ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಎಸ್ ಟಿ ಎಫೆಕ್ಟ್: ಮೈಸೂರಿನಲ್ಲಿ ಸಿಕ್ಕಾಪಟ್ಟೆ ರಿಯಾಯಿತಿಗೆ ಮಾರಾಟ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜುಲೈ 1: ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ ಟಿ) ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೊಂಡಿದೆ. ಅದಕ್ಕೂ ಮುನ್ನ ಮೈಸೂರಿನ ಹಲವು ಅಂಗಡಿ -ಶೋ ರೂಮ್ ಗಳು 4 - 5 ದಿನಗಳಿಂದ ಭಾರೀ ರಿಯಾಯಿತಿ ಮಾರಾಟ ಮಾಡಿವೆ.

ಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ ಜಿಎಸ್ ಟಿ ಯುಗಾರಂಭಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ ಜಿಎಸ್ ಟಿ ಯುಗಾರಂಭ

ನಾನಾ ಬ್ರ್ಯಾಂಡ್, ಕಂಪೆನಿ ಬಟ್ಟೆಗಳು, ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ಸೇರಿದಂತೆ ನಾನಾ ಎಲೆಕ್ಟ್ರಾನಿಕ್ ಪದಾರ್ಥಗಳು, ಬ್ರ್ಯಾಂಡೆಡ್ ಶೂಗಳು ಹಾಗೂ ಚಪ್ಪಲಿ ಸೇರಿದಂತೆ ನಾನಾ ಪದಾರ್ಥಗಳು ಗ್ರಾಹಕರಿಗೆ ಭಾರೀ ರಿಯಾಯಿತಿ ದರದಲ್ಲಿ ದೊರೆತಿದ್ದು, ಗ್ರಾಹಕರೂ ತಮಗೆ ಬೇಕಾದ ಪದಾರ್ಥಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಖುಷಿಪಟ್ಟಿದ್ದಾರೆ.

GST effect, people rush to buy discount goods in Mysuru

ಹೊಸ ಜಿಎಸ್ ಟಿಗೆ ಬದಲಾಗಬೇಕಾದ ಹಿನ್ನೆಲೆಯಲ್ಲಿ ಅಂಗಡಿಗಳು ಮತ್ತು ಶೋ ರೂಮ್ ಗಳಲ್ಲಿ ಇರುವ ಪದಾರ್ಥಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮೈಸೂರಿನ ಡಿ.ದೇವರಾಜು ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಧನ್ವಂತರಿ ರಸ್ತೆ, ಗಾಂಧಿ ವೃತ್ತ ಸೇರಿದಂತೆ ಇನ್ನಿತರ ಕಡೆ ಬಟ್ಟೆ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ದಾಸ್ತಾನಿರುವ ಪದಾರ್ಥಗಳ ಮೇಲೆ ಶೇ 33 ರಿಂದ ಶೇ 60ರವರೆಗೂ ಭಾರೀ ರಿಯಾಯಿತಿ ಫಲಕಗಳನ್ನು ಹಾಕಲಾಗಿತ್ತು.

ಜಿಎಸ್ ಟಿ ಹುಟ್ಟಿದ್ದು ಯಾವಾಗ ಗೊತ್ತಾ?ಜಿಎಸ್ ಟಿ ಹುಟ್ಟಿದ್ದು ಯಾವಾಗ ಗೊತ್ತಾ?

ಈ ಹಿನ್ನೆಲೆಯಲ್ಲಿ ಗ್ರಾಹಕರು ಮುಗಿಬಿದ್ದು ತಮಗೆ ಬೇಕಾದ ಪದಾರ್ಥಗಳನ್ನು ಖರೀದಿಸಿ ಖುಷಿ ಪಡುತ್ತಿದ್ದಾರೆ. ಅರಸು ರಸ್ತೆಯ ಹೆಸರಾಂತ ಎಲೆಕ್ಟ್ರಾನಿಕ್ ಪದಾರ್ಥಗಳ ಶೋ ರೂಮ್ ನಲ್ಲಿ ಶನಿವಾರ ಶೇ 30ರಷ್ಟ್ರು ಖಾಲಿಯಾಗಿದೆ ಎನ್ನುತ್ತಾರೆ ಮಾಲೀಕರು.

ಖಾಸಗಿ ಕಂಪೆನಿಯೊಂದರ ನೌಕರ ಧರಣೀಶ್ ಎಂಬುವವರು ರಿಯಾಯಿತಿ ದರದಲ್ಲಿ ಸಿಕ್ಕಿದ ಫ್ರಿಡ್ಜ್ ಖರೀದಿಸಿದರೆ, ದಟ್ಟಗಳ್ಳಿಯ ಪವನ್ ಎಂಬುವವರು ಹೊಸ ಶರ್ಟ್ ಹಾಗೂ ಪ್ಯಾಂಟ್ ಖರಿದಿಸಿ ಸಂತಸದಲ್ಲಿದ್ದಾರೆ. ಇದೇ ರೀತಿ ಯುವಕರು ಬ್ರ್ಯಾಂಡೆಡ್ ಜೀನ್ಸ್, ಪ್ಯಾಂಟ್ ಹಾಗೂ ಶರ್ಟ್ ಗಳನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಿದ್ದಾರೆ.

ಜಿಎಸ್ ಟಿ ಎಫೆಕ್ಟ್: ಬಿಗ್ ಬಜಾರ್ ಮಾಲ್ ನಲ್ಲಿ ಮಧ್ಯರಾತ್ರಿ ಶಾಪಿಂಗ್!ಜಿಎಸ್ ಟಿ ಎಫೆಕ್ಟ್: ಬಿಗ್ ಬಜಾರ್ ಮಾಲ್ ನಲ್ಲಿ ಮಧ್ಯರಾತ್ರಿ ಶಾಪಿಂಗ್!

ಜಿಎಸ್ ಟಿ ಎಫೆಕ್ಟ್ ಎಷ್ಟಿದೆಯೆಂದರೆ ಕೇವಲ ಅಂಗಡಿ, ಶೋ ರೂಮ್ ಗಳಲ್ಲಷ್ಟೇ ಅಲ್ಲ, ಫ್ಲಿಫ್ ಕಾರ್ಟ್, ಅಮೆಜಾನ್, ಹೋಮ್ ಶಾಪ್ ಇನಿತರೆ ಆನ್ ಲೈನ್ ಮಾರಾಟಗಾರರೂ ಗ್ರಾಹಕರಿಗೆ ತಮ್ಮ ಪದಾರ್ಥಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದ್ದವು.

ಈ ಮಧ್ಯೆ ಔಷಧಿ ಅಂಗಡಿಗಳಲ್ಲೂ ರಿಯಾಯಿತಿ ವ್ಯಾಪಾರ ನಡೆಯುತ್ತಿತ್ತು. 3 - 4 ದಿನಗಳಿಂದಲೇ ಔಷಧಿ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಔಷಧಿಗಳ ಮಾರಾಟ ನಡೆಯುತಿತ್ತು. ಮೈಸೂರಿನ ಹೆಸರಾಂತ ಔಷಧಿ ರಘುಲಾಲ್ ಅಂಡ್ ಕೋನ ರಾಘವನ್ ಅವರು ಮೊಟ್ಟ ಮೊದಲು ಔಷಧಿಗಳ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು, ಜಿಎಸ್ ಟಿ ಜಾರಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೊಡಲಾಗುವುದಿಲ್ಲ ಎಂದು ಫಲಕ ಹಾಕಿದ್ದರು.

English summary
After GST implementation huge discount by Mysuru shops and malls. Various branded materials selling with big discounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X