• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿಗೆ ಕೊರೊನಾ ವಿಶೇಷಾಧಿಕಾರಿಯಾಗಿ ಹರ್ಷ ಗುಪ್ತಾ ನೇಮಕ

By ಮೈಸೂರು ಪ್ರತಿನಿಧಿ
|

ಮೈಸೂರು, ಏಪ್ರಿಲ್ 14: ರಾಜಧಾನಿ ಬೆಂಗಳೂರಿನ ಬಳಿಕ ಅತಿಹೆಚ್ಚು ಕೊರೊನಾ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ವಿಶೇಷಾಧಿಕಾರಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತಾ ಅವರನ್ನು ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

   ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

   "ಬೆಂಗಳೂರಿನ ನಂತರ ಮೈಸೂರು ಕೊರೊನಾ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿರ್ವಹಣೆ, ಜಿಲ್ಲಾಧಿಕಾರಿಗಳಿಗೆ ಸಹಕಾರ ನೀಡುವ ಸಲುವಾಗಿ ನೇಮಕ ಮಾಡಲಾಗಿದೆ. ಕೊರೊನಾ ನಿರ್ವಹಣೆಗಾಗಿ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ನೇಮಿಸುವಂತೆ ಮನವಿ ಮಾಡಿದ್ದೆವು.‌ ಇದಕ್ಕೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

   ಅವರು ನಿನ್ನೆಯೇ ಮೈಸೂರಿಗೆ ಬಂದು ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೊರೊನಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಕುರಿತು ವಿವಿಧ ಅಧಿಕಾರಿಗಳಿಂದ ಸಲಹೆ ಪಡೆದಿದ್ದು ಮುಂದಿನ ಕಾರ್ಯತಂತ್ರ ಕೂಡ ರೂಪಿಸಲಿದ್ದಾರೆ.

   "ನಿಮ್ಮ ಸ್ಪಂದನೆಗೆ ನಾನು ಸದಾ ಸಿದ್ಧ" ಮೈಸೂರು ನೂತನ ಉಸ್ತುವಾರಿ ಸಚಿವರ ಅಭಯ

   ಈ ನಡುವೆ "ಜುಬಿಲಿಯಂಟ್ ಕಾರ್ಖಾನೆಯ ತನಿಖೆಗಾಗಿ ಹರ್ಷಗುಪ್ತ ಅವರನ್ನು ನೇಮಿಸಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ ಸೋಮಶೇಖರ್.

   English summary
   As coronavirus cases increasing in mysuru district, IAS officer Harshaguptha has appointed as special officer for coronavirus,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X