ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಅರ್ಬನ್ ಹಾತ್ ನಲ್ಲಿ ಮಾ.8ರವರೆಗೆ ಕರಕುಶಲ ಪ್ರದರ್ಶನ ಮೇಳ

|
Google Oneindia Kannada News

ಮೈಸೂರು, ಮಾರ್ಚ್ 03: ನಗರದ ರಿಂಗ್ ರಸ್ತೆಯ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಸ್ ‌ಎಸ್‌ಎಸ್ ಮೈಸೂರು ಅರ್ಬನ್ ಹಾತ್ ‌ನಲ್ಲಿ ಸದಾ ಒಂದಲ್ಲ ಒಂದು ರೀತಿಯ ಮೇಳ, ವಸ್ತು ಪ್ರದರ್ಶನ ನಡೆಯುತ್ತಿರುತ್ತದೆ. ಈ ಬಾರಿ ಡೇ-ನಲ್ಮ್ ಅಭಿಯಾನದಡಿಯ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ರಾಜ್ಯಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭಗೊಂಡಿದ್ದು, ಮಾರ್ಚ್ 8ರವರೆಗೆ ಈ ಮೇಳ ನಡೆಯುತ್ತಿದೆ.

ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕೇಂದ್ರ ಸರ್ಕಾರದಿಂದ ಪುರಸ್ಕೃತವಾದ ದೀನ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವ ಸಹಾಯ ಗುಂಪುಗಳನ್ನು ರಚಿಸಿ ಅವರು ಉತ್ಪಾದಿಸಿದ ವಸ್ತುಗಳ ಸಂಗ್ರಹ ಇಲ್ಲಿವೆ.

ಹೊನ್ನಾಳಿಯಲ್ಲಿ ಕೃಷಿಮೇಳ ಉದ್ಘಾಟಿಸಲಿರುವ ಶಿವರಾಜಕುಮಾರ್ಹೊನ್ನಾಳಿಯಲ್ಲಿ ಕೃಷಿಮೇಳ ಉದ್ಘಾಟಿಸಲಿರುವ ಶಿವರಾಜಕುಮಾರ್

Handicraft Exhibition In Mysuru Urban Hath Till March 8

ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ಅವುಗಳಿಗೆ ಉತ್ತೇಜನ ನೀಡುವುದು ಈ ಮೇಳದ ಪ್ರಮುಖ ಉದ್ದೇಶ. ಸುಮಾರು 50 ಮಳಿಗೆಗಳಲ್ಲಿ ಆಕರ್ಷಣೀಯ ಕರಕುಶಲ ವಸ್ತುಗಳು, ಕೈಮಗ್ಗ ವಸ್ತ್ರಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಕೈಮಗ್ಗದ ಹೊದಿಕೆಗಳು, ವಿವಿಧ ಲೋಹ, ಝರಿ ಕಸೂತಿಗಳು, ಸಿದ್ಧ ಉಡುಪುಗಳು, ಚರ್ಮ ಮತ್ತು ಮರಗಳಿಂದ ಮಾಡಿದ ಆಟಿಕೆ ಮತ್ತು ಬೊಂಬೆಯ ಸಾಮಾನುಗಳು, ಗೃಹಬಳಕೆಯ ವಸ್ತುಗಳು, ಉತ್ತರ ಕರ್ನಾಟಕದ ರುಚಿಕರವಾದ ತಿಂಡಿ ಪದಾರ್ಥಗಳು, ಕಸೂತಿ ಮಾಡಿದ ಬ್ಯಾಗುಗಳು, ಕೃತಕ ಆಭರಣಗಳು, ತಾಮ್ರದ ಪಾತ್ರೆಗಳು, ಮುತ್ತಿನ ಮತ್ತು ಏಲಕ್ಕಿ ಹಾರ, ಮಹಿಳೆಯರ ವ್ಯಾನಿಟಿ ಬ್ಯಾಗ್‌ಗಳು, ಸೆಣಬಿನ ಚೀಲಗಳು, ಪಾದರಕ್ಷೆಗಳು, ಕಸೂತಿ ಸೀರೆಗಳು, ಆಕರ್ಷಣೀಯ ಆಲಂಕಾರಿಕ ವಸ್ತುಗಳು ಅನಾವರಣಗೊಂಡಿವೆ.

Handicraft Exhibition In Mysuru Urban Hath Till March 8

ವಿವಿಧ ಬಗೆಯ ಹೂದಾನಿಗಳು, ಆಕರ್ಷಕವಾದ ಕೃತಕ ಹೂಗಳು, ಆಲಂಕಾರಿಕ ವಸ್ತುಗಳು ಮೇಳದಲ್ಲಿವೆ. ಮಹಿಳೆಯರೇ ತಯಾರಿಸಿರುವ ಪಾದರಕ್ಷೆಗಳು, ಸಣ್ಣ ಪರ್ಸ್ ನಿಂದ ಹಿಡಿದು ದೊಡ್ಡ ಚೀಲದವರೆಗಿನ ಉತ್ಪನ್ನಗಳು ಆಕರ್ಷಕವಾಗಿವೆ. ರಾಯಚೂರು ಜಿಲ್ಲೆ ಸಿಂಧನೂರಿನ ರೇಣುಕಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ಕೌದಿ, ಬಿದಿರಿನ ಉತ್ಪನ್ನಗಳಾದ ಬೀಸಣಿಕೆ, ಗಾಳಿ ಗಿರಿಕೆ, ಮಂಕರಿ, ಮೊರ, ಇಡ್ಲಿ ಬಟ್ಟಲುಗಳು ಗಮನ ಸೆಳೆಯುತ್ತಿವೆ. ಬಗೆ ಬಗೆಯ ಖಾದ್ಯಗಳು, ಕುರುಕಲು ತಿಂಡಿಗಳು, ಫಿನಾಯಿಲ್, ಸೋಪ್ ಪೌಡರ್‌ಗಳು, ಗೃಹಾಲಂಕಾರ ವಸ್ತುಗಳು, ಜೂಟ್ ಮತ್ತು ಉಲ್ಲನ್ ವಸ್ತುಗಳು, ಬಟ್ಟೆ ಚೀಲಗಳು, ಪೇಪರ್, ಸೆಣಬಿನ ಚೀಲಗಳು, ಇಳಕಲ್ ಸೀರೆಗಳು ಆಕರ್ಷಿಸುತ್ತವೆ.

English summary
Art and handicraft exhibition and sale of products made by women's self-help groups under the Day-Nalm campaign is being held until March 8 at JSS Mysuru Urban Hath, located in the Hebbal industrial area of ​​the city's Ring Road,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X