ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಿಂದ 6 ಹೆಚ್ಚುವರಿ, 2 ಎನ್ಸಿಸಿ ತರಬೇತಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ

|
Google Oneindia Kannada News

ಮೈಸೂರು, ಫೆಬ್ರವರಿ 1 : ಈಗಾಗಲೇ ಮೈಸೂರು -ಚೆನ್ನೈ ಮೂಲಕ ವಿಮಾನಯಾನ ನಡೆಸುತ್ತಿರುವ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ವಿಮಾನ ಹಾರಾಟ ನಡೆಸಲಿದೆ.

ಪ್ರತಿಷ್ಠಿತ ಉಡಾನ್-3 ಯೋಜನೆಯಡಿ ಮೈಸೂರಿನಿಂದ ಪ್ರಮುಖ ಐದು ನಗರಗಳಿಗೆ ಕಡಿಮೆ ದರದ ವಿಮಾನಯಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಮೂರು ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರವೇ 2ನೇ ರನ್‌ ವೇ ಆರಂಭ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರವೇ 2ನೇ ರನ್‌ ವೇ ಆರಂಭ

ಬೆಳಗಾವಿ, ಹೈದರಾಬಾದ್ (ಎರಡು ವಿಮಾನ), ಗೋವಾ (ಪಣಜಿ), ಕೊಚ್ಚಿ, ಬೆಂಗಳೂರಿಗೆ ಸದ್ಯದಲ್ಲೇ ಈ ಸೇವೆ ಕಲ್ಪಿಸಲಾಗುತ್ತದೆ. ಮೈಸೂರಿನಿಂದ ಪ‍ಣಜಿ, ಕೊಚ್ಚಿ, ಬೆಂಗಳೂರಿಗೆ ಅಲಯನ್ಸ್ ಏರ್, ಬೆಳಗಾವಿಗೆ ಟರ್ಬೊ ಮೇಘಾ, ಹೈದರಾಬಾದ್‌ಗೆ ಇಂಡಿಗೋ ಹಾಗೂ ಅಲಯನ್ಸ್ ಏರ್ ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸಲಿವೆ.
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಕಳೆದ ವಾರ ಒಪ್ಪಿಗೆ ಸೂಚಿಸಿದೆ. ಒಂದೂವರೆ ತಿಂಗಳಿನಲ್ಲಿ ಈ ವಿಮಾನಗಳು ಹಾರಾಟ ನಡೆಸಲಿವೆ. ವಿವಿಧೆಡೆ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ಮುಂದೆ ಬಂದಿವೆ. ಹೈದರಾಬಾದ್‌ಗೆ ಮೈಸೂರಿನಿಂದ ಎರಡು ವಿಮಾನಗಳು ಹಾರಾಟ ನಡೆಸಲಿವೆ.

Green signal for 6 additional, 2 NCC training aircraft from Mysuru airport

ಕೈಗೆಟಕುವ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಯೋಜನೆಯಡಿ ಈಗಾಗಲೇ 72 ಆಸನಗಳ ಟ್ರೂಜೆಟ್ ವಿಮಾನ ಚೆನ್ನೈ- ಮೈಸೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವಿಮಾನ ಚೆನ್ನೈನಿಂದ ಹೈದರಾಬಾದ್‌ಗೂ ಸೇವೆ ಕಲ್ಪಿಸುತ್ತಿದೆ.

ವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತು ವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತು

ಇತ್ತ ಎನ್ಸಿಸಿ ಕೆಡಟ್ ವಿಮಾನ ತರಬೇತಿಗೂ ಅಸ್ತು : ನ್ಯಾಷನಲ್ಸ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಕೆಡೆಟ್ಗಳಿಗೆ ತರಬೇತಿ ಉದ್ದೇಶಕ್ಕಾಗಿ ಮೈಸೂರು ಎನ್ಸಿಸಿ ಮುಖ್ಯ ಕಚೇರಿಗೆ ಎರಡು ಹೆಲಿಕಾಪ್ಟರ್ ಸೌಲಭ್ಯ ಕಲ್ಪಿಸಲಾಗಿದೆ. ಎರಡು ಆಸನಗಳ ಹೆಲಿಕಾಪ್ಟರ್‌ಗಳು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿವೆ.

ಫೆಬ್ರವರಿ 6ರಿಂದ ಬೆಳಗಾವಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ ಫೆಬ್ರವರಿ 6ರಿಂದ ಬೆಳಗಾವಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

ಎನ್‌ಸಿಸಿ ಮುಖ್ಯ ಕಚೇರಿಯು ಈ ಹೆಲಿಕಾಪ್ಟರ್‌ಗಳನ್ನು ನೀಡಿದೆ. ಕೇಂದ್ರ ಕಚೇರಿಯು 100 ಹೆಲಿಕಾಪ್ಟರ್‌ಗಳನ್ನು ದೇಶದ ವಿವಿಧ ಎನ್‌ಸಿಸಿ ವಿಭಾಗಗಳಿಗೆ ನೀಡುತ್ತಿದ್ದು, ಕೆಲವೇ ದಿನಗಳಲ್ಲಿ ಮಂಗಳೂರು ವಿಭಾಗದ ಮುಖ್ಯ ಕಚೇರಿಗೂ ಲಭ್ಯವಾಗಲಿದೆ. ಬೆಳಗಾವಿ ವಿಭಾಗದ ಮುಖ್ಯ ಕಚೇರಿಗೆ ಈಗಾಗಲೇ ಈ ಸೌಲಭ್ಯ ಕಲ್ಪಿಸಲಾಗಿದೆ.

ಈ ಸೌಲಭ್ಯದಿಂದ ಕೆಡೆಟ್‌ಗಳು ಮೈಸೂರಿನಲ್ಲೇ ತರಬೇತಿ ಪಡೆಯ ಬಹುದು. ಈ ಹಿಂದೆ ತರಬೇತಿಗೆ ಬೆಂಗಳೂರಿಗೆ ತೆರಳಬೇಕಿತ್ತು. ಕೆಡೆಟ್‌ಗಳಿಗೆ ಹೆಲಿಕಾಪ್ಟರ್ ಚಾಲನೆ ಮಾಡುವ ತರಬೇತಿ ನೀಡಲು ವಿಭಾಗವು ಏರ್ ಸ್ಕ್ವಾಡ್ರನ್ ಕೂಡ ಹೊಂದಿದೆ. ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಒಟ್ಟು 1,200 ಕೆಡೆಟ್‌ಗಳು ಇದ್ದಾರೆ. ಸದ್ಯದಲ್ಲೇ ತರಬೇತಿ ಆರಂಭವಾಗಲಿದೆ. ಆರಂಭಿಕವಾಗಿ ಹೆಲಿಕಾಪ್ಟರ್ ಚಾಲನೆ ಕಲಿಕೆಗೆ ಈ ಹೆಲಿಕಾಪ್ಟರ್ ಸೂಕ್ತವಾಗಿದೆ.

English summary
tUnder the prestigious Udaan-III project, the government has permitted low-cost airline service to major five cities from Mysuru. Two helicopters have been provided to the Mysuru NCC headquarters for training purposes for Nationals Cadet Corps (NCC) cadets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X