• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಗೀತದಿಂದಲೇ ಮನೆ ಮಾತಾಗುವಾಸೆ; ವಿಶ್ವನಾಥ್ ಪುತ್ರನ ಕಲಾಭಿಮಾನ

|

ಮೈಸೂರು, ಸೆಪ್ಟೆಂಬರ್ 9: ರಾಜಕಾರಣಿಗಳ ಮಕ್ಕಳು ಅಪ್ಪನ ಹೆಸರಿನೊಂದಿಗೆ ಗುರುತಿಸಿಕೊಂಡು ಮುಂದೆ ಬರುವ ಉದಾಹರಣೆಯೇ ಸಾಮಾನ್ಯವಾಗಿ ಹೆಚ್ಚು ದೊರೆಯುತ್ತದೆ. ಆದರೆ ಜೆಡಿಎಸ್ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರ ಮಗನ ವಿಷಯದಲ್ಲಿ ಇದು ಅಕ್ಷರಶಃ ತದ್ವಿರುದ್ಧ.

ವಿಶ್ವನಾಥ್ ಅವರ ಕಿರಿಯ ಮಗ ಪೂರ್ವಜ್ ವಿಶ್ವನಾಥ್ ತಮ್ಮ ಸಂಗೀತ ಕಲೆಯಿಂದಲೇ ಹೆಸರು ಮಾಡುವ ಹಂಬಲದಲ್ಲಿದ್ದಾರೆ. ಇವರು ಸಂಗೀತ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ, ಸಮಾಜಮುಖಿ ಕೆಲಸಗಳು ಎಲ್ಲರನ್ನೂ ಬೆರಗಾಗುವಂತೆ ಮಾಡಿವೆ.

ಎರಡೂ ಕೈಗಳಿಂದ 13 ಭಾಷೆ ಬರೆಯುವ ಅಪರೂಪದ ಪ್ರತಿಭೆ ಶಾಲಿನಿ

ತಮ್ಮ ಕಂಠದಿಂದಷ್ಟೇ ತಮ್ಮನ್ನು ಗುರುತಿಸಿಕೊಳ್ಳಲು ಹೊರಟಿರುವ ಅವರಲ್ಲಿ ಸಂಗೀತ, ಅಭಿನಯದ ಕುರಿತು ಇನ್ನೂ ಹಲವು ಆಶಯಗಳಿವೆ. ಅವರ ಸಂಗೀತಾಸಕ್ತಿ, ಮುಂದಿನ ಕನಸುಗಳು, ಮನೆಯವರ ಬೆಂಬಲ, ಎಲ್ಲದರ ಕುರಿತೂ ಇಲ್ಲಿ ಮಾತನಾಡಿದ್ದಾರೆ.

ನನ್ನ ಅಪ್ಪ-ಅಮ್ಮ ಇಬ್ಬರೂ ಸಂಗೀತಾಸಕ್ತರು

ನನ್ನ ಅಪ್ಪ-ಅಮ್ಮ ಇಬ್ಬರೂ ಸಂಗೀತಾಸಕ್ತರು

ನಾನು ಚಿಕ್ಕಂದಿನಿಂದಲೂ ಅಮ್ಮನ ಹಾಡುಗಳನ್ನು ಕೇಳುತ್ತಾ ಬೆಳೆದವನು. ತಂದೆಯೂ ಕಲಾವಿದರು. ತಾಯಿ ವೆಂಕಟಲಕ್ಷ್ಮೀ ಅವರಿಗೆ ನಾನು ಸಂಗೀತಗಾರನಾಗಬೇಕೆಂಬ ಆಸೆ ಬಹಳ ಇತ್ತು. ಹಾಗಾಗಿ 9ನೇ ವಯಸ್ಸಿಗೆ ನನ್ನನ್ನು ಸಂಗೀತ ತರಗತಿಗೆ ಸೇರಿಸಿದರು. ಪ್ರತಿನಿತ್ಯ ಕಾರ್ಯಕ್ರಮಗಳಿಗೆ ಹೋಗುವಾಗ ನನ್ನೊಂದಿಗೆ ತಾಯಿ ಕೂಡ ಬರುತ್ತಿದ್ದರು. ನನ್ನ ಮೊದಲ ಗುರುಗಳು ಸೋಮಣ್ಣನವರು. ಅವರ ಬಳಿ ಸುಗಮ ಸಂಗೀತಾಭ್ಯಾಸವನ್ನು ಮೊದಲು ಶುರುಮಾಡಿದೆ. ನನ್ನ ಈ ಸಂಗೀತಾಸಕ್ತಿಗೆ ನೀರೆರದ ಅಮ್ಮ, ಅಪ್ಪನಿಗೆ ನಾನೆಂದು ಋಣಿ ಎನ್ನುತ್ತಾರೆ ಪೂರ್ವಜ್.

5 ಗಂಟೆ ನಿರಂತರ ಹಾಡು

5 ಗಂಟೆ ನಿರಂತರ ಹಾಡು

ನಾನು ಈವಗರೆಗೂ 400ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಎಷ್ಟೇ ಬ್ಯುಸಿ ಇದ್ದರೂ ಅಪ್ಪ ನನ್ನ ಕಾರ್ಯಕ್ರಮಕ್ಕೆ ಬಂದು ಕೂರುತ್ತಾರೆ. ನನ್ನ ಬೆನ್ನು ತಟ್ಟುತ್ತಾರೆ. ಆ ವೇಳೆ ಖುಷಿ ತರುತ್ತದೆ. 13 ವರ್ಷದವನಿದ್ದಾಗ ನಾನೊಬ್ಬನೇ ಕುಂಭಮೇಳದಲ್ಲಿ 5 ಗಂಟೆಗೂ ಹೆಚ್ಚು ಕಾರ್ಯಕ್ರಮ ನೀಡಿದ್ದೆ. ಅದು ನನಗೆ ಮರೆಯಲಾರದ ದಿನ.

ಖುಷಿ ತಂದ ಹೊಸ, ಸವಾಲಿನ ಪ್ರಯತ್ನ

ಖುಷಿ ತಂದ ಹೊಸ, ಸವಾಲಿನ ಪ್ರಯತ್ನ

ಇತ್ತೀಚಿನ ದಿನದಲ್ಲಿ ಹೊಸ ಪ್ರಯತ್ನದೊಂದಿಗೆ ನನ್ನ ಸುಗಮ ಸಂಗೀತ ಗುರುಗಳಾದ ಸುನಿತಾ ಚಂದ್ರಕುಮಾರ್ ಅವರ ಅಣತಿಯಂತೆ ರಘುಲೀಲಾ ಸಂಗೀತ ಶಾಲೆಯ ತಂಡದೊಂದಿಗೆ ನಾಟಕದೊಂದಿಗೆ ಹಾಡಿ ಅಭಿನಯ ಕಾರ್ಯಕ್ರಮ ನಡೆಸಿದೆವು. ನಾಟಕ -ಹಾಡು ಇವೆರಡರಲ್ಲಿ ಅಭಿನಯ ಸ್ವಲ್ಪ ಕಷ್ಟ. ಇದುವರೆಗೂ ನಾಲ್ಕು ಪೌರಾಣಿಕ ಗದ್ಯ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಇದು ಜನರಿಗೆ ಇಷ್ಟವಾಗಿದೆ. ನನಗೆ ಈ ತೆರನಾದ ಹೊಸತನ್ನು ಚಾಲೆಂಜಿಂಗ್ ಆಗಿ ಕಲಿಯುವುದು ಬಲು ಇಷ್ಟ.

ಬಿಡುಗಡೆಗೆ ಸಿದ್ಧ ಸಾಮಾಜಿಕ ಕಳಕಳಿಯುಳ್ಳ ಯೂಟ್ಯೂಬ್ ಹಾಡು

ಬಿಡುಗಡೆಗೆ ಸಿದ್ಧ ಸಾಮಾಜಿಕ ಕಳಕಳಿಯುಳ್ಳ ಯೂಟ್ಯೂಬ್ ಹಾಡು

ಮೊದಲ ಪ್ರಯತ್ನವೆಂಬಂತೆ ಸಾಮಾಜಿಕ ಕಳಕಳಿಯುಳ್ಳ ಹಾಡೊಂದನ್ನು ನಾನೇ ರಚಿಸಿ, ಸಂಗೀತ ಸಂಯೋಜಿಸಿ ಯೂಟ್ಯೂಬ್ ಗೂ ಬಿಡುವ ಚಿಂತನೆ ಇದೆ. ಕೆಲವು ದಿನಗಳ ಕೆಳಗೆ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿ ಕಾರ್ಯಕ್ರಮ ನೀಡಿ ಹುರಿದುಂಬಿಸಿದ್ದು ನನಗೆ ಹೆಚ್ಚು ನೆಮ್ಮದಿ ತಂದಿತು. ಅಲ್ಲದೇ ನನ್ನ ಕಾರ್ಯಕ್ರಮಗಳಲ್ಲಿಯೂ ಜನರಿಗೆ ನಮ್ಮ ಪೂರ್ವಜರ ಕಲೆಯನ್ನು ಉಳಿಸಿ ಬೆಳೆಸಿ ಎಂದು ಹೇಳುತ್ತೇನೆ.

ಅಮ್ಮನಿಗೆ ಪವಡಿಸು ಪರಮಾತ್ಮ ಬಲು ಮೆಚ್ಚು

ಅಮ್ಮನಿಗೆ ಪವಡಿಸು ಪರಮಾತ್ಮ ಬಲು ಮೆಚ್ಚು

ಅಪ್ಪ-ಅಮ್ಮ ಇಬ್ಬರೂ ಎಷ್ಟೇ ಬ್ಯುಸಿ ಇದ್ದರೂ ನನ್ನ ಹಾಡುಗಳನ್ನು ಕೇಳುತ್ತಾರೆ. ಅಪ್ಪ ನನ್ನನ್ನು ಕರೆದು ಪಿಳ್ಳಂಗೋವಿಯ ಹಾಡು ಹಾಡೋ ಎನ್ನುತ್ತಾರೆ. ಕೆಲವು ಸಲ ಎದೆತುಂಬಿ ಹಾಡಿದೆನು ಹಾಡನ್ನು ಕೇಳುತ್ತಾರೆ. ಅಮ್ಮನಿಗೆ ಪವಡಿಸು ಪರಮಾತ್ಮ ಹಾಡು ಇಷ್ಟ. ನಾನು ಹಾಡಿದಾಗ ಇಬ್ಬರೂ ಸಂತೋಷವಾಗಿ ಕೇಳುತ್ತಾರೆ, ಶ್ಲಾಘಿಸುತ್ತಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿದ್ದಾಗ ಗಾಯಕಿಯಾಗಿರುವ ನನ್ನ ಪತ್ನಿ ಹಾಗೂ ನಾನು ಇಬ್ಬರೂ ಸೇರಿ ಕಾರ್ಯಕ್ರಮ ಮಾಡುತ್ತೇವೆ.

ಆಸಕ್ತಿ ಕೆರಳಿಸಿದ ವೈಲ್ಡ್ ಲೈಫ್ ಫೋಟೊಗ್ರಫಿ

ಆಸಕ್ತಿ ಕೆರಳಿಸಿದ ವೈಲ್ಡ್ ಲೈಫ್ ಫೋಟೊಗ್ರಫಿ

ಪೂರ್ವಜ್ ವಿಶ್ವನಾಥ್ ಅವರಿಗೆ ಸಂಗೀತ ಹಾಗೂ ಅಭಿನಯ ಅಷ್ಟೇ ಅಲ್ಲ, ಫೋಟೋಗ್ರಫಿಯಲ್ಲೂ ಹೆಚ್ಚು ಆಸಕ್ತಿ. ತಮ್ಮ ಬಿಡುವಿನ ವೇಳೆ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುವುದು ಇವರ ಹವ್ಯಾಸಗಳಲ್ಲಿ ಒಂದು. ಇವರು ತೆಗೆದಿರುವ ವನ್ಯಜೀವಿಗಳ ಚಿತ್ರಗಳು ಬಹುಜನರ ಮನ ಮೆಚ್ಚಿಸಿವೆ.

ಸುನಿತಾ ಚಂದ್ರಕುಮಾರ್ ರವರ ಬಳಿ ಸಂಗೀತಾಭ್ಯಾಸ

ಸುನಿತಾ ಚಂದ್ರಕುಮಾರ್ ರವರ ಬಳಿ ಸಂಗೀತಾಭ್ಯಾಸ

ಸೋಮಣ್ಣರವರು ನನ್ನ ಮೊದಲ ಸಂಗೀತದ ಗುರುಗಳು. ನಂತರ ಶ್ರೀನಾಥ್ (ಕರ್ನಾಟಕ), ವಿಶ್ವನಾಥ್ (ಸುಗಮ) ಬಳಿ ಕಲಿಕೆ ಮುಂದುವರೆಸಿದೆ. ಸದ್ಯ ಸುನಿತಾ ಚಂದ್ರಕುಮಾರ್ ಅವರ ಬಳಿ ಸುಗಮ ಸಂಗೀತ ಕಲಿಯುತ್ತಿದ್ದೇನೆ. ಸಂಗೀತದೊಂದಿಗೆ ಕೀಬೋರ್ಡ್ ಪ್ಲೇ ಮಾಡುತ್ತೇನೆ. ನನ್ನ ತಂದೆ ಓರ್ವ ಸರಳ ವ್ಯಕ್ತಿ. ನಮ್ಮನ್ನು ಸರಳತೆಯಲ್ಲಿಯೇ ಬೆಳೆಸಿದರು. ನೀವು ವಿಶ್ವನಾಥ್ ಅವರ ಮಗ ಎಂದು ಗುರುತಿಸಿ ಕಾರ್ಯಕ್ರಮ ನೀಡಿ ಎಂದರೆ ನಾನು ಹೋಗುವುದಿಲ್ಲ. ಮುಂದೆ ರಾಜಕೀಯ ಸೇರುವ ಒಲವಿದೆ. ಆದರೆ ಸಂಗೀತಾಸಕ್ತಿ ನನ್ನ ಉಸಿರಿರುವವರೆಗೂ ಇರುತ್ತದೆ. ನನಗೆ ಈವರೆಗೂ 5 ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
EX Minister son Poorvaj vishwanth interview is here. He is multitalented person, also he got 5 awards in singing journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more