ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್; ಎಚ್. ವಿಶ್ವನಾಥ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 12: "ಇದು ಯಾವ ಅಹಿಂದ ಹೋರಾಟವೂ ಅಲ್ಲ. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಸ್ವಾರ್ಥದ ಹೋರಾಟ. ಸಿದ್ದರಾಮಯ್ಯ ಅಹಿಂದ ಎಂದು ಚಡಪಡಿಸುತ್ತಿದ್ದಾರೆ ಅವರಿಗೆ ಅಸ್ತಿತ್ವ, ಅಭದ್ರತೆ ಕಾಡುತ್ತಿದೆ" ಎಂದು ಎಚ್. ವಿಶ್ವನಾಥ್ ಟೀಕಿಸಿದರು.

ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, "ಕುರುಬ ಸಮಾಜದ ಎಸ್‌ಟಿ ಹೋರಾಟ ಸಿದ್ದರಾಮಯ್ಯ ಅವರಿಲ್ಲದೆ ಯಶಸ್ವಿಯಾಗಿದೆ. ಲಕ್ಷಾಂತರ ಜನರು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ಅಂದು ಕೊಂಡಿದ್ದರು" ಎಂದು ದೂರಿದರು.

"ಸಿದ್ದರಾಮಯ್ಯ ಅವರಲ್ಲಿ ನಾನು ನಾನು ಅನ್ನೋ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ. ಡಿ. ಕೆ. ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ. ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದು ಏಕಾಂಗಿಯಾಗುತ್ತಿದ್ದಾರೆ" ಎಂದು ವಿಶ್ವನಾಥ್ ಹೇಳಿದರು.

 H Vishwanath Criticised Siddaramaiah Ahinda Card

"ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ. ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು. ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರರನ್ನು ಬಿಟ್ಟು ಅಹಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ, ಮುಸ್ಲಿಂಮರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದ ಟ್ರಂಪ್; "ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ. ಇದು ಟ್ರಂಪಾಯಣದಂತೆ ಸಿದ್ದರಾಮಾಯಣ ನಡೆಯುತ್ತಿದೆ. ಸೋಲನ್ನು ಒಪ್ಪಿಕೊಳ್ಳಲು ಅವರು ಸಿದ್ದರಿಲ್ಲ. ಸಿದ್ದು ಕಾಂಗ್ರೆಸ್ ಸಂಸ್ಕಾರ, ಸಂಸ್ಕೃತಿ ಇಲ್ಲದ ಮನುಷ್ಯ. ಅಚಾನಕ್ ಆಗಿ ನಾವು ಕರೆದುಕೊಂಡು ಬಂದಿದ್ದಕ್ಕೆ ಸಿಎಂ ಆದವರು. ಅದೃಷ್ಟದಿಂದ ಸಿಎಂ ಆದವರು ಸಿದ್ದರಾಮಯ್ಯ ಯಾರ ಯಶಸ್ಸನ್ನು ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನು ಅವರು ಸಹಿಸುವುದಿಲ್ಲ" ಎಂದು ವಿಶ್ವನಾಥ್ ದೂರಿದರು.

"ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪ ನೋಡಿದ ಕೂಡಲೇ ಅವರಿಗೆ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದ‌ನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗೆ. ಹೀಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ ಇವರಿಗೇಕೆ?" ಎಂದು ಪ್ರಶ್ನಿಸಿದರು.

English summary
MLC and BAP leader H. Vishwanath criticised former chief minister Siddaramaiah ahinda card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X