ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೌಚಾಲಯ ನಿರ್ವಹಿಸದಿದ್ದಕ್ಕೆ ಇಬ್ಬರನ್ನು ಸ್ಥಳದಲ್ಲೇ ಸಸ್ಪೆಂಡ್ ಮಾಡಿದ ಜಿಟಿಡಿ

|
Google Oneindia Kannada News

Recommended Video

ಶೌಚಾಲಯ ನಿರ್ವಹಿಸದಿದ್ದಕ್ಕೆ ಇಬ್ಬರಿಗೆ ಜಿ.ಟಿ.ದೇವೇಗೌಡ್ರು ಎಂಥ ಶಿಕ್ಷೆ ಕೊಟ್ರು ಗೊತ್ತಾ? | GT Devegowda

ಮೈಸೂರು, ಜುಲೈ 3: ಮೈಸೂರು ನಗರದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ವೇಳೆ, ಶೌಚಾಲಯದ ಸ್ವಚ್ಛತೆ ಕಾಪಾಡದ ಹಿನ್ನೆಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಇಂಜಿನಿಯರ್ ಹಾಗೂ ಟೆಂಡರ್ ದಾರರನ್ನು ಅಮಾನತುಗೊಳಿಸುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ

ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಮುಂಭಾಗವಿರುವ ಶೌಚಾಲಯಕ್ಕೆ ಸಚಿವ ಜಿ.ಟಿ. ದೇವೇಗೌಡ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯ ಗಬ್ಬೆದ್ದು ನಾರುತ್ತಿತ್ತು. ಇದನ್ನು ಕಂಡು ಗರಂ ಆದ ಅವರು, ಶೌಚಾಲಯವನ್ನು ಕ್ಲೀನ್ ಮಾಡ್ತಿರೋದು ಯಾರು? ಇದನ್ನು ದಿನವೂ ಕ್ಲೀನ್ ಮಾಡೋರಿಲ್ವಾ? ಯಾರು ಟೆಂಡರ್ ತಗೊಂಡಿರೋದು? ಹೆಚ್ಚು ಜನ ಓಡಾಡುವ ಜಾಗ ಇದು, ಇದನ್ನು ಹೀಗಾ ಇಟ್ಟುಕೊಳ್ಳೋದು? ಎಂದು ಅಧಿಕಾರಿಗಳ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

GT Devegowda suspended 2 officers for not maintaining public toilets

ಹಾಗೆಯೇ, ಇದರ ಇಂಜಿನಿಯರ್ ಹಾಗೂ ಟೆಂಡರ್ ದಾರರು ಯಾರು? ಕೂಡಲೇ ಅವರಿಬ್ಬರನ್ನೂ ಸಸ್ಪೆಂಡ್ ಮಾಡಿ ಎಂದು ಅಲ್ಲೇ ಇದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಗೆ ಸಚಿವ ಜಿ.ಟಿ ದೇವೇಗೌಡ ಖಡಕ್ ಸೂಚನೆ ನೀಡಿದರು. ಪಕ್ಕದಲ್ಲೇ ಇದ್ದ ಶಾಸಕ ನಾಗೇಂದ್ರ ಸಹ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

English summary
Minister GT Devegowda suspended 2 officers who didn't maintain the cleanliness of toilets. He was on inspection to check development works in Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X