• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವನಾಥ್ ಅವರಿಗೆ ಎಂಎಲ್ಸಿ ಟಿಕೆಟ್ ಸಿಗುತ್ತದೆ; ನಾರಾಯಣಗೌಡ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 14: "ವಿಶ್ವನಾಥ್ ಅವರಿಗೆ ಎಂಎಲ್ ‌ಸಿ ಟಿಕೆಟ್ ಸಿಗುತ್ತದೆ. ನಮ್ಮ ಭಾವನೆ ಕೂಡ ಅದೇ ಇದೆ. ಹೈಕಮಾಂಡ್ ಕೂಡ ಅದನ್ನೇ ನಿರ್ಧಾರ ಮಾಡಲಿದೆ" ಎಂದು ಎಂಎಲ್ ‌ಸಿ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ್ದಾರೆ ಸಚಿವ ನಾರಾಯಣಗೌಡ.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, "ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದು ನಿಜ. ಆದರೆ ಎಲ್ಲವೂ ಅಂದುಕೊಂಡಂತೆ ಆಗುತ್ತೆ. ಯಾವುದೇ ತೊಂದರೆ ಇಲ್ಲ. ವಿಶ್ವನಾಥ್ ಅವರಿಗೆ ಎಂಎಲ್ ಸಿ ಟಿಕೆಟ್ ಸಿಗುತ್ತದೆ" ಎಂದು ಹೇಳಿದರು.

ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ MLC ಮಾಡಿ; ಸೋಮಶೇಖರ್ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ MLC ಮಾಡಿ; ಸೋಮಶೇಖರ್

ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎಂಬ ವಿಚಾರದ ಕುರಿತು ಮಾತನಾಡಿ, "ಮತ್ತೊಮ್ಮೆ ಲಾಕ್ ಡೌನ್ ಆಗುವುದಿಲ್ಲ. ಕೊರೊನಾ ಬಗ್ಗೆ ಈಗಾಗಲೇ ಜನರಲ್ಲಿ ಜಾಗೃತಿ ಇದೆ. ಬೇರೆ ರಾಜ್ಯಗಳಲ್ಲಿ ವಾತಾವರಣ ಹೇಗಿದೆಯೋ ಗೊತ್ತಿಲ್ಲ. ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ. ಈಗ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ವೈರಸ್ ಸಾಮರ್ಥ್ಯ ಕುಗ್ಗಿದೆ. ವೈದ್ಯರು ಹೇಳುವ ಪ್ರಕಾರ, ಕೊರೊನಾ ವೈರಸ್ ಪವರ್ ಕಡಿಮೆ ಆಗಿದೆ. ಹೀಗಾಗಿ ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ" ಎಂದರು.

"ಮುಂಬೈನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ. ಅಲ್ಲಿ ಶೇ.50ರಷ್ಟು ಕೊಳೆಗೇರಿಗಳಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ" ಎಂದು ಹೇಳಿದರು.

English summary
"Vishwanath will get MLC ticket. High Command will decide the same" said Minister Narayana Gowda in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X