ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಸಚಿವ ಜಿ.ಟಿ.ದೇವೇಗೌಡ ಗರಂ

|
Google Oneindia Kannada News

ಮೈಸೂರು, ಫೆಬ್ರವರಿ 21: "ನಿಮ್ಮ ಸಮಸ್ಯೆ ಕೇಳೋಕೆ, ನೀವೇನು ನನಗೆ ಮತ ಹಾಕಿದ್ರಾ"? ಎಂದು ಮೈಸೂರು ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಸ್ಥರಿಗೆ ಆವಾಜ್ ಹಾಕಿದ ಘಟನೆ ನಡೆದಿದೆ.

ಈ ಹಿಂದೆ ಉತ್ತರ ಕರ್ನಾಟಕ ಭಾಗದ ಜನರಿಗೆ "ನೀವೇನು ನನಗೆ ಮತ ಹಾಕಿದ್ದೀರಾ"? ಎಂದು ಕೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಯಾಗಿದ್ದರು. ಈಗ ಅವರದೇ ಪಕ್ಷದ ಸಚಿವರು ಕೂಡ ತಮ್ಮ ಕ್ಷೇತ್ರದ ಜನರಿಗೆ "ನೀವೇನು ನನಗೆ ಮತ ಹಾಕಿದ್ದೀರಾ" ? ಎಂದು ಅದೇ ವರಸೆ ಮುಂದುವರೆಸಿದ್ದಾರೆ.

ಬಿಜೆಪಿಯವರು ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ:ಸಚಿವ ಜಿಟಿ ದೇವೇಗೌಡಬಿಜೆಪಿಯವರು ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ:ಸಚಿವ ಜಿಟಿ ದೇವೇಗೌಡ

ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಸಚಿವ ಜಿ.ಟಿ.ದೇವೇಗೌಡ ಗರಂ ಆಗಿದ್ದಾರೆ. ಜಿಟಿ ದೇವೇಗೌಡ ಅವರಿಗೆ ಸಾಲುಂಡಿ ಗ್ರಾಮದಲ್ಲಿನ ಸಮಸ್ಯೆ ಹೇಳಿಕೊಳ್ಳಲು ಗ್ರಾಮಸ್ಥರು ಮುಂದಾಗಿದ್ದರು.

GT Deve Gowda angered against Siddaramaiahs supporters

ಆಗ "ನೀವೇನು ನನಗೆ ಮತ ಹಾಕಿದ್ದೀರಾ?" ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿಡಿ ಉತ್ತರಿಸಿದ್ದಾರೆ. ಜಿಟಿ ದೇವೇಗೌಡ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಜನರು ಸಚಿವರ ಜೊತೆ ವಾಗ್ವಾದಕ್ಕೆ ಇಳಿದ ಘಟನೆಯೂ ನಡೆಯಿತು.

 ಲೋಕಸಭಾ ಚುನಾವಣೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಜಿಟಿಡಿ ಪ್ರತಿಕ್ರಿಯೆ ಲೋಕಸಭಾ ಚುನಾವಣೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಜಿಟಿಡಿ ಪ್ರತಿಕ್ರಿಯೆ

"ತಮ್ಮ ಗ್ರಾಮದೊಳಗೆ ದುರ್ವಾಸನೆ ಬರುತ್ತಿದೆ. ಬಂದು ಪರಿಶೀಲಿಸಿ" ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಚಿವರು, "ನೀವ್ ಏನ್ ನಂಗೆ ವೋಟ್ ಹಾಕಿದ್ದೀರಾ? ನೀವೆಲ್ಲಾ ಸಿದ್ದರಾಮಯ್ಯಗೆ ವೋಟ್ ಹಾಕಿರೋದು. ನಾನ್ಯಾಕೆ ಬಂದ್ ನೋಡಲಿ" ಎಂದು ಗರಂ ಆಗಿ ಉತ್ತರಿಸಿದ್ದಾರೆ.

 ಇದೊಂದು ಚುನಾವಣಾ ಪೂರ್ವ ಬಜೆಟ್: ಸಚಿವ ಜಿಟಿ ದೇವೇಗೌಡ ಇದೊಂದು ಚುನಾವಣಾ ಪೂರ್ವ ಬಜೆಟ್: ಸಚಿವ ಜಿಟಿ ದೇವೇಗೌಡ

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದೇವೇಗೌಡರ ಮಾತಿನಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಜೆಡಿಎಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭಗೊಂಡು ಘಟನೆ ಉದ್ವಿಘ್ನಗೊಂಡಿತು. ಗಲಾಟೆ ಜೋರಾದ ಹಿನ್ನಲೆಯಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಇದಾದ ಬಳಿಕ ಜಿ.ಟಿ ದೇವೇಗೌಡ ಅವರು, ನಾನು ಅಧಿಕಾರಿಗಳ ಸಮೇತವಾಗಿ ಬಂದು ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆ. ಈಗ ನಾನು ಕೆಲಸದ ಮೇಲೆ ಹೊರ ಹೋಗುತ್ತಿದ್ದೇನೆ. ಈ ಸಮಸ್ಯೆ ಬಗೆಹರಿಸಲು ಮತ್ತೊಂದು ದಿನ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತರು.

English summary
Minister GT Deve Gowda angered against Siddaramaiah's supporters in salundi at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X