ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಉದ್ಘಾಟನೆಗಾಗಿ ಕಾದಿದೆ ಪ್ರವಾಸಿ ಮಂದಿರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 4; ಆಡಳಿತರೂಢರ ಕೆಲಸಗಳು ಬರೀ ಆರಂಭದ ಶೂರತನವಾಗಿ ಉಳಿಯುತ್ತಿರುವುದು ಇತ್ತೀಚೆಗೆ ಅಲ್ಲಲ್ಲಿ ಕಂಡು ಬರುತ್ತಿದೆ. ಸರ್ಕಾರಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಾ ಜಿಗುಪ್ಸೆ ಹುಟ್ಟಿಸುತ್ತವೆ. ಒಂದು ವೇಳೆ ಕಾಮಗಾರಿ ಮುಗಿದರೂ ಉದ್ಘಾಟನೆ ಭಾಗ್ಯದಿಂದ ವಂಚಿತವಾಗಿ ಕಾಡುಪಾಲಾಗುತ್ತಿವೆ.

ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ! ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ!

ಇದಕ್ಕೆ ಎಚ್. ಡಿ. ಕೋಟೆಯಲ್ಲಿ ನಿರ್ಮಾಣವಾಗಿ ಉದ್ಘಾಟನೆ ಭಾಗ್ಯ ಕಾಣದೆ ಕಾಡುಪಾಲಾಗುತ್ತಿರುವ ಸರ್ಕಾರಿ ಪ್ರವಾಸಿ ಮಂದಿರ ಉದಾಹರಣೆಯಾಗಿದೆ. ಸುಸಜ್ಜಿತ ಕಟ್ಟಡದೊಂದಿಗೆ ಕಂಗೊಳಿಸುತ್ತಿರುವ ಈ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೆ ಮತ್ತೆ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಕಾಡು ಪಾಲಾಗುತ್ತಿದೆಯಾ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

 ಹಂಪಿಯಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ ಹಂಪಿಯಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ

ಹಾಗೆ ನೋಡಿದರೆ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮಾತಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ. ಬಹುಶಃ ಅದು ಸರ್ಕಾರಿ ನೌಕರರಿಗಷ್ಟೆ ಸೀಮಿತವಾಗಿದೆ. ಸಾರ್ವಜನಿಕರು ಮಾತ್ರ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಹೈರಾಣರಾಗುತ್ತಿದ್ದಾರೆ. ಸರ್ಕಾರದ ಆಡಳಿತದಲ್ಲಿ ಉನ್ನತ ಸ್ಥಾನದಲ್ಲಿರುವವರು ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

ಮೈಸೂರು ಪೊಲೀಸರ ಜನಸ್ನೇಹಿ ವ್ಯವಸ್ಥೆ; ಎಷ್ಟು ದಂಡ ಸಂಗ್ರಹ? ಮೈಸೂರು ಪೊಲೀಸರ ಜನಸ್ನೇಹಿ ವ್ಯವಸ್ಥೆ; ಎಷ್ಟು ದಂಡ ಸಂಗ್ರಹ?

4 ಕೋಟಿ ರೂ. ವೆಚ್ಚದ ಕಟ್ಟಡ

4 ಕೋಟಿ ರೂ. ವೆಚ್ಚದ ಕಟ್ಟಡ

ಬಹುದಿನದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಎಚ್. ಡಿ. ಕೋಟೆ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದ ಹಿಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರವಾಸಿ ಮಂದಿರ ನಿರ್ಮಾಣ ಮಾಡಿದೆ. ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡು ವರ್ಷವೇ ಕಳೆದಿದೆ. ಆದರೆ ಗುತ್ತಿಗೆದಾರ ಮಾತ್ರ ಇಲಾಖೆಗೆ ಕಟ್ಟಡವನ್ನು ಹಸ್ತಾಂತರ ಮಾಡಿಲ್ಲ ಎನ್ನಲಾಗಿದೆ.

ಶೆಡ್‌ಗಳನ್ನು ತೆರವುಗೊಳಿಸಿಲ್ಲ

ಶೆಡ್‌ಗಳನ್ನು ತೆರವುಗೊಳಿಸಿಲ್ಲ

ಒಂದು ಸುಂದರ ಕಟ್ಟಡಕ್ಕೆ ಕಪ್ಪು ಚುಕ್ಕೆ ಎಂಬಂತೆ ಗಿಡಗಂಟಿಗಳು ಬೆಳೆದಿದ್ದು ಕಟ್ಟಡ ಕಾಡುಪಾಲಾದಂತೆ ಭಾಸವಾಗುತ್ತಿದೆ. ಈ ಬಗ್ಗೆ ನೂತನವಾಗಿ ಇಲಾಖೆಗೆ ಬಂದಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್. ರಾಜಯ್ಯ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇಲ್ಲಿ ಪ್ರವಾಸಿ ಮಂದಿರ ಕಟ್ಟಣ ನಿರ್ಮಾಣಗೊಂಡು ಇನ್ನೂ ಉದ್ಘಾಟನೆಯಾಗದೆ ಇರುವುದಕ್ಕೆ ಸಾರ್ವಜನಿಕರ ಬೇಸರವಿಲ್ಲ. ಆದರೆ ಈ ಕಟ್ಟಡ ನಿರ್ಮಾಣ ಮಾಡಲು ಬಂದ ಕಾರ್ಮಿಕರು ಇಲ್ಲಿಯೇ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದಾರೆ. ಕೆಲಸ ಮುಗಿದರೂ ಇಲ್ಲಿಂದಲೇ ಬೇರೆಡೆಗೆ ಕೆಲಸಕ್ಕೆ ತೆರಳುತ್ತಿದ್ದಾರೆ.

ಬಿಹಾರ ಮೂಲದ ಕಾರ್ಮಿಕರು

ಬಿಹಾರ ಮೂಲದ ಕಾರ್ಮಿಕರು

ಇಲ್ಲಿರುವ ಕಾರ್ಮಿಕರು ಬಿಹಾರ ಮೂಲದವರಾಗಿದ್ದು, ಪ್ರತಿದಿನ ಕುಡಿದು ಗಲಾಟೆ ಮಾಡುವುದು, ಅರಚಾಡುವುದು, ಕಿರುಚಾಡುವುದು ಮಾಡುತ್ತಿದ್ದಾರೆ. ಇವರು ಯಾರು ಎಂಬುದೇ ಸ್ಥಳೀಯರಿಗೆ ಗೊತ್ತಿಲ್ಲದ ಕಾರಣ ಕೂಡಲೇ ಕಾರ್ಮಿಕರ ಶೆಡ್‍ಗಳನ್ನು ತೆರವುಗೊಳಿಸಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಈ ಶೆಡ್‍ಗಳಲ್ಲಿ ಸುಮಾರು 30 ರಿಂದ 40 ಜನ ವಾಸ್ತವ್ಯ ಹೂಡಿದ್ದು, ಇವರೆಲ್ಲರೂ ಬಿಹಾರ ರಾಜ್ಯದ ಶಿವೈ ಜಿಲ್ಲೆಯವರು ಎಂದು ಹೇಳಲಾಗುತ್ತಿದೆ. ಇದೀಗ ಇಲ್ಲಿ ಕೆಲಸವಿಲ್ಲದ ಕಾರಣ ಬೇರೆ ಸ್ಥಳಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಕೆಲಸ ಮಾಡಿ ಮತ್ತೆ ಇದೇ ಶೆಡ್‍ಗಳಲ್ಲೇ ಬಂದು ಉಳಿದುಕೊಳ್ಳುತ್ತಿರುವುದು ಮತ್ತು ರಾತ್ರಿಯಾಯಿತೆಂದರೆ ದಾಂಧಲೆ, ಜೂಜಾಟ, ಮದ್ಯಪಾನ ಮಾಡುವುದು ಮಾಮೂಲಿಯಾಗಿದೆ.

ತೆರವುಗೊಳಿಸುತ್ತಾರಾ ಕಾರ್ಮಿಕರ ಶೆಡ್?

ತೆರವುಗೊಳಿಸುತ್ತಾರಾ ಕಾರ್ಮಿಕರ ಶೆಡ್?

ಕಾರ್ಮಿಕರ ಶೆಡ್ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಏಕೆಂದರೆ ಇವರು ನಿರ್ಮಿಸಿಕೊಂಡಿರುವ ಶೆಡ್‍ಗೆ ಹೊಂದಿಕೊಂಡಂತೆ ಪಟ್ಟಣ ನ್ಯಾಯಾಲಯದ ನ್ಯಾಯಾಧೀಶರು ವಾಸ ಮಾಡುವ ಸರ್ಕಾರಿ ವಸತಿ ಗೃಹ ಹಾಗೂ ಶೆಡ್‍ನ ಮುಂಭಾಗ ಸರ್ಕಾರಿ ಬಾಲಕಿಯರ ಶಾಲಾ ಕಾಲೇಜುಗಳ ಹಾಸ್ಟೆಲ್ ಇದೆ. ಆದ್ದರಿಂದ ಕೂಡಲೇ ಇಲ್ಲಿಂದ ಶೆಡ್‍ಗಳನ್ನು ತೆರವು ಮಾಡಿ ಎಂಬ ಒತ್ತಾಯಗಳನ್ನು ಸ್ಥಳೀಯರು ಮಾಡುತ್ತಿದ್ದಾರೆ. ಸಂಬಂಧಿಸಿದವರು ಈ ಸಂಬಂಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

English summary
The inspection bungalow built in the cost of 4 crore at Mysuru district H. D. Kote waiting for inauguration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X