• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀರಂಗಪಟ್ಟಣದ ವಿಕಲಚೇತನ ದಯಾಮರಣ ಕೋರಿದ್ದೇಕೆ?

By Prasad
|

ಮಂಡ್ಯ, ಆಗಸ್ಟ್ 25 : ಒಂದೆಡೆ ಅಂಗಡಿಗೆ ಬೆಂಕಿ ಹಚ್ಚಿ ಕಿರುಕುಳ ನೀಡುವ ದುಷ್ಕರ್ಮಿಗಳು, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ.. ಇದರಿಂದ ಬೇಸತ್ತ ವಿಕಲಚೇತನರೊಬ್ಬರು "ಬದುಕಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನನ್ನ ಕುಟುಂಬಕ್ಕೆ ದಯಾಮರಣ ಕಲ್ಪಿಸಿ" ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ ಹೃದಯವಿದ್ರಾವಕ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಶ್ರೀರಂಗಪಟ್ಟಣದ ಜೈನ ಬಸದಿ ಹಿಂಭಾಗದ ಬೀದಿಯಲ್ಲಿ ವಾಸವಾಗಿರುವ ಎನ್. ರವಿಕುಮಾರ್ (40) ದಯಾಮರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ನೊಂದ ವಿಕಲಚೇತನ.

ಮನವಿಯಲ್ಲಿ ಏನಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉಚಿತವಾಗಿ ಪೆಟ್ಟಿಗೆ ಅಂಗಡಿ ಮತ್ತು ಸಾಲದ ರೂಪದಲ್ಲಿ ಧನ ಸಹಾಯ ಪಡೆದು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಗದ ಅನುಮತಿ ಪಡೆದು 12 ವರ್ಷಗಳಿಂದ ಪೆಟ್ಟಿಗೆ ಅಂಗಡಿ ವ್ಯಾಪಾರ ನಡೆಸುತ್ತಿದ್ದೆನು. ಆದರೆ, 6 ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿ ಬಸ್ ನಿಲ್ದಾಣದ ರಸ್ತೆ ಬದಿಯಲ್ಲಿ ಅಂಗಡಿ ಇಡುವಂತೆ ಪುರಸಭೆ ವತಿಯಿಂದ ಜಾಗ ನೀಡಿದ್ದಾರೆ.[42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ]

ಆದರೆ, ಅಕ್ಕಪಕ್ಕದ ಅಂಗಡಿಯ ವ್ಯಾಪಾರಸ್ಥರು ತಮ್ಮಗಳ ಅಂಗಡಿಗೆ ಅಡ್ಡಲಾಗಿದೆ ಎಂಬ ಕಾರಣಕ್ಕೆ ಹಾಗೂ ನಾನು ಅಂಗವಿಕಲ ಎಂಬುದನ್ನು ಮನಗೊಂಡು ಎರಡು ಬಾರಿ ನನ್ನ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಬಹಳ ನಷ್ಟವಾಗಿದೆ. ಆದ್ದರಿಂದ ಬಸ್ ನಿಲ್ದಾಣದ ಜಾಗದಲ್ಲಿ ತುಂಬಾ ತೊಂದರೆ ಇರುವುದರಿಂದ ನನಗೆ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅಂಗಡಿ ಇಟ್ಟುಕೊಳ್ಳಲು ಅನುಮತಿ ಕೋರಿ 6 ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಅನುಮತಿಯಾಗಲೀ ಅಥವಾ ಪರಿಹಾರವಾಗಲೀ ನನಗೆ ನೀಡಿಲ್ಲ.

ಐದಾರು ವರ್ಷಗಳಿಂದ ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಮೂವರು ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ, ನನಗೆ ವಯಸ್ಸಾದ ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದು, ಅವರ ಜವಾಬ್ದಾರಿ ನನ್ನ ಮೇಲಿರುವುದರಿಂದ ಬದುಕಲು ತುಂಬಾ ಕಷ್ಟಕರವಾಗಿದೆ.[ದಯಾಮರಣ ಕೋರಿದ್ದ ಪಿಡಿಓಗಳು ಕರ್ತವ್ಯಕ್ಕೆ ವಾಪಸ್]

ಅಲ್ಲದೆ, ಜೀವನ ನಿರ್ವಹಣೆಗಾಗಿ ಬಿಪಿಎಲ್ ಪಡಿತರ ಕಾರ್ಡ್ ಹೊಂದಲು ಅರ್ಜಿ ಸಲ್ಲಿಸಿದ್ದೆ. ಆದರೆ, ಸರ್ಕಾರದಿಂದ ನೀಡಿರುವ ಅಂಗವಿಕಲ ತ್ರಿಚಕ್ರವಾಹನವನ್ನು ಚಲಾಯಿಸುತಿದ್ದಾಗ ಅಧಿಕಾರಿಗಳು ಅದನ್ನು ಗಮನಿಸಿ ನನಗೆ ಎಪಿಎಲ್ ಕಾರ್ಡ್ ನೀಡಿರುತ್ತಾರೆ.

ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರೂ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿಗಳು ನನ್ನ ಸಮಸ್ಯೆಗೆ ಮುಕ್ತಿ ನೀಡಿಲ್ಲ. ನಾನು ವಿಕಲಚೇತನಾಗಿರುವುದರಿಂದ ನನಗೆ ಎರಡೂ ಕಿವಿಗಳು ಕೇಳುವುದಲ್ಲ ಹಾಗೂ ಕಣ್ಣಿನ ಸಮಸ್ಯೆ ಇರುವುದರಿಂದ ಯಾರೂ ಕೆಲಸ ಕೊಡುವುದಿಲ್ಲ.

ಸರ್ಕಾರ ನೀಡುವ ತಿಂಗಳ ಮಾಸಾಸನದಲ್ಲಿ ನನ್ನ ಸಂಸಾರ ನಿಭಾಹಿಸಲು ಹಣಕಾಸು ಸಾಲದೆ ಜೀವನ ಕಷ್ಟಕರವಾಗಿದ್ದು, ನಾನು ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳು ಸಾಯುವುದೇ ಲೇಸು ಎಂದು ತೀರ್ಮಾನಿಸಿದ್ದು, ದಯಾಮರಣಕ್ಕೆ ಅನುಮತಿ ನೀಡಿ. ಇದು ಜಿಲ್ಲಾಧಿಕಾರಿಗೆ ವಿಕಲಚೇತನ ರವಿಕುಮಾರ್ ಸಲ್ಲಿಸಿರುವ ಮನವಿಯ ಸಾರಾಂಶವಾಗಿದೆ. [ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unable to bear the torture of miscreants and negligence of govt authorities and unable to lead a healthy life, a handicapped person in Srirangapatna has applied for euthanasia. Will Siddaramaiah listen to heart wrenching story of Ravi Kumar?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more