ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 4ರಂದು ವಿಶ್ವನಾಥ್ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆ

By Yashaswini
|
Google Oneindia Kannada News

ಮೈಸೂರು, ಜುಲೈ 2: ಜುಲೈ 4ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದೇನೆ ಎಂದು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ಮಾಜಿ ಸಂಸದ ಎಚ್. ವಿಶ್ವನಾಥ್ ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ನಾನು ಜೆಡಿಎಸ್ ಸೇರುವ ಮೂಲಕ ಜಂಡಾವನ್ನಷ್ಟೇ ಬದಲಾಯಿಸುತ್ತಿದ್ದೇನೆ, ಆದರೆ ನನ್ನ ಅಜೆಂಡಾವನ್ನು ಬದಲಿಸುವುದಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

H Vishwanath officially joins JDS on July 4

ಕಾಂಗ್ರೆಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಚ್ ವಿಶ್ವನಾಥ್ಕಾಂಗ್ರೆಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಚ್ ವಿಶ್ವನಾಥ್

ಜೆಡಿಎಸ್ ಸೇರ್ಪಡೆನಂತರ ಆ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತೇನೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆಂದು ಹೇಳಿದ ವಿಶ್ವನಾಥ್ 'ನನ್ನ ಜಾತ್ಯಾತೀತವಾದ ಸಿದ್ದಾಂತಗಳಿಗೆ ಬದ್ದವಾದ ಅಜೆಂಡಾ ಬದಲಾಗುವುದಿಲ್ಲ," ಎಂದು ಹೇಳಿದರು.

ರಾಜೀನಾಮೆ ಬಳಿಕ ಆದಿಚುಂಚನಗಿರಿಗೆ ವಿಶ್ವನಾಥ್ ಹೋಗಿದ್ದೇಕೆ?ರಾಜೀನಾಮೆ ಬಳಿಕ ಆದಿಚುಂಚನಗಿರಿಗೆ ವಿಶ್ವನಾಥ್ ಹೋಗಿದ್ದೇಕೆ?

"ನಾನು ಕಾಂಗ್ರೆಸ್‌ನ ನೆರಳು ಮಾತ್ರ ಬಿಡುತ್ತಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಋಣಿಯಾಗಿರುತ್ತೇನೆ. ಬೇರೆ ಪಕ್ಷದ ನೆರಳು ಅವಲಂಬಿಸುವ ಅನಿವಾರ್ಯತೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದೇನೆ," ಎಂದು ಎಚ್‌.ವಿಶ್ವನಾಥ್ ಹೇಳಿದರು.

English summary
Former Mysuru MP H Vishwanath officially joins JDS on July 4th at JDS headquarters JP Bhavn in Malleshwaram, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X