ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ವಿಶೇಷ: ಪತ್ನಿಯನ್ನು ಜಿ.ಪಂ ಕಣಕ್ಕಿಳಿಸುತ್ತಾರಾ ಜಿ.ಟಿ.ದೇವೇಗೌಡರು?

|
Google Oneindia Kannada News

ಮೈಸೂರು, ಜುಲೈ 14: ಜೆಡಿಎಸ್‌ನಲ್ಲಿದ್ದರೂ ಮಾನಸಿಕವಾಗಿ ಪಕ್ಷದ ಚಟುವಟಿಕೆಯಿಂದ ದೂರವಾಗಿ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶಾಸಕ ಜಿ.ಟಿ. ದೇವೇಗೌಡರ ನಡೆ ಸದ್ಯಕ್ಕೆ ಗೌಪ್ಯವಾಗಿರುವಾಗಲೇ ಮುಂದಿನ ಜಿ.ಪಂ. ಚುನಾವಣೆಗೆ ತಯಾರಿ ಆರಂಭವಾಗಿದ್ದು, ಪತ್ನಿ ಲಲಿತಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

ಜಿ.ಟಿ. ದೇವೇಗೌಡರ ಕುಟುಂಬ ಹುಣಸೂರು ತಾಲ್ಲೂಕಿನಲ್ಲಿ ರಾಜಕೀಯವಾಗಿ ಪ್ರಭಾವ ಹೊಂದಿದೆ. ಅವರ ಪತ್ನಿ ಮತ್ತು ಪುತ್ರ ಇಬ್ಬರೂ ಕ್ಷೇತ್ರದಲ್ಲಿ ಜನರೊಂದಿಗೆ ಒಡನಾಟ ಹೊಂದಿದ್ದು, ಮುಂದಿನ ಜಿ.ಪಂ ಚುನಾವಣೆಗೆ ಪತ್ನಿ ಲಲಿತಾ ದೇವೇಗೌಡರನ್ನು ಕಣಕ್ಕಿಳಿಸುವ ತೀರ್ಮಾನ ಮಾಡದಿದ್ದರೂ ಬೆಂಬಲಿಗರು ಕಣಕ್ಕಿಳಿಸುವಂತೆ ಪಟ್ಟು ಹಿಡಿದಿರುವುದು ಇದೀಗ ಬೆಳಕಿಗೆ ಬಂದಿದೆ.

ರಾಜಕೀಯ ವಿ‍ಶೇಷ: ಗೌಡರ ಕುಟುಂಬದ ಮೇಲಿನ ವಾಗ್ದಾಳಿ ಫಲ ಕೊಡುತ್ತಾ?ರಾಜಕೀಯ ವಿ‍ಶೇಷ: ಗೌಡರ ಕುಟುಂಬದ ಮೇಲಿನ ವಾಗ್ದಾಳಿ ಫಲ ಕೊಡುತ್ತಾ?

 ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದ ಜಿಟಿಡಿ

ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದ ಜಿಟಿಡಿ

ಹುಣಸೂರು ಕ್ಷೇತ್ರದಲ್ಲಿ ಗೆಲುವು ಪಡೆಯುತ್ತಾ ಬಂದಿದ್ದ ಜಿ.ಟಿ. ದೇವೇಗೌಡರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಒಬ್ಬ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿ ಗೆಲ್ಲುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಗೆದ್ದು ತಾವೇನು ಎಂಬುದನ್ನು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದರು.
ಆದರೆ ತಾವು ಹುಣಸೂರು ಕ್ಷೇತ್ರವನ್ನು ಬದಲಾಯಿಸಿದರೂ ಅಲ್ಲಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಬೇಕೆನ್ನುವ ಬಯಕೆ ಜಿ.ಟಿ. ದೇವೇಗೌಡರ ಮನದಲ್ಲಿತ್ತು. ಅದಕ್ಕೆ ಜೆಡಿಎಸ್‌ನ ಕೆಲವು ನಾಯಕರೇ ಅಡ್ಡಗಾಲಾಗಿದ್ದರು ಎನ್ನುವುದನ್ನು ತಳ್ಳಿಹಾಕಲಾಗದು. ಹುಣಸೂರು ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ಪುತ್ರ ಜಿ.ಡಿ. ಹರೀಶ್ ಗೌಡರು ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಸೆಳೆದಿದ್ದರು.

 ಜಿ.ಡಿ.ಹರೀಶ್ ಗೌಡರು ಸ್ಪರ್ಧಿಸುವ ಸಾಧ್ಯತೆ

ಜಿ.ಡಿ.ಹರೀಶ್ ಗೌಡರು ಸ್ಪರ್ಧಿಸುವ ಸಾಧ್ಯತೆ

ಜಿ.ಡಿ.ಹರೀಶ್ ಸದಾ ಒಂದಲ್ಲ ಒಂದು ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಉತ್ತಮ ಹೆಸರು ಮಾಡಿದ್ದರು. ಇದು ಹೀಗೆಯೇ ಮುಂದುವರೆದರೆ ತಮಗೆ ಮುಳುಗುವ ನೀರಾಗುತ್ತದೆ ಎಂಬ ಭಯದಲ್ಲಿ ಕೆಲವು ನಾಯಕರು ರಾಜಕೀಯ ದುರುದ್ದೇಶದಿಂದ ಪ್ರಜ್ವಲ್ ರೇವಣ್ಣರನ್ನು ಕರೆತಂದು ಹುಣಸೂರಿನಲ್ಲಿ ಅಡ್ಡಾಡಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ಆದ ಕೆಲವೊಂದು ಬದಲಾವಣೆಯಿಂದ ಎಚ್.ವಿಶ್ವನಾಥ್ ಅವರು ಸ್ಪರ್ಧೆ ಮಾಡುವಂತಾಯಿತು.
ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿರುವುದರಿಂದ ತಾವು ಮಾತ್ರವಲ್ಲದೆ, ತಮ್ಮ ಪುತ್ರ ಜಿ.ಡಿ. ಹರೀಶ್ ಗೌಡರು ಕೂಡ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಸಾಧ್ಯತೆಗಳು ಇವೆ. ಆದರೆ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಮುಂದೆ ಆಗಲಿರುವ ರಾಜಕೀಯ ಬದಲಾವಣೆ ಮೇಲೆ ಅದು ತೀರ್ಮಾನವಾಗಬಹುದೇನೋ?

 ಲಲಿತಾ ದೇವೇಗೌಡರು ಜಿ.ಪಂಗೆ ಸ್ಪರ್ಧಿಸುವಂತೆ ಒತ್ತಾಯ

ಲಲಿತಾ ದೇವೇಗೌಡರು ಜಿ.ಪಂಗೆ ಸ್ಪರ್ಧಿಸುವಂತೆ ಒತ್ತಾಯ

ಈಗಿನ ಪರಿಸ್ಥಿತಿಯಲ್ಲಿ ಜಿ.ಟಿ. ದೇವೇಗೌಡರ ಇಡೀ ಕುಟುಂಬ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಸದ್ಯದಲ್ಲಿಯೇ ನಡೆಯಲಿರುವ ಜಿ.ಪಂ. ಚುನಾವಣೆಯಲ್ಲಿ ಹುಣಸೂರು ತಾಲೂಕಿನ ಹನಗೋಡು ಜಿ.ಪಂ ಕ್ಷೇತ್ರದಿಂದ ಲಲಿತಾ ದೇವೇಗೌಡರನ್ನು ಕಣಕ್ಕಿಳಿಸಿ ತಳಮಟ್ಟದಿಂದ ರಾಜಕೀಯ ಶಕ್ತಿಯನ್ನು ಗಟ್ಟಿ ಮಾಡಿಕೊಳ್ಳುವ ಅಗತ್ಯತೆ ಇರುವುದರಿಂದ ಅವರ ಅಭಿಮಾನಿಗಳು ಇದೀಗ ಒಕ್ಕೊರಲಿನ ಒತ್ತಾಯವನ್ನು ಮಾಡುತ್ತಿದ್ದಾರೆ. ಆದರೆ ಪತ್ನಿ ಲಲಿತಾ ದೇವೇಗೌಡರನ್ನು ಹನಗೋಡು ಜಿ.ಪಂ. ಕ್ಷೇತ್ರದಿಂದ ಕಣಕ್ಕಿಳಿಸಬೇಕಾ? ಬೇಡವಾ? ಎನ್ನುವ ಬಗ್ಗೆ ಆಗಸ್ಟ್ 15ರ ನಂತರ ತೀರ್ಮಾನ ಮಾಡುವುದಾಗಿ ಶಾಸಕ ಜಿ.ಟಿ. ದೇವೇಗೌಡ ಹೇಳಿರುವುದು ಈಗಿನ ಬೆಳವಣಿಗೆಯಾಗಿದೆ.

 ಹನಗೋಡು ಕ್ಷೇತ್ರ ನನ್ನ ತವರೂರು

ಹನಗೋಡು ಕ್ಷೇತ್ರ ನನ್ನ ತವರೂರು

ಮೂಲಗಳ ಪ್ರಕಾರ, ತಮ್ಮ ಬೆಂಬಲಿಗರ ಮನವಿಗೆ ಜಿ.ಟಿ. ದೇವೇಗೌಡರ ಒಪ್ಪಿದ್ದಾರೆ ಎನ್ನಲಾಗಿದ್ದು, ತಮ್ಮನ್ನು ಭೇಟಿ ಮಾಡಲು ಬಂದವರಿಗೆ ಧನ್ಯವಾದಗಳನ್ನು ತಿಳಿಸಿದ್ದಲ್ಲದೆ, "ಹನಗೋಡು ಕ್ಷೇತ್ರ ನನ್ನ ತವರೂರು. ನಾನು ಮತ್ತು ನನ್ನ ಮಗ, ಪತ್ನಿ ಹುಣಸೂರು ತಾಲೂಕಿನ ಜನರ ಸೇವೆಯಲ್ಲಿ ಇಂದಿಗೂ ಇದ್ದೇವೆ. ಮುಂದೆಯು ನಿಮ್ಮೊಂದಿಗೆ ಇರುತ್ತೇವೆ. ನಾನು ಪ್ರಥಮವಾಗಿ ಹುಣಸೂರಿನಿಂದ ಶಾಸಕನಾದೆ, ಸಚಿವನಾದೆ ನನ್ನ ಮಗ ಕೂಡ ಸಹಕಾರ ಕ್ಷೇತ್ರದಿಂದ ಆಯ್ಕೆಯಾದ ಮತ್ತು ಪತ್ನಿ ಕೂಡ ಜಿ.ಪಂ ಮತ್ತು ಸಹಕಾರ ಕ್ಷೇತ್ರದಿಂದಲ್ಲೂ ಆಯ್ಕೆಯಾಗಿ ಹುಣಸೂರು ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿದ್ದೇನೆ.''

 ಆ.15ರವರೆಗೆ ಸಮಯ ಕೇಳಿದ ಜಿಟಿಡಿ

ಆ.15ರವರೆಗೆ ಸಮಯ ಕೇಳಿದ ಜಿಟಿಡಿ

ಆದರೆ ಜಿ.ಪಂ. ಚುನಾವಣೆಯಲ್ಲಿ ಹನಗೋಡು ಕ್ಷೇತ್ರದಿಂದ ಪತ್ನಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಮಾನ ಮಾಡಲು ಸಮಯ ಬೇಕಾಗಿದೆ. ರಾಜಕೀಯ ಸನ್ನಿವೇಶಗಳನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕ ಜಿ.ಟಿ. ದೇವೇಗೌಡರ ಸದ್ಯದ ನಡೆಯನ್ನು ಗಮನಿಸಿದರೆ, ರಾಜಕೀಯವಾಗಿ ಮುಂದಿನ ದಿನಗಳಲ್ಲಿ ಒಂದಷ್ಟು ಬದಲಾವಣೆಗಳು ಆಗುವುದಂತು ನಿಜ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
MLA G.T. Devegowda's wife Lalita likely to Contesting in upcoming zilla panchayat election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X