ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರನ್ನು ಯೋಗ ನಗರಿಯಾಗಿಸಲು ಜಿಎಸ್‍ಎಸ್ ಪಣ!

|
Google Oneindia Kannada News

ಮೈಸೂರು, ಜನವರಿ 19: ಈಗಾಗಲೇ ಮೈಸೂರು ಯೋಗಾಸಕ್ತರ ಪಾಲಿಗೆ ನೆಚ್ಚಿನ ತಾಣವಾಗಿದ್ದು, ಯೋಗ ಕಲಿಕೆಗಾಗಿ ದೇಶ ವಿದೇಶಗಳಿಂದ ಜನ ಬರುತ್ತಿರುವುದು ಗಮನಾರ್ಹವಾಗಿದೆ. ಹೀಗಿರುವಾಗಲೇ ಯೋಗದ ವಿಷಯದಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಿ ಇಡೀ ವಿಶ್ವವೇ ಮೈಸೂರಿನತ್ತ ಕಣ್ಣೆತ್ತಿ ನೋಡುವಂತೆ ಮಾಡಲು ಜಿಎಸ್‍ಎಸ್ ಯೋಗ ಶಿಕ್ಷಣ ಸಂಸ್ಥೆ ಮುಂದಾಗಿದೆ.

ಇಂದು ಮೈಸೂರು ನಗರವನ್ನು ಸುತ್ತು ಹೊಡೆದರೆ ಹಲವು ಯೋಗ ಕೇಂದ್ರಗಳು ಕಾಣಸಿಗುತ್ತವೆ. ಸದಾ ಜಂಜಾಟದ ಬದುಕಿನಲ್ಲಿ ತೊಡಗಿಸಿಕೊಂಡವರ ಪಾಲಿಗೆ ಯೋಗ ಕೇಂದ್ರಗಳು ರಿಲ್ಯಾಕ್ಸ್ ನೀಡುವ ಆರೋಗ್ಯ ವೃದ್ಧಿಯ ಸಂಜೀವಿನಿಯಾಗಿ ಗಮನ ಸೆಳೆಯುತ್ತಿವೆ. ಯೋಗ ಕಲಿಯಲೆಂದೇ ದೇಶ-ವಿದೇಶದ ಜನ ಬರುತ್ತಿರುವುದು ಕೂಡ ಹೆಮ್ಮೆಯ ವಿಷಯವಾಗಿದೆ.

ಮೈಸೂರು ನಂಬರ್‌ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರುಮೈಸೂರು ನಂಬರ್‌ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರು

ನಮಗೆಲ್ಲರಿಗೂ ಯೋಗದ ತತ್ವ

ನಮಗೆಲ್ಲರಿಗೂ ಯೋಗದ ತತ್ವ

ಇದೀಗ ಮೈಸೂರನ್ನು ಯೋಗ ಹಬ್ ಮಾಡಬೇಕೆಂಬ ಬಯಕೆಯನ್ನು ಜಿಎಸ್‍ಎಸ್ ಯೋಗ ಶಿಕ್ಷಣ ಸಂಸ್ಥೆ ಹೊಂದಿದ್ದು, ಇದಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಐದು ವರ್ಷಗಳಲ್ಲಿ ಮೈಸೂರು ಯೋಗ ನಗರಿಯಾಗಿ ವಿಶ್ವದಾದ್ಯಂತ ಗಮನಸೆಳೆಯಲಿದೆ. ಕಳೆದ ನಲವತ್ತು ವರ್ಷಗಳಿಂದ ಜಿಎಸ್‍ಎಸ್ ಯೋಗ ಶಿಕ್ಷಣ ಸಂಸ್ಥೆಯು ಯೋಗ ಶಿಕ್ಷಣದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆಯಲ್ಲದೆ ಸ್ವಾಸ್ಥ್ಯ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ.

ಯೋಗ ಶಿಕ್ಷಣ ಹಾಗೂ ಬೋಧನೆ ವ್ಯವಸ್ಥೆ

ಯೋಗ ಶಿಕ್ಷಣ ಹಾಗೂ ಬೋಧನೆ ವ್ಯವಸ್ಥೆ

ನಮಗೆ ಹಾಗೂ ನಮಗೆಲ್ಲರಿಗೂ ಯೋಗ ಎಂಬ ತತ್ವದೊಂದಿಗೆ ಯೋಗ ಶಿಕ್ಷಣ ಹಾಗೂ ಬೋಧನೆ ವ್ಯವಸ್ಥೆ ರೂಪಿಸುವುದು, ಸ್ವಾಸ್ಥ್ಯ ವ್ಯಕ್ತಿ, ಸ್ವಾಸ್ಥ್ಯ ಸಮಾಜ, ಸ್ವಾಸ್ಥ್ಯ ರಾಷ್ಟ್ರ ಸಮಾಜ ನಿರ್ಮಿಸುವುದು, ಎಲ್ಲರ ಸಂತೋಷ ಹಾಗೂ ಎಲ್ಲರ ಆರೋಗ್ಯಕ್ಕಾಗಿ ಯೋಗ ಎಂಬಂತೆ ಯೋಗ ಶಿಕ್ಷಕರು, ಶಾಲೆಗಳಿಗೆ ಆರ್ಥಿಕ, ಜ್ಞಾನ, ಮೂಲ ಸೌಕರ್ಯ, ತಾಂತ್ರಿಕ ಸಹಕಾರ, ಯೋಜನೆ ಸಹಕಾರ, ಬ್ರಾಂಡಿಂಗ್ ಮಾಡಲು ಸಹಕಾರ ನೀಡುವುದಲ್ಲದೆ ತರಬೇತಿ ನೀಡಲು ಸಹಕಾರ ನೀಡುತ್ತಾ ಬಂದಿದೆ.

ಮೈಸೂರನ್ನು ಯೋಗದ ಬ್ರಾಂಡ್ ಮಾಡುವ ಚಿಂತನೆ

ಮೈಸೂರನ್ನು ಯೋಗದ ಬ್ರಾಂಡ್ ಮಾಡುವ ಚಿಂತನೆ

ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸುವ ಕುರಿತಂತೆ ಜಿಎಸ್‍ಎಸ್ ಯೋಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಡಿ.ಶ್ರೀಹರಿ ಮಾಹಿತಿ ನೀಡಿದ್ದು, ಅದರಂತೆ ಯೋಗವನ್ನು ಕೇವಲ ಆರೋಗ್ಯದ ದೃಷ್ಟಿಯಿಂದ ಅಭ್ಯಾಸ ಮಾಡದೆ ಅದನ್ನು ಬ್ರ್ಯಾಂಡ್ ಮಾಡುವುದು, ಪ್ರತಿ ಮನೆಗೂ ಯೋಗವನ್ನು ಕೊಂಡೊಯ್ದು ಹೆಚ್ಚು ಹೆಚ್ಚು ಯೋಗ ಶಾಲೆಗಳನ್ನು ಪ್ರಾರಂಭಿಸುವುದು, ಪ್ರತಿಯೊಬ್ಬರಿಗೂ ಯೋಗ ತರಬೇತಿ ನೀಡಲು ಯೋಗ ಶಿಕ್ಷಕರನ್ನು ತಯಾರು ಮಾಡುವುದು, ಆಯುರ್ವೇದ ಮತ್ತು ಯೋಗವನ್ನು ಪರಸ್ಪರ ಪೂರಕವಾಗಿ ಬಳಸುವುದುದಾಗಿದೆ.

ಯೋಗ ಶಿಕ್ಷಕರ ಉದ್ಯೋಗ ಸೃಷ್ಟಿ

ಯೋಗ ಶಿಕ್ಷಕರ ಉದ್ಯೋಗ ಸೃಷ್ಟಿ

ಮೈಸೂರು ಸೇರಿದಂತೆ, ರಾಜ್ಯ, ದೇಶ, ವಿದೇಶಗಳಲ್ಲಿ ಯೋಗ ಶಿಕ್ಷಕರ ಉದ್ಯೋಗ ಸೃಷ್ಟಿಸುವುದು ಮಾತ್ರವಲ್ಲದೆ ನಗರದಲ್ಲಿ 400ಕ್ಕೂ ಹೆಚ್ಚು ಯೋಗ ಶಾಲೆಗಳಿದ್ದು, ಅವುಗಳಿಗೆ ಭಿನ್ನ ಭಿನ್ನ ಪಠ್ಯಗಳಿವೆ. ಹೀಗಾಗಿ ಒಂದೇ ಸೂರಿನ ಅಡಿಯಲ್ಲಿ ಅವನ್ನು ತಂದು ನಗರದ ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತಾಗಲು ಯೋಜನೆ ರೂಪಿಸುವುದು, ಅಲ್ಲದೆ ಯೋಗ ಅಧ್ಯಯನ ಕೇಂದ್ರ ಸ್ಥಾಪಿಸುವುದು ಪ್ರಮುಖ ಉದ್ದೇಶವಾಗಿದೆ.

ಯೋಗ ಒಕ್ಕೂಟಗಳೊಂದಿಗೆ ಹಲವು ಕಾರ್ಯಕ್ರಮ

ಯೋಗ ಒಕ್ಕೂಟಗಳೊಂದಿಗೆ ಹಲವು ಕಾರ್ಯಕ್ರಮ

ಈಗಾಗಲೇ ಮೈಸೂರನ್ನು ವಿಶ್ವದ ಯೋಗ ಹಬ್‍ನ್ನಾಗಿಸಲು ಯೋಗ ಒಕ್ಕೂಟಗಳೊಂದಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ಅರ್ಹರಿಗೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ನೀಡಲು ಧನ್ವಂತರಿ, ಹಿರಿಯ ನಾಗರಿಕರಿಗೆ ಸ್ವಾವಲಂಬಿಯಾಗಿ ಬದುಕಲು ಸಹಕಾರ ನೀಡಲು ವಾತ್ಸಲ್ಯ ಯೋಜನೆ ರೂಪಿಸಿರುವುದು ಸಾಧನೆಯಾಗಿದೆ. ಈಗಾಗಲೇ ಮೈಸೂರು ಯೋಗಕ್ಕೆ ಹೆಸರುವಾಸಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಖ್ಯಾತಿ ಗಳಿಸುವಂತಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.

English summary
GSS Yoga Education Institute has come up with more plans for yoga to make the whole world look at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X