀಕರ ಮೇಲೆ ದಾಖಲಾಗುತ್ತಿತ್ತು.

ಇದೀಗ ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದ ವಿವಿ ಪುರಂ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

English summary
A person from HD Kote changes his bike number plate to avoid penalty for breaking traffic rules,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X