ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಮಹಿಳೆಯಿಂದ ಕಿರುಕುಳ; ಮಾಜಿ ಪ್ರಿಯಕರನಿಂದ ಪ್ರತಿಭಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 24: ಮಹಿಳೆಯಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಮೈಸೂರಿನ ಜಯಲಕ್ಷ್ಮೀ ಪುರಂ ನಿವಾಸಿ ಬಾಲಕೃಷ್ಣ ಮತ್ತು ಅವರ ಕುಟುಂಬ ನ್ಯಾಯಕ್ಕಾಗಿ ಒತ್ತಾಯಿಸಿ ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿತು.

ಮಂಜುಳ, ಸುಶೀಲ, ಜಾನು ಮತ್ತು ಪೊಲೀಸರಿಂದ ಕಿರುಕುಳವಾಗುತ್ತಿದೆ ಎಂದು ಬಾಲಕೃಷ್ಣ ಕುಟುಂಬಸ್ಥರು ಆರೋಪಿಸಿದ್ದಾರೆ. ""ಮಂಜುಳ ಅವರ ಜೊತೆ ನಾನು ಕೆಲವು ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿದ್ದೇನೆ. ಅದರ ಪ್ರತಿಫಲವಾಗಿ ನನಗೆ ಒಂದು ಹೆಣ್ಣು ಮಗು ಇದೆ. ಆದರೆ ನಾನು ಮಂಜುಳ ಅವರನ್ನು ಮದುವೆಯಾಗಿಲ್ಲ'' ಎಂದು ಬಾಲಕೃಷ್ಣ ಹೇಳಿದರು.

ಮೈಸೂರು: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವುಮೈಸೂರು: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು

ಮಂಜುಳ ಅವರಿಗೆ ಮತ್ತೊಬ್ಬನ ಜೊತೆ ಮದುವೆಯಾಗಿ ಒಂದು ಗಂಡು ಮಗು ಕೂಡಾ ಇದೆ. ಹೀಗಿರುವಾಗ ವಿನಾಃ ಕಾರಣ ಮಂಜುಳಾ ಅವರು ನ್ಯಾಯಾಲಯದಲ್ಲಿ ದಾವೆ ಹೂಡುವ ಜೊತೆಗೆ ಪೊಲೀಸ್ ಠಾಣೆಗೆ ದೂರು ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Harassment From Woman; Protest By Ex-Boyfriend And Family

ಕಳೆದ ಎರಡು ವರ್ಷಗಳಿಂದ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಸ್ತುತ ಹೆಣ್ಣು ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನ್ಯಾಯಾಲಯ ನನಗೆ ವಹಿಸಿದೆ. ಮಂಜುಳ ಅವರು ನನ್ನ ಹೆಂಡತಿಯಲ್ಲ. ಮಂಜುಳ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಸುಶೀಲ ಮತ್ತು ಆಕೆಯ ಪತಿ ಜಾನು ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

ಪೊಲೀಸರು ಎಂದು ಹೇಳಿಕೊಂಡು ಕೆಲವರು ಬೇಹುಗಾರಿಕೆ ನಡೆಸುವ ಜೊತೆಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಪೊಲೀಸ್‌ ಆಯುಕ್ತರಿಗೆ ದೂರು ನೀಡಲಾಗಿದೆ ಎಂದರು.

English summary
Balakrishna, a resident of Jayalakshmi Puram in Mysuru, and his family staged a protest in front of the Mysuru court Gandhi statue today demanding justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X