ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮಾ.26ರಿಂದ ಕೈಮಗ್ಗ ಕರಕುಶಲ ಸಂಭ್ರಮ

|
Google Oneindia Kannada News

ಮೈಸೂರು, ಮಾರ್ಚ್ 23: ನೇಕಾರರು ಮತ್ತು ನೇಕಾರರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳು ಹೆಚ್ಚು ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಹಾಗೂ ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಮೈಸೂರಿನ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಕರಕುಶಲ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ದೆಹಲಿಯ (ಕೈಮಗ್ಗ) ಜವಳಿ ಮಂತ್ರಾಲಯ, ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ವತಿಯಿಂದ ಮಾ.26 ರಿಂದ ಏ.11ರವರೆಗೆ ಪ್ರದರ್ಶನ ನಡೆಯುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಮೈಸೂರು ವಿವಿಯಲ್ಲಿ ಡಿವಿಜಿ ಮತ್ತು ಬಿ.ಜಿ.ಎಲ್ ಸ್ವಾಮಿ ಗ್ಯಾಲರಿ ಲೋಕಾರ್ಪಣೆಮೈಸೂರು ವಿವಿಯಲ್ಲಿ ಡಿವಿಜಿ ಮತ್ತು ಬಿ.ಜಿ.ಎಲ್ ಸ್ವಾಮಿ ಗ್ಯಾಲರಿ ಲೋಕಾರ್ಪಣೆ

ಕರಕುಶಲ ವೃತ್ತಿಯನ್ನು ಅವಲಂಬಿಸಿರುವ ಕುಶಲಕರ್ಮಿಗಳು ಮತ್ತು ನೇಯ್ಗೆಯನ್ನು ನಂಬಿರುವ ನೇಕಾರರು ಹೀಗೆ ಆಯಾಯ ವೃತ್ತಿಯನ್ನು ನಂಬಿ ಬದುಕುತ್ತಿರುವರನ್ನು ಉತ್ತೇಜಿಸಿ ಒಂದೇ ಸೂರಿನಡಿ ಮಾರುಕಟ್ಟೆಯನ್ನು ಕಲ್ಪಿಸುವ ಸಲುವಾಗಿಯೇ ಕರಕುಶಲ ವಸ್ತುಪ್ರದರ್ಶನವನ್ನು ನಡೆಸಲಾಗುತ್ತಿದೆ.

Handicraft Exhibition At Urban Haths In Mysuru

ಈ ಕರಕುಶಲ ವಸ್ತುಪ್ರದರ್ಶನದಲ್ಲಿ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜರಾತ್, ಜಾರ್ಕಾಂಡ್, ಪಶ್ಚಿಮ ಬಂಗಾಳ, ಒರಿಸ್ಸಾ, ಹರಿಯಾಣ, ಬಿಹಾರ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ, ತೆಲಾಂಗಾಣ, ಕೇರಳ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಗುಲ್ಬರ್ಗ ಮತ್ತು ಇಳಕಲ್ ಕೈಮಗ್ಗ ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು 50ಕ್ಕೂ ಹೆಚ್ಚು ನೇಕಾರರು ಮತ್ತು ನೇಕಾರರ ಸಹಕಾರ ಸಂಘಗಳು ಪಾಲ್ಗೊಳ್ಳಲಿವೆ.

Handicraft Exhibition At Urban Haths In Mysuru

ಇದಲ್ಲದೆ, ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ ಗಳು, ಟವಲ್‍ಗಳು, ಕುಶನ್ ಕವರ್ ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‍ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು ಕೂಡ ಪ್ರದರ್ಶನದಲ್ಲಿವೆ.

ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿ ತಯಾರಾಗಿರುವ ಪದಾರ್ಥಗಳೆಲ್ಲವೂ ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ತಲುಪುತ್ತಿದೆ. ಒಟ್ಟಾರೆಯಾಗಿ ಈ ಕರಕುಶಲ ವಸ್ತುಪ್ರದರ್ಶನವು ವೀಕ್ಷಕರನ್ನು ಸೆಳೆಯುತ್ತಿರುವುದಂತು ನಿಜ.

English summary
A handicrafts exhibition has been organized in the JSS Mysuru Urban Hath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X