ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸಿದ್ದರಾಮಯ್ಯ, ಕುಮಾರಸ್ವಾಮಿ ಸಹಿಷ್ಣುಗಳಾಗಬೇಕು"; ಎಚ್.ವಿಶ್ವನಾಥ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 26: ಪೌರತ್ವ ನಿಷೇಧ ಕಾಯ್ದೆ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಸರ್ವಪಕ್ಷ ಸಭೆ ಕರೆದು ಗೊಂದಲ ನಿವಾರಿಸಬೇಕು ಎಂದು ಮೈಸೂರಿನಲ್ಲಿ ಎಚ್ ವಿಶ್ವನಾಥ್ ಒತ್ತಾಯಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ಕೆಲ ರಾಜ್ಯದ ಮುಖ್ಯಮಂತ್ರಿಗಳೇ ಪ್ರತಿಭಟನೆ ಲೀಡ್ ಮಾಡ್ತಿದ್ದಾರೆ. ಕೆಲ ಪಕ್ಷಗಳು ಪ್ರತಿಭಟನೆ ಹೆಸರಲ್ಲಿ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸೋತ ವಿಶ್ವನಾಥ್ ಭೇಟಿ ಮಾಡಿ ಏನಂದರು ಸೋಮಣ್ಣ?ಸೋತ ವಿಶ್ವನಾಥ್ ಭೇಟಿ ಮಾಡಿ ಏನಂದರು ಸೋಮಣ್ಣ?

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೂ 1979ರಲ್ಲಿ ಭಾರತದ ಪೌರತ್ವ ಸಿಕ್ಕಿದೆ. ಕಾಯ್ದೆ ಮಂಡನೆ ವೇಳೆ ಸಂಸತ್ ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ ಎಂದು ಆರೋಪಿಸಿದರು.

H Vishwanath Called Two Party Leaders Support To Stop CAA Protest

ಪೌರತ್ವ ಕಾಯ್ದೆಯಂತಹ ಮಹತ್ವದ ಕಾಯ್ದೆ ಜಾರಿಯಾದಾಗ ದೇಶದ ಹಿತ ಚಿಂತಕರು, ಬುದ್ಧಿಜೀವಿಗಳು ಜನರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಇದನ್ನು ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಜನರನ್ನು ಉದ್ರೇಕಗೊಳಿಸಿ ಎತ್ತಿ ಕಟ್ಟಲಾಗುತ್ತಿದೆ. ಈ ವಿಚಾರದಲ್ಲಿ ಮುಸ್ಲಿಂ ಸಮುದಾಯ ಆತಂಕಕ್ಕೆ ಒಳಗಾಗಿದೆ. ಹಾಗಾಗಿ ಮುಸ್ಲಿಮರನ್ನು ಕೆರಳಿಸುವ ಬದಲು ಹೀಲಿಂಗ್ ಟಚ್ ಕೊಡಬೇಕಾಗಿದೆ. ಈ ಬಗ್ಗೆ ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರನ್ನು ಮನವಿ ಮಾಡುತ್ತೇನೆ. ಇವರಿಬ್ಬರೂ ಮುಖ್ಯಮಂತ್ರಿ ಆಗಿದ್ದವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದವರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಈ ಇಬ್ಬರೂ ನಾಯಕರು ಸಹಕರಿಸಬೇಕು. ಅಧಿಕಾರ ಕಳೆದುಕೊಂಡವರು ಸಹಿಷ್ಣುಗಳಾಗಬೇಕು" ಎಂದರು.

ಹುಣಸೂರಿನಲ್ಲಿ ಎಚ್ ವಿಶ್ವನಾಥ್ ಸೋಲಿಗೆ ಕಾರಣರಾದ ಬಿಜೆಪಿ ನಾಯಕರು! ಹುಣಸೂರಿನಲ್ಲಿ ಎಚ್ ವಿಶ್ವನಾಥ್ ಸೋಲಿಗೆ ಕಾರಣರಾದ ಬಿಜೆಪಿ ನಾಯಕರು!

"ಪೌರತ್ವ ಕಾಯ್ದೆ ಬಹಳ ಮಹತ್ವದ ಕಾಯ್ದೆಯಾಗಿದೆ. ಇದರಲ್ಲಿ ಹೊಸದೇನೂ ಇಲ್ಲ. ನೆಹರೂ, ಇಂದಿರಾ ಗಾಂಧಿಯವರ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಈಗ ಮೋದಿ ಕಾಲದಲ್ಲೂ ಮುಂದುವರಿದಿದೆ" ಎಂದರು.

English summary
I appeal HD Kumaraswamy and Siddaramaiah should cooperate in establishing peace and order in the state said H.Vishwanath in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X