ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ನಾವು ಯಾವಾಗಲೂ ಜೊತೆಯಾಗೇ ಇರಲು ಆಗುತ್ತಾ" ಸಿಡಿಮಿಡಿಯಾದ ವಿಶ್ವನಾಥ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 07: ಪಕ್ಷಾಂತರಿಗಳು 17 ಜನ ಒಟ್ಟಾಗಿ ಇಲ್ಲವೆಂದು ಟೀಕಿಸುತ್ತಿರುವವರಿಗೆ ತಿರುಗೇಟು ನೀಡಿರುವ ಮಾಜಿ ಸಚಿವ ಎಚ್.ವಿಶ್ವನಾಥ್, "ಯಾವಾಗಲು ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ ಗಂಡ ಹೆಂಡತಿಯೇ ಜೊತೆಯಾಗಿ ಇರೋದಿಲ್ಲ. ನಾವು ಯಾವಾಗಲೂ ಜೊತೆಯಾಗೇ ಇರಲು ಆಗುತ್ತಾ?" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, "ನಿನ್ನೆ ಕಾರ್ಯಕ್ರಮಕ್ಕೆ ಕೆಲವರು ಬಂದಿಲ್ಲದೇ ಇರಬಹುದು‌. ಬಂದಿಲ್ಲದವರನ್ನು ನೀವು ಕೇಳಿ. ಆದರೆ ನಾವೆಲ್ಲ ಒಟ್ಟಾಗಿ ಇದ್ದೇವೆ, ಸಿಗೋದಕ್ಕೆ ಆಗಿಲ್ಲ ಅಷ್ಟೇ. ನಿನ್ನೆ ನಾನು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ನಿನ್ನೆ ಕಾರ್ಯಕ್ರಮ ಚೆನ್ನಾಗಿ ಆಯಿತು. ನನ್ನ ಅನುಭವ ಬಳಸಿಕೊಳ್ಳಿ ಅಂತ ಕೂಗಿ ಹೇಳೋಕೆ ಆಗಲ್ಲ. ಮಂತ್ರಿಯಾಗಿರಲಿ ಆಗಿಲ್ಲದೆ ಇರಲಿ ಅನುಭವಸ್ಥರ ಅನುಭವ ಪಡೆದುಕೊಳ್ಳಬೇಕು" ಎಂದು ಹೇಳಿದರು.

2 ಹಂತದಲ್ಲಿ ಸಂಪುಟ ವಿಸ್ತರಣೆಯಾಯ್ತು, ಸಚಿವ ಸ್ಥಾನ ವಂಚಿತರ ಪಟ್ಟಿ 2 ಹಂತದಲ್ಲಿ ಸಂಪುಟ ವಿಸ್ತರಣೆಯಾಯ್ತು, ಸಚಿವ ಸ್ಥಾನ ವಂಚಿತರ ಪಟ್ಟಿ

ಮಂತ್ರಿಗಳನ್ನು ಅನರ್ಹರೆಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿ, "ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ಅಪಚಾರ ಆಗಿದೆ. ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರನ್ನು ನೀವು ಹೇಗೆ ಗೆದ್ರಿ ನನಗೆ ಗೊತ್ತಿದೆ ಅಂದ್ರೆ ಏನರ್ಥ. ಹಾಗಾದರೆ ಇವರು ಹೇಗೆ ಗೆದ್ದರು. ಎಲ್ಲ ಎಲೆಕ್ಷನ್ ‌ಗಳು ದುಡ್ಡಿನಿಂದಲೇ ಆಗುತ್ತಾ" ಎಂದು ಪ್ರಶ್ನಿಸಿದರು.

H Vishwanath Reacted To The Siddaramaiah Statement On Disqualified Members

ಸಂವಿಧಾನ ಡೇಂಜರ್ ಅಂತ ಭಾಷಣ ಮಾಡುವ ಸಿದ್ದರಾಮಯ್ಯರೇ ಸಂವಿಧಾನಕ್ಕೆ ಅಗೌರವ ಕೊಡ್ತಿದ್ದಾರೆ. ಹಾಗಾದರೆ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡ್ತಿಲ್ಲ ಅಂತ ಅರ್ಥ. ಸಿದ್ದರಾಮಯ್ಯನವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಗುಡುಗಿದರು.

English summary
"Siddaramaih is insulting constitution. Not all elections run by money" said H Vishwanath in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X