ಮೋದಿ ಹೆಸರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ ಜೆಡಿಎಸ್ ಶಾಸಕ ಜಿಟಿಡಿ
Recommended Video
ಚಾಮುಂಡಿ
ಬೆಟ್ಟದಲ್ಲಿ
ಮೋದಿಗಾಗಿ
ಪೂಜೆ
ಮಾಡಿಸಿದ
ದೇವೇಗೌಡ..?
|
gt
devegowda
ಮೈಸೂರು, ಸೆಪ್ಟೆಂಬರ್ 17: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ. ಈ ಕಾರಣಕ್ಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿಶೇಷ ಪೂಜೆ ನಡೆಸಿದ್ದಾರೆ. ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರೂ ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಯಡಿಯೂರಪ್ಪ ಭೇಟಿಯಾದ ಜೆಡಿಎಸ್ನಿಂದ ದೂರವಾಗಿರುವ ಜಿಟಿಡಿ!
ವಿ. ಸೋಮಣ್ಣ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಎಲ್. ನಾಗೇಂದ್ರ ಅವರು ಇದ್ದರು. ಬಿಜೆಪಿ ನಾಯಕರೊಂದಿಗೆ ಬಂದಿದ್ದ ಜಿ.ಟಿ.ದೇವೇಗೌಡರು ಎಲ್ಲರೊಂದಿಗೆ ಪೂಜೆಯಲ್ಲಿ ಭಾಗಿಯಾಗಿದ್ದರು. ಮೋದಿ ಹೆಸರಿನಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿ ಮೋದಿಗೆ ಶುಭ ಹಾರೈಸಿದ್ದಾರೆ.
ಇದೇ ಸಂದರ್ಭ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಅಧಿಕಾರಿಗಳೊಂದಿಗೆ ಚಾಮುಂಡಿ ಬೆಟ್ಟದಲ್ಲಿ ಕಳೆದ ವಾರವಷ್ಟೇ ನಡೆಸಿದ್ದ ಪುಟ್ ಪಾತ್ ತೆರವು ಕಾರ್ಯಾಚರಣೆಯನ್ನು ಪರಿಶೀಲಿಸಿದರು.
Comments
narendra modi birthday gt devegowda chamundi hill bjp mysuru ನರೇಂದ್ರ ಮೋದಿ ಜಿಟಿ ದೇವೇಗೌಡ ಚಾಮುಂಡಿ ಬೆಟ್ಟ ಬಿಜೆಪಿ ಮೈಸೂರು
English summary
Today is Prime Minister Narendra Modi's birthday. For this reason, Mysore District incharge V. Somanna visited Chamundi Hill, conducted a special pooja. Former minister G.T. Deve Gowda also involved in this pooja.