ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ನಾನು ಮಂತ್ರಿ ಆಗಲಿಲ್ಲವೆಂದರೆ ಆಕಾಶ ಬಿದ್ದೋಗಲ್ಲ': ಎಚ್.ವಿಶ್ವನಾಥ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 02: ನಾನು ಮಂತ್ರಿಯಾಗಬೇಕೆಂದು ಎಂದು ಆಸೆ ಇಟ್ಟುಕೊಂಡಿದ್ದವನಲ್ಲ. ಮಂತ್ರಿ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶ್ವಾಸ ಇಟ್ಟುಕೊಂಡಿದ್ದವನು ನಾನು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್ ಅವರು, ""ಇವತ್ತು ನಾನು ಮಂತ್ರಿ ಆಗಿಲ್ಲ ಅಂದರೆ ಆಕಾಶ ಬಿದ್ದೋಗಿಲ್ಲ, ಮಂತ್ರಿ ಮಾಡೋದು ಬಿಡೋದು ಯಡಿಯೂರಪ್ಪ ನವರಿಗೆ ಬಿಟ್ಟಿದ್ದು'' ಎಂದರು.

"ಆಪರೇಷನ್ ಕಮಲ' ಪುಸ್ತಕ ಓದಲು ಕಾಯುತ್ತಿದ್ದೇನೆ: ಸಿದ್ದರಾಮಯ್ಯ

ಎಲ್ಲರಿಗೂ ಮಂತ್ರಿಮಂಡಲದಲ್ಲಿ ಸ್ಥಾನ ಕೊಡುತ್ತೇವೆ ಎಂದು ಎಲ್ಲರಂತೆ ನನಗೂ ಮಾತು ಕೊಟ್ಟಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಬಿಡೋದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಧರ್ಮ ಎಂದು ಹೇಳಿದರು.

H Vishwanath Reaction On Cabinet Expansion In Mysuru

ಮುಖ್ಯಮಂತ್ರಿಗಳು ಯಾರಿಗೆ ಸಚಿವ ಸ್ಥಾನ ಕೊಡುತ್ತಾರೋ ಬಿಡುತ್ತಾರೋ ನನಗೆ ಗೊತ್ತಿಲ್ಲ. ಸೋತವರಿಗೆ ಸಂಪುಟದಲ್ಲಿಸ್ಥಾನ ಕೊಡದಿರಲು ಕಾನೂನಿನ ನಿರ್ಭಂದ ಇದೆ ಅಂದಿದ್ದಾರೆ, ಆದರೆ ಕಾನೂನಿನಲ್ಲಿ ಯಾವುದೇ ನಿರ್ಭಂದ ಇಲ್ಲ ಎಂದು ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಮಾತನಾಡಿದರು.

ಸೋತವರಿಗೆ ಸಚಿವ ಸ್ಥಾನ ನೀಡಲು ಸುಪ್ರೀಂ ತೀರ್ಪು ಅಡ್ಡಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಚುನಾವಣೆಗೆ ನಿಂತು ಪವಿತ್ರರಾಗಿ ಎಂದಿತ್ತು, ನಾವು ಚುನಾವಣೆಗೆ ಅರ್ಜಿ ಹಾಕುತ್ತಿದ್ದಂತೆ ಪವಿತ್ರರಾದೆವು ಎಂದು ತಿಳಿಸಿದರು.

"ಸಂಪುಟಕ್ಕೆ 10+3, ಆ ಮೂರರಲ್ಲಿ ನಾನೂ ಇರಬಹುದು"; ವಿಶ್ವನಾಥ್ ಭರವಸೆ

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸೋಲು ಗೆಲುವಿನ ಉಲ್ಲೇಖವಿಲ್ಲ. ಅದನ್ನು ಯಡಿಯೂರಪ್ಪ ಅವರು ಕಾನೂನು ತಜ್ಞರನ್ನು ಕರೆಸಿ ಕೇಳಿಕೊಳ್ಳಲಿ. ನಮಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಬೇರೆ, ಆದರೆ ಕಾನೂನು ಅಡ್ಡಿ ಅನ್ನೋದನ್ನು ಸೋತವರು ಒಪ್ಪಲ್ಲ. ಸಾರ್ವಜನಿಕರ ಮನಸ್ಸಿನಲ್ಲಿ ಇದು ಬರಬಾರದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆ.

English summary
I am not aspires to be a minister H Vishwanath Said in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X