ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಪಕ್ಷ ಬಿಡುವ ಕುರಿತು ದೇವೇಗೌಡರ ಸ್ಪಷ್ಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 23: ನಾನು ಪಕ್ಷ ಬಿಡುವ ಬಗ್ಗೆ ಇನ್ನೂ ಯೋಚಿಸಿಲ್ಲ, ಜೆಡಿಎಸ್ ಪಕ್ಷದ ಶಾಸಕನಾಗಿಯೇ ಉಳಿದ ಎರಡು ವರ್ಷ ಮುಗಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.

ಮೈಸೂರು ಸಮೀಪದ ಉದ್ಭೂರು ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜಾತ್ಯತೀತ ಜನತಾ ದಳ ಪಕ್ಷದ ಶಾಸಕನಾಗಿದ್ದೇನೆ. ಪಕ್ಷ ಬಿಡುವ ಮಾತೇ ಇಲ್ಲ. ಎರಡು ವರ್ಷ ಜೆಡಿಎಸ್ ಶಾಸಕನಾಗಿಯೇ ಅವಧಿ ಮುಗಿಸುತ್ತೇನೆ ಎಂದರು.

ಜಾತಿ ಆಧಾರಿತ ನಿಗಮ ಮಂಡಳಿ ರಚನೆಗೆ ಎಚ್.ವಿಶ್ವನಾಥ್‌ ಅಸಮಾಧಾನ ಜಾತಿ ಆಧಾರಿತ ನಿಗಮ ಮಂಡಳಿ ರಚನೆಗೆ ಎಚ್.ವಿಶ್ವನಾಥ್‌ ಅಸಮಾಧಾನ

ಮುಂದಿನ ಚುನಾವಣೆಯ ಹೊತ್ತಿಗೆ ಜೆಡಿಎಸ್ ಹೇಗಿರುತ್ತದೆ? ಬಿಜೆಪಿ ಹೆಂಗಿರುತ್ತದೆ? ಕಾಂಗ್ರೆಸ್ ಹೇಗಿರುತ್ತದೆ ಎನ್ನುವುದನ್ನು ನೋಡುತ್ತೇನೆ. ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ, ರಾಜಕೀಯ ತೀರ್ಮಾನ ಮಾಡುತ್ತೇನೆ ಹೊರತು, ಈಗ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Mysuru: GT Deve Gowda Makes Clear About Leaving JDS Party

ಜನರ ಅಭಿಪ್ರಾಯ ಇಲ್ಲದೆ ಯಾವ ತೀರ್ಮಾನ ಮಾಡಲ್ಲ, ಮಾಡುವುದು ಇಲ್ಲ. ಅಂದಿನ ರಾಜಕೀಯ ಸನ್ನಿವೇಶ, ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನೋಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಗ್ರಾ.ಪಂ ಚುನಾವಣೆಯು ಪಕ್ಷಾತೀತವಾಗಿ ನಡೆಯಬೇಕು. ಬಿಜೆಪಿಯವರು ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ರಾಜಕಾರಣ ಮಾಡುತ್ತೇವೆ ಅಂತಾರೆ. ಕಾಂಗ್ರೆಸ್ ನವರು ನಾವು ಗೆಲ್ಲುತ್ತೇವೆ ಅಂತ ಹೇಳುತ್ತಾರೆ. ನಾನು ಜನ ಸೇವೆ ಮಾಡುವವರು ಯಾರಿದ್ದಾರೆ ಎಂಬುದನ್ನು ಗುರುತಿಸಿ ಆಯ್ಕೆ ಮಾಡಿ ಕಳುಹಿಸುವಂತೆ ಹೇಳುತ್ತೇನೆ ಎಂದು ತಿಳಿಸಿದರು.

ಗ್ರಾಮಸ್ಥರಿಗೆ ಸ್ಪಂದಿಸುವುದು, ಪಿಂಚಣಿ ಕೊಡಿಸುವುದು, ಸ್ವಚ್ಛತೆ ಕಾಪಾಡುವುದು, ಸರ್ಕಾರಿ ಸವಲತ್ತು ಯಾರು ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಿ ತೀರ್ಮಾನ ಮಾಡಬೇಕು ಎಂದರು.

ಗ್ರಾ.ಪಂ ಚುನಾವಣೆ ಪಕ್ಷಾತೀತವಾಗಿದೆ. ಮತದಾರರೇ ಎಂಎಲ್ಎ, ಎಂಪಿಗಳು. ಅವರ ಸದಸ್ಯರನ್ನು ಅವರೆ ಆಯ್ಕೆ ಮಾಡಲು ಬಿಡಬೇಕೇ ಹೊರತು, ಪಕ್ಷ ರಾಜಕಾರಣ ಮಾಡಬಾರದು. ರಾಜಕೀಯ ಬೆರಸುವುದು ಬೇಡ ಎಂದು ಸಲಹೆ ನೀಡಿದರು.

20 ಗುಂಟೆ ಜಮೀನು ಹೊಂದಿರುವ ವ್ಯಕ್ತಿಯು ಚುನಾವಣೆಗೆ ನಿಂತರೆ ಅದನ್ನು ಮಾರಿ ಮನೆ ಹಾಳು ಮಾಡಿಕೊಳ್ಳುವುದು ಬೇಡ. ಅಂತಹ ಕೆಲಸಕ್ಕೆ ಕೈ ಹಾಕದಂತೆ ಮಾಡದೆ ಪಕ್ಷಾತೀತವಾಗಿ ಚುನಾವಣೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

English summary
Chamundeswari constituency legislator GT Deve Gowda made it clear that he would complete the remaining two years as a JDS MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X