ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಳಿಯಲ್ಲಿ ಮಲಗುವ ನಿರಾಶ್ರಿತರಿಗೆ ಬೆಚ್ಚನೆಯ ಹೊದಿಕೆ ನೀಡುವ ಮೈಸೂರಿನ ಯುವಕರ ತಂಡ

|
Google Oneindia Kannada News

ಮೈಸೂರು, ಜನವರಿ, 1: ಹೊಸ ವರ್ಷವನ್ನು ಪ್ರತಿಯೊಬ್ಬರು ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಡಿ.31ರ ರಾತ್ರಿ ಕೆಲವರು ಧಾರ್ಮಿಕ ಕೇಂದ್ರಗಳಿಗೆ ಹೋಗಿ ಬಂದರೆ, ಇನ್ನು ಕೆಲವರು ಸ್ನೇಹಿತರೊಂದಿಗೆ ಎಣ್ಣೆ‌ ಪಾರ್ಟಿ ಮಾಡುತ್ತಾ, ಮೋಜು ಮಸ್ತಿಯಲ್ಲಿ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡಿ ಸಂಭ್ರಮಿಸ್ತಾರೆ.

ಆದರೆ, ಮೈಸೂರಿನ ಯುವಕರ ತಂಡವೊಂದು ಹೊಸ ವರ್ಷದಲ್ಲಿ ನೊಂದವರಿಗೆ ನೆರವಾಗುವ ನಿಟ್ಟಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.

ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ತಂಡದ ಯುವಕರು, ಹೊಸ ವರ್ಷದಂದು ಮೋಜು ಮಸ್ತಿ ಮಾಡದೆ ರಸ್ತೆ ಬದಿಯಲ್ಲಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.

Group of Youths Distribute Warm Blankets to Refugees Sleeping in the Cold

ಮೈಸೂರಿನ‌ ವಿವಿಧ ಭಾಗಗಳಿಗೆ ತೆರಳಿದ ಈ ಯುವಕರು, 50ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಆಚರಿಸಿ ಇತರರಿಗೆ ಮಾದರಿಯಾಗುವ ಜೊತೆಗೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.

2021ರ ಕಡೆಯ ದಿನದಂದು ಮೈಸೂರು ನಗರದ ರಾಜಕುಮಾರ್ ರಸ್ತೆ, ಕ್ಯಾತಮಾರನಹಳ್ಳಿ ಸೇರಿದಂತೆ ಇನ್ನಿತರ ಭಾಗಗಳ ರಸ್ತೆ ಬದಿಯಲ್ಲಿ, ಯಾವುದೋ ಅಂಗಡಿ ಮಳಿಗೆಗಳ ಕೆಳಗೆ, ಲಾರಿ ಕೆಳಗಡೆ ಜೀವನ ಸಾಗಿಸುವ ನಿರಾಶ್ರಿತರಿಗೆ ಹೊದಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Group of Youths Distribute Warm Blankets to Refugees Sleeping in the Cold

ಐದು ವರ್ಷದಿಂದ ಹೊದಿಕೆ‌ ವಿತರಣೆ
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸದಸ್ಯರು ಹೊದಿಕೆ‌ ವಿತರಣೆ ಕಾರ್ಯವನ್ನು ಪ್ರತಿವರ್ಷವೂ ನಡೆಸುತ್ತಾ ಬಂದಿದ್ದಾರೆ. ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಈ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ಡಿಸೆಂಬರ್ ಬಂತೆಂದರೆ ಎಲ್ಲೆಲ್ಲೂ ಚಳಿ ಹೆಚ್ಚಾಗಿರಲಿದ್ದು, ಈ ವೇಳೆ ಅನೇಕರು ಮನೆಯಿಂದ ಹೊರಗೆ ಬರಲು ಸಹ ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಮನೆ ಇಲ್ಲದೆ ಎಲ್ಲೆಂದರಲ್ಲಿ ಬದುಕು ದೂಡುವ ನಿರಾಶ್ರಿತ ಜನರಿಗೆ ನೆರವಾಗುವ ಉದ್ದೇಶದಿಂದ ಕೆಎಂಪಿಕೆ ಟ್ರಸ್ಟ್ ಸದಸ್ಯರು ಸದ್ದಿಲ್ಲದೆ ಹೊದಿಕೆ ವಿತರಣೆ ಮಾಡುತ್ತಾ ಬಂದಿದ್ದಾರೆ.

ಕಳೆದ ಐದು ವರ್ಷಗಳಿಂದ ನಿರಂತರವಾಗಿ ರಸ್ತೆ ಬದಿಯಲ್ಲಿ ಮಲಗುವ ನಿರಾಶ್ರಿತರು, ನಿರ್ಗತಿಕರು ಹಾಗೂ ಅಸಹಾಯಕರಿಗೆ ಹೊದಿಕೆ ವಿತರಣೆ ಮಾಡುತ್ತಿದ್ದಾರೆ. ಮೊದಲ ವರ್ಷ ಈ ಕೆಲಸವನ್ನು ಕೇವಲ ಒಂದೇ ದಿನಕ್ಕೆ ಮಾತ್ರ ಸೀಮಿತಗಿಳಿಸಲಾಗಿತ್ತು. ಆದರೆ ನಂತರದ ವರ್ಷದಲ್ಲಿ ಹೆಚ್ಚಿನ ಸ್ನೇಹಿತರು ಇದಕ್ಕೆ ಕೈಜೋಡಿಸಿದ ಪರಿಣಾಮ ಸದ್ಯ 15ಕ್ಕೂ ಹೆಚ್ಚು ದಿನಗಳವರೆಗೂ ಹೊದಿಕೆ ವಿತರಿಸುವ ಕೆಲಸವನ್ನ ಮಾಡುತ್ತಿದ್ದಾರೆ.

Group of Youths Distribute Warm Blankets to Refugees Sleeping in the Cold

ಪ್ರತಿದಿನ ರಾತ್ರಿ 9:30 ರಿಂದ ತಡರಾತ್ರಿ 12 ಗಂಟೆವರೆಗೂ ಸಹ ಈ ಕಾರ್ಯವನ್ನು ಮಾಡುತ್ತಾರೆ. ಇನ್ನೂ ಕೆಎಂಪಿಕೆ ಟ್ರಸ್ಟ್ ಸದಸ್ಯರು ನಡೆಸುವ ಈ ಪುಣ್ಯದ ಕೆಲಸಕ್ಕೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಅನೇಕ ದಾನಿಗಳು ಸಹ ಕೈಜೋಡಿಸಿ, ಹೊದಿಕೆಗಳ ಖರೀದಿಗೆ ನೆರವಾಗುತ್ತಾರೆ.

ಹೊದಿಕೆ ವಿತರಣೆ ಆರಂಭಿಸಿದ್ದೇಕೆ?
ಚಳಿಗಾಲದ ವೇಳೆ ಮನೆಗಳಲ್ಲಿ ವಾಸ ಮಾಡುವ ಜನರು ಬೆಚ್ಚಗೆ ನಿದ್ರಿಸುತ್ತಾರೆ. ಆದರೆ ಬಡುವರು, ನಿರ್ಗತಿಕರು ಬೀದಿ ಬದಿಯಲ್ಲಿ ಚಳಿಯಲ್ಲಿ ನಡಗುತ್ತಾ ಮಲಗಿರುತ್ತಾರೆ. ಇದನ್ನು ಕಂಡು ಇಂತಹ ಜನರಿಗೆ ನೆರವಾಗುವ ನಿಟ್ಟಿನಲ್ಲಿ ನನ್ನ ಬರ್ತಡೇ ದಿನದಂದು ಸ್ವಂತ ಹಣದಲ್ಲಿ ಒಂದಿಷ್ಟು ಹೊದಿಕೆ ವಿತರಣೆ ಮಾಡಿದೆ.

ಈ ಫೋಟೋಗಳನ್ನು ನನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದನ್ನು ಗಮನಿಸಿದ ನನ್ನ ಸ್ನೇಹಿತರು ನನ್ನೊಂದಿಗೆ ಕೈ ಜೋಡಿಸಿದರು. ಅಂದಿನಿಂದ ಪ್ರತಿವರ್ಷವೂ ಚಳಿಗಾಲದ ಸಂದರ್ಭದಲ್ಲಿ ಹೊದಿಕೆ ವಿತರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ ಒಂದು ಸಾವಿರಕ್ಕೂ ಹೆಚ್ಚು ಹೊದಿಕೆಗಳನ್ನು ವಿತರಿಸಲಾಗಿದೆ. ನನ್ನೊಂದಿಗೆ ನನ್ನ ಸ್ನೇಹಿತರಾದ ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಕಡಕೊಳ ಜಗದೀಶ್, ನಿಶಾಂತ್ ಇನ್ನೂ ಅನೇಕರು ಕೈಜೋಡಿಸಿದ್ದಾರೆ ಎಂದು ಕೆಎಂಪಿಕೆ ಟ್ರಸ್ಟ್‌ನ ವಿಕ್ರಮ್ ಅಯ್ಯಂಗಾರ್ ಹೇಳಿದ್ದಾರೆ.

ಒಟ್ಟಿನಲ್ಲಿ ರಸ್ತೆಬದಿಯಲ್ಲಿ, ಅಂಗಡಿ ಮಳಿಗೆಗಳು, ಲಾರಿಗಳ ಕೆಳಗೆ ಮಲಗಿ ಜೀವನ ಸಾಗಿಸುವ ಜನರಿಗೆ ಕೆ‌ಎಂಪಿಕೆ ಟ್ರಸ್ಟ್ ಸದಸ್ಯರು ಮಾನವೀಯತೆ ಜೊತೆಗೆ ಬೆಚ್ಚನೆಯ ಹೊದಿಕೆ ನೀಡಿ ನೆಮ್ಮದಿಯ ನಿದ್ದೆ ಮಾಡುವಂತೆ ಮಾಡುತ್ತಿದ್ದಾರೆ. ಇವರ ಈ ಶ್ಲಾಘನೀಯ ಕಾರ್ಯ ಹೀಗೆ ಮುಂದುವರೆಯಲಿ.

English summary
The youth of the KMPK Charitable Trust of Mysuru celebrated the New Year by distributing blankets to more than 50 refugees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X