ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರದಲ್ಲಿ ನಿತ್ಯ ಅರ್ಧ ದಿನ ಸ್ವಯಂಪ್ರೇರಿತ ಲಾಕ್‌ ಡೌನ್‌

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 14: ಇಲ್ಲಿಗೆ ಸಮೀಪದ ತಿ.ನರಸೀಪುರ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಾಣು ಹರಡದಂತೆ ತಡೆಯಲು ಜು.13ರಿಂದ ಪಟ್ಟಣದಲ್ಲಿ ಅರ್ಧ ದಿನ ಸ್ವಯಂಪ್ರೇರಣೆಯಿಂದ ಸಂಪೂರ್ಣ ಲಾಕ್‌ಡೌನ್ ಮಾಡಲು ಭಾನುವಾರ ನಡೆದ ನಾಗರಿಕ ಸೇವಾ ವೇದಿಕೆ ಹಾಗೂ ವರ್ತಕರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ನಾಗರಿಕ ಸೇವಾ ವೇದಿಕೆ ನೇತೃತ್ವದಲ್ಲಿ ನಡೆದ ವರ್ತಕರ ಸಭೆಯಲ್ಲಿ ಸೋಮವಾರದಿಂದ ಪಟ್ಟಣದಲ್ಲಿ ಸ್ವಯಂಘೋಷಿತ ಲಾಕ್‌ಡೌನ್ ಮಾಡಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

Half Day Volunteer Lockdown At T Narasipura In Mysuru

 ಮೈಸೂರು ಜಿಲ್ಲೆಯ ಲಾಕ್ ಡೌನ್ ಗೊಂದಲಕ್ಕೆ ತೆರೆ ಎಳೆದ ಡಿಸಿ ಮೈಸೂರು ಜಿಲ್ಲೆಯ ಲಾಕ್ ಡೌನ್ ಗೊಂದಲಕ್ಕೆ ತೆರೆ ಎಳೆದ ಡಿಸಿ

ಸಭೆಯಲ್ಲಿ ಅಂತಿಮವಾಗಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನಿತರೆ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಸೀಮಿತಗೊಳಿಸಿ ನಂತರ ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಲಾಯಿತು.

English summary
In the wake of increasing coronavirus cases in T Narasipura, nagarika seva vedike and merchants association decided to half-day lockdown voluntarily
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X